ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು! 8 ಮಂದಿ ವಿರುದ್ಧ FIR | ಏನಿದೆ ಆರೋಪ!

The Doddapet police have registered an FIR in connection with the death of a student of a college in Shivamogga

ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು! 8 ಮಂದಿ ವಿರುದ್ಧ FIR |  ಏನಿದೆ ಆರೋಪ!

SHIVAMOGGA |   Dec 7, 2023 | ಕಟ್ಟಡದ ಮೇಲಿಂದ ಬಿದ್ದ ವಿದ್ಯಾರ್ಥಿನಿ ಸಾವಿನ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಾಗಿದೆ. ಪ್ರತಿಷ್ಟಿತ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ 8 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಕಾಲೇಜಿನಲ್ಲಿ ಹೆಚ್ಚಿನ ಆರೋಪವನ್ನ ಮಾಡಲಾಗಿದೆ. 

ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿಯು ತಮ್ಮ ಮಗಳನ್ನು ಪಿಯು ಕಾಲೇಜಿಗೆ ದಾಖಲು ಮಾಡಿ ಹಾಸ್ಟೆಲ್​ನಲ್ಲಿ ಇದ್ದುಕೊಂಡು ಓದಲು ಬೇಕಾದ ವ್ಯವಸ್ಥೆ ಮಾಡಿದ್ದರು. ಪ್ರತಿ ಭಾನುವಾರ ತಮ್ಮ ತಂದೆ ತಾಯಿಗೆ ಫೋನ್ ಮಾಡುತ್ತಿದ್ದ  ವಿದ್ಯಾರ್ಥಿನಿ ಕಾಲೇಜಿನ ಸಿಬ್ಬಂದಿ ಹಾಸ್ಟೆಲ್​ ಸಿಬ್ಬಂದಿ ತುಂಬಾ ಒತ್ತಡ ಹೇರುತ್ತಿದ್ದು, ನೀನು ಉತ್ತಮ ಅಂಕ ಗಳಿಸದಿದ್ದರೆ ನಮ್ಮ ಕಾಲೇಜಿನ ಹೆಸರು ಹಾಳಾಗುತ್ತದೆ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ಎಫ್​ಐಆರ್​ ನಲ್ಲಿ ಆರೋಪಿಸಲಾಗಿದೆ

READ : ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು! ನಡೆದಿದ್ದರ ಬಗ್ಗೆ ಎಸ್​ಪಿ ಹೇಳಿದ್ದೇನು?

ಘಟನೆ ನಡೆದ ದಿನದ ಎರಡನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದಿರುವುದಾಗಿ ಕಾಲೇಜಿನಿಂದ ಫೋಷಕರಿಗೆ ಕರೆಬಂದಿದ್ದು, ಅಲ್ಲಿ ಐದನೇ ಮಹಡಿಯಿಂದ ಬಿದ್ದಿರುವುದು ಗೊತ್ತಾಗಿದೆ ಎಂದು ಎಫ್ಐಆರ್​ ನಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ. ಸದ್ಯ ಈ ಸಂಬಂಧ : IPC 1860 (U/s-306,34) ಅಡಿಯಲ್ಲಿ ಕೇಸ್ ದಾಖಲಾಗಿದೆ