BREAKING | ತುಂಗಾ ಡ್ಯಾಂ ತುಂಬಲು ನಾಲ್ಕು ಅಡಿಗಳಷ್ಟೆ ಬಾಕಿ | ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ | ಎಚ್ಚರಿಕೆ

Tunga Dam is 4 feet away from reaching its full capacity

BREAKING  | ತುಂಗಾ ಡ್ಯಾಂ ತುಂಬಲು ನಾಲ್ಕು ಅಡಿಗಳಷ್ಟೆ ಬಾಕಿ | ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ | ಎಚ್ಚರಿಕೆ
Tunga Dam , Upper Tunga Project

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆ

ತುಂಗಾ ಮೇಲ್ದಂಡೆ ಯೋಜನೆ ಡ್ಯಾಂ ಪೂರ್ಣ ಮಟ್ಟಕ್ಕೆ ತುಂಬಲು 4 ಅಡಿ ಬಾಕಿಯಿದ್ದು, ಮುಂದೆ ಮುಂಗಾರು ಪ್ರಾರಂಭವಾಗಿ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ನದಿಗೆ ನೀರನ್ನು ಬಿಡುವ ಸಂಭವವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. 

ಅಲ್ಲದೆ  ಈ ಹಿನ್ನೆಲೆಯಲ್ಲಿ  ಡ್ಯಾಂ ಕೆಳಭಾಗ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನ ಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡಬಾರದೆಂದು ಹಾಗೂ ತುಂಬಾ ನದಿಯ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರಲು ತುಂ.ಮೇ.ಯೋ. ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The Tunga Dam is 4 feet away from reaching its full capacity. With the monsoon season approaching, there is a possibility of increased inflow, which may necessitate the release of water into the river at any moment. As a precautionary measure, activities like cattle grazing and other activities in the low-lying areas and river basin should be avoided. Villagers residing in the river basin and low-lying areas are advised to move to safer locations to avoid any untoward incidents.