ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 89 ಹುದ್ದೆಗಳಿಗೆ ನೇರ ನೇಮಕಾತಿ! ಇಲ್ಲಿದೆ ವಿವರ

Shimoga Municipal Corporation recruitment 89 posts Here's the details

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 89 ಹುದ್ದೆಗಳಿಗೆ ನೇರ ನೇಮಕಾತಿ! ಇಲ್ಲಿದೆ ವಿವರ
Shimoga Municipal Corporation recruitment 89 posts

Shivamogga | Feb 1, 2024 |   Shimoga Municipal Corporation recruitment 89 posts  ಶಿವಮೊಗ್ಗ ಮಹಾನಗರಪಾಲಿಕೆ ಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ಪಾಲಿಕೆಯಿಂದ ಈ ಸಂಬಂಧ ಅಧಿಸೂಚನೆ ಹೊರಬಿದ್ದಿದೆ. ಪಾಲಿಕೆಗೆ  ಮಂಜೂರಾದ ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು  ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಶಿವಮೊಗ್ಗ ಮಹಾನಗರಪಾಲಿಕೆಗೆ ಮಂಜೂರಾದ ಸಂಖ್ಯಾತಿರಿಕ್ತ ಹುದ್ದೆಗಳು ಹಾಗೂ ವರ್ಗೀಕರಣ ಈ ಕೆಳಕಂಡಂತ್ತಿರುತ್ತದೆ. 

ವಯೋಮಿತಿ:

  • 01. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977 ರ ನಿಯಮಗಳು ಅಥವಾ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಅಧಿಕಾರಿ & ನೌಕರರ ನೇಮಕಾತಿ) ನಿಯಮಗಳು 2011ರ ನಿಯಮಗಳಲ್ಲಿ ಏನೇ ve, w 9 d d : 171 02 2022(2), 08:02.11.2023 ರಲ್ಲಿ ಹೊರಡಿಸಿದ ಅಧಿಸೂಚನೆ ಜಾರಿಗೆ ಬಂದ ದಿನಾಂಕದಿಂದ ಗರಿಷ್ಠ ವಯೋಮಿತಿ 55 ವರ್ಷಗಳನ್ನು ಮೀರತಕ್ಕದ್ದಲ್ಲ.

  • 02. ಶೈಕ್ಷಣಿಕ/ವಿದ್ಯಾರ್ಹತೆ ದಾಖಲೆಗಳು/ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ಪಡಿತರ ಚೀಟಿ ಅಥವಾ ಪ್ರಾವಿಡೆಂಟ್ ಫಂಡ್ ಅಥವಾ ಇ.ಎಸ್.ಐ. ದಾಖಲಾತಿಗಳನ್ನು ಆಧರಿಸಿ ಅಭ್ಯರ್ಥಿಯ ವಯಸ್ಸನ್ನು ನಿರ್ಧರಿಸಲಾಗುವುದು.

  • 03. ಮೇಲ್ಕಂಡ ಕ್ರ.ಸಂ.01 & 02 ರಲ್ಲಿ ಏನೇ ಹೇಳಿದ್ದರೂ, ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ರಾಜ್ಯದ ಪಾಲಿಕೆಗಳ ಪೌರಕಾರ್ಮಿಕರ ನೇಮಕಾತಿ) (ವಿಶೇಷ) ನಿಯಮಗಳು 2022 ರಲ್ಲಿ ವಯೋಮಿತಿಗೆ ಸಂಬಂಧಿಸಿದಂತೆ ಸರ್ಕಾರವು ಹೊರಡಿಸುವ ಆದೇಶಕ್ಕೆ ಈ ಅಧಿಸೂಚನೆಯು ಒಳಪಟ್ಟಿರುತ್ತದೆ.



ಕನಿಷ್ಠ ವಿದ್ಯಾರ್ಹತೆ

01. ಕನ್ನಡ ಭಾಷೆ ಮಾತನಾಡಲು ಗೊತ್ತಿರಬೇಕು.

ನೇಮಕಾತಿ ಅರ್ಹತೆ / ವಿಧಾನ:

01. ಅಭ್ಯರ್ಥಿಗಳು ಹಾಲಿ ನೇರಪಾವತಿ, ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಆಧಾರದ ಮೇಲೆ ಕನಿಷ್ಠ ಎರಡು

ವರ್ಷಗಳಿಗೆ ಕಡಿಮೆ ಇಲ್ಲದಂತೆ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಿರುವ, ಹಾಗೂ ಈ ನಿಯಮ ಜಾರಿಗೆ ಬಂದ

ದಿನಾಂಕದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಆಧ್ಯತೆಯನ್ನು ನೀಡಲಾಗುವುದು. 

02. ನೇಮಕಾತಿಯಲ್ಲಿ ಹಾಲಿ ನೇರಪಾವತಿ, ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಅನುಕ್ರಮವಾಗಿ ಪರಿಗಣಿಸಲಾಗುವುದು.

03. ಹಾಲಿ ನೇರಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ, ಸಮಾನ ಕೆಲಸಕ್ಕೆ ಸಮಾನ ವೇತನ, ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವವರು 2 ವರ್ಷಗಳಿಗೆ ಮೇಲ್ಪಟ್ಟು ಶಿವಮೊಗ್ಗ ಮಹಾನಗರಪಾಲಿಕೆಯಿಂದ ವೇತನ ಪಡೆದ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.

04. ನೇರಪಾವತಿ ನೌಕರರಿಗೆ ಸಂಬಂಧಿಸಿದಂತೆ ಮಹಾನಗರಪಾಲಿಕೆಯಿಂದ ಪಾವತಿಸಲಾದ ವೇತನ, ಕಾರ್ಮಿಕರ ರಾಜ್ಯ ವಿಮೆ (ಇ.ಎಸ್.ಐ) & ಭವಿಷ್ಯ ನಿಧಿ (ಪಿ.ಎಫ್) & ವೇತನ ಪಡೆದ ಎರಡು ವರ್ಷಗಳ ದಾಖಲಾತಿಗಳನ್ನು ನೇಮಕಾತಿಯಲ್ಲಿ ಆದ್ಯತೆಯ ಮೇಲೆ ಪರಿಗಣಿಸಲಾಗುವುದು.

05. ಎರಡು ಮತ್ತು ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಸೇವಾ ಅವಧಿ ಒಂದೇ ಇದ್ದ ಪಕ್ಷದಲ್ಲಿ, ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ಹೆಚ್ಚು ವಯಸ್ಕರನ್ನು ಕಡಿಮೆ ವಯಸ್ಕರಿಗಿಂತ ಮೇಲೆ ಪರಿಗಣಿಸಲಾಗುವುದು ಹಾಗೂ ಹುಟ್ಟಿದ ದಿನಾಂಕ ಹಾಗೂ ಸೇವಾ ಅವಧಿ ಒಂದೇ ಆಗಿದ್ದಲ್ಲಿ ಲಾಟರಿ ಮುಖಾಂತರ ಪರಿಗಣಿಸಲಾಗುವುದು.

06. ಸಂಖ್ಯಾತಿರಿಕ್ತ ಹುದ್ದೆಗಳನ್ನು ಭರ್ತಿ ಮಾಡಬೇಕಾದರೆ ಸಮತಲ ಮೀಸಲಾತಿಯಡಿ ಕನ್ನಡ ಮಾಧ್ಯಮ, ಗ್ರಾಮೀಣ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆಂದು ಮೀಸಲಾದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಈ ಮೀಸಲಾದ ಹುದ್ದೆಗಳಿಗೆ ಉಳಿದ ಅರ್ಹರಿರುವ ಪೌರಕಾರ್ಮಿಕರುಗಳನ್ನು ಪರಿಗಣಿಸಲಾಗುವುದು.

07. ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಕೆಗೆ ನಿಗಧಿ ಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರತಕ್ಕದ್ದು, ಹಾಗೂ ಮೂಲ ದಾಖಲೆಗಳನ್ನು ದಾಖಲಾತಿ ಪರಿಶೀಲನೆ ಸಮಯದಲ್ಲಿ ಕಡ್ಡಾಯವಾಗಿಹಾಜರುಪಡಿಸತಕ್ಕದ್ದು.

08. ಈ ನೇಮಕಾತಿಯು ಸರ್ಕಾರ/ಪೌರಾಡಳಿತ ನಿರ್ದೇಶನಾಲಯದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶ ಮತ್ತು ಸುತ್ತೋಲೆಗಳ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿದೆ. 

09. ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ ಮಾತ್ರಕ್ಕೆ ಅವರ ನೇಮಕಾತಿಯ ಹಕ್ಕು ಎಂದು ಪರಿಭಾವಿಸತಕ್ಕದ್ದಲ್ಲ.ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

01. ದಿನಾಂಕ:24.01.2024 ರಿಂದ ಅರ್ಜಿಗಳನ್ನು ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗರವರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ.

02. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:22.02.2024 ರೊಳಗೆ ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗರವರ ಕಛೇರಿಯಲ್ಲಿ ಸಂಜೆ 5.30 ರೊಳಗೆ ಸಲ್ಲಿಸತಕ್ಕದ್ದು.

03. ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100.00 ಮತ್ತು ಸಾಮಾನ್ಯ ವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ.200.00 ಗಳ ನಗದು ಚಲನ್ ಮುಖಾಂತರ ಅದನ್ನು ಸಲ್ಲಿಸಿ ಅರ್ಜಿಯನ್ನು ಪಡೆಯತಕ್ಕದ್ದು.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

01. ದಿನಾಂಕ:24.01.2024 ರಿಂದ ಅರ್ಜಿಗಳನ್ನು ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗರವರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ.

02. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:22.02.2024 ರೊಳಗೆ ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗರವರ ಕಛೇರಿಯಲ್ಲಿ ಸಂಜೆ 5.30 ರೊಳಗೆ ಸಲ್ಲಿಸತಕ್ಕದ್ದು.

03. ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪರಿಶಿಷ್ಟ ವಂಗಡ, ಪ್ರವರ್ಗ-1, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100.00 ಮತ್ತು ಸಾಮಾನ್ಯ ವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ.200.00 ಗಳ ನಗದು ಚಲನ್ ಮುಖಾಂತರ ಅದನ್ನು ಸಲ್ಲಿಸಿ ಅರ್ಜಿಯನ್ನು ಪಡೆಯತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗ ರವರ ಕಛೇರಿಯ ದಿನಾಂಕ:22.01.2024ರ ಅಧಿಸೂಚನೆಯನ್ನು ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗ ಹಾಗೂ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದ್ದು ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗ  www.shivamoggacity.mrc.gov.in. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08182-268506.