ಕ್ಯಾಸನೂರು ಫಾರೆಸ್ಟ್ ಡಿಸೀಸ್‌ , ಮಂಗನ ಕಾಯಿಲೆ ಸಂಬಂಧ ಆರೋಗ್ಯ ಇಲಾಖೆಯ ಮಹತ್ವದ ಪ್ರಕಟಣೆ!

Kasanur Forest Disease, Monkey Disease: Health Department's Important Announcement

ಕ್ಯಾಸನೂರು ಫಾರೆಸ್ಟ್ ಡಿಸೀಸ್‌ , ಮಂಗನ ಕಾಯಿಲೆ  ಸಂಬಂಧ ಆರೋಗ್ಯ ಇಲಾಖೆಯ ಮಹತ್ವದ ಪ್ರಕಟಣೆ!
Kasanur Forest Disease, Monkey Disease: Health Department's Important Announcement

Shivamogga | Feb 1, 2024 |   ರಾಜ್ಯದಲ್ಲಿ ಮಂಗನ ಕಾಯಿಲೆ ಕ್ಯಾಸನೂರು ಫಾರೆಸ್ಟ್ ಡಿಸೀಸ್‌- ಕೆಎಫ್‌ಡಿ ನಿಯಂತ್ರಣ ಸಂಬಂಧ ಶಂಕಿತ ಪ್ರಕರಣಗಳನ್ನು ಗುರುತಿಸುವುದರ ಜತೆಗೆ ಅಗತ್ಯ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. 

ಈ ಸಂಬಂಧ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಶಿವಮೊಗ್ಗ, ಉತ್ತರ ಕನ್ನಡ ಸೇರಿ ಕೆಲವೆಡೆ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿರುವುದರಿಂದ ರೋಗದ ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಆರೋಗ್ಯ ಇಲಾಖೆ ಆಯುಕ್ತಡಿ.ರಂದೀಪ್‌ತಿಳಿಸಿದ್ದಾರೆ. 

ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ.ಲಕ್ಷಣವನ್ನು ಆಧರಿಸಿ ಚಿಕಿತ್ಸೆಒದಗಿಸಬೇಕಾಗುತ್ತದೆ. ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ವೈರಾಣುವನ್ನು ಮನುಷ್ಯನಿಗೆ ಹರಡುತ್ತವೆ.

ಈ ವೈರಾಣು ಕಾಣಿಸಿಕೊಂಡವರಿಗೆ ಹಠಾತ್ ಜ್ವರ ಹಾಗೂ ತೀವ್ರ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಕೆಎಫ್‌ಡಿ ಬಾಧಿತ ಜಿಲ್ಲೆಗಳಲ್ಲಿ ಪ್ರಮುಖ  ಜ್ವರ ಪ್ರಕರಣಗಳೂ ಶಂಕಿತ ಕೆಎಫ್‌ಡಿ ಕೇಸುಗಳೇ ಆಗಿರುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಆರಂಭದಲ್ಲೇ ರೋಗ ಪತ್ತೆ, ಸೂಕ್ತ ಚಿಕಿತ್ಸೆ ಮತ್ತು ನಿರ್ವಹಣೆಗೆ ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.