ಶಿವಮೊಗ್ಗ -ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗೆ ಕೋವಿಡ್ ಅಲರ್ಟ್ !ಏನಿದು?

Four districts, including Shivamogga and Mysuru, have been put on Covid alert.

ಶಿವಮೊಗ್ಗ -ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗೆ ಕೋವಿಡ್ ಅಲರ್ಟ್ !ಏನಿದು?

MALENADUTODAY.COM  |SHIVAMOGGA| #KANNADANEWSWEB

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಆರೋಗ್ಯ ಇಲಾಖೆಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕೊರೋನಾ ನಿಯಂತ್ರಿಸಲು ಪರೀಕ್ಷೆ, ಪತ್ತೆ, ನಿಗಾ, ಚಿಕಿತ್ಸೆ ಹಾಗೂ ಲಸಿಕೆಗೆ ಒತ್ತು ಕೊಡುವಂತೆ ಸೂಚಿಸಿದ್ದಾರೆ. 

READ / ಸಿಟಿಯಲ್ಲಿಯೇ ದರೋಡೆ! ಸುಲಿಗೆ/ ಒಬ್ಬನನ್ನೆ ಮೂರು ಸಲ ರಾಬರಿ ಮಾಡಿದ ದುಷ್ಕರ್ಮಿಗಳು!/ 24 ಗಂಟೆಯ ಆಪರೇಷನ್

ಕಳೆದ ಕೆಲವು ವಾರಗಳಲ್ಲಿ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ವರದಿಯಾಗ್ತಿವೆ ಎಂಬ ಮಾಹಿತಿಯಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಸೂಚನೆ ನೀಡಿದೆ. ಕಳೆದ 5 ತಿಂಗಳಿಂದ ಕೊರೋನಾ ಸ್ಥಿತಿ ನಿಯಂತ್ರಣದಲ್ಲಿತ್ತು. ಆದರೆ, ಮಾರ್ಚ್​ 8 ರಿಂದ ಕಳೆದ ಎರಡು ವಾರದ ಅವಧಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಸರಾಸರಿ ಪಾಸಿಟಿ ವಿಟಿ ದರವು ಶೇ.2.77 ಕ್ಕೆ ಹೆಚ್ಚಾಗುತ್ತಿದೆಯಂತೆ. ದೇಶದ ಸರಾಸರಿ ಪಾಸಿಟಿವಿಟಿ ದರ ಶೇ.0.61 ಮಾತ್ರ ಇದೆ.ಕೊರೋನಾ ಹೆಚ್ಚಾಗುತ್ತಿರುವ ನಾಲ್ಕು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್​ ಸ್ಟೇಟ್ ಮೀಡಿಯಾಗಳಿಗೆ ತಿಳಿಸಿದ್ದಾರೆ. 

ಕ್ರಮಗಳು ಏನು? 

  • ನಿಗದಿತ ಗುರಿಯಂತೆ ಕೊರೋನಾ ಪರೀಕ್ಷೆಗಳನ್ನು ನಡೆಸಬೇಕು.
  • ಕ್ಲಸ್ಟರ್ ಮಾದರಿಯಲ್ಲಿ ಹೊಸದಾಗಿ ಹಾಗೂ ವರದಿಯಾಗುವ ಸೋಂಕು ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು.
  • ಕೊರೋನಾ ಸೋ೦ಕು ಹರಡುವುದನ್ನು ತಡೆಗಟ್ಟಲು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಎಚ್ಚರವಹಿಸಬೇಕು.
  • ಐಎಲ್‌ಐ (ವಿಷಮ ಶೀತ ಜ್ವರ) ಹಾಗೂ ಸಾರಿ (ತೀವ್ರ ಉಸಿರಾಟ ಸಮಸ್ಯೆ ) ಪ್ರಕರಣಗಳನ್ನು ಪತ್ತೆಹಚ್ಚಬೇಕು.
  • ಅಂತರಾಷ್ಟ್ರೀಯ ಪ್ರಯಾಣಿಕರು, ಸ್ಥಳೀ ಯವಾಗಿ ವರದಿಯಾಗುವ ಕ್ಲಸ್ಟರ್ ಪ್ರಕರ ಣಗಳಲ್ಲಿ ಸಂಗ್ರಹಿಸಲಾಗುವ ಮಾದರಿ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸ ಬೇಕು.
  • ಅರ್ಹರಿಗೆ ಮುಂಜಾಗ್ರತಾ ಡೋಸ್ ಲಸಿಕೆ ಹೆಚ್ಚಿಸಬೇಕು.
  • ಜನಸಂದಣಿ ಇರುವ ಪ್ರದೇಶದಲ್ಲಿ ಕೊರೋನಾ ಮುನ್ನೆ ಚ್ಚರಿಕೆ ಪಾಲನೆ ಖಚಿತಪಡಿಸಿಕೊಳ್ಳಬೇಕು'

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews