MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿ 20 ದಿನಗಳು ಕಳೆದಿದೆ, ಇನ್ನೂ ಕೂಡ ವಿಮಾನ ಸಂಚಾರ ಆರಂಭವಾಗಿಲ್ಲ ಎಂಬ ಮಾತು ಆರೋಪದ ರೂಪದಲ್ಲಿಯೇ ಕೇಳಿಬರುತ್ತಿತ್ತು. ಅಲ್ಲದೆ, ಪ್ರತಿಪಕ್ಷಗಳು ಟೀಕೆ ಮಾಡಲು ಸಹ ಆರಂಭಿಸಿದ್ದರು.
READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್ ಸತ್ಯ ಇಲ್ಲಿದೆ
ಇದರ ನಡುವೆ, ಸಂಸದರ ರಾಘವೇಂದ್ರ ಮತ್ತೊಮ್ಮೆ ಶಿವಮೊಗ್ಗ ಏರ್ಪೋರ್ಟ್ ವಿಚಾರವಾಗಿ ಮಾತನಾಡಿದ್ದಾರೆ. ಅಲ್ಲದೆ ಅನುಮಾನಗಳಿಗೆ ಉತ್ತರ ಕೊಟ್ಟಿದ್ದಾರೆ. ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡಿದ ಸಂಸದ ಬಿವೈ ರಾಘವೇಂದ್ರರವರು, ಉಡಾನ್ ಯೋಜನೆ ಮೂಲಕ ಬಡವರು ವಿಮಾನದಲ್ಲಿ ಓಡಾಡಬೇಕು ಎಂಬ ಉದ್ದೇಶವನ್ನ ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಸಬ್ಸಿಡಿ ವಿತರಣೆಯ ವಿಚಾರ, ಕೇಂದ್ರ ಆರ್ಥಿಕ ಇಲಾಖೆಯಲ್ಲಿ ಕ್ಲೀಯರ್ ಆಗಿದೆ. ಚುನಾವಣೆ ಕೋಡ್ ಆಫ್ ಕಂಡಕ್ಟ್ ಬರುವುದಕ್ಕೂ ಮೊದಲೇ ಅದಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಸಿಗಬೇಕಿತ್ತು ಹಾಗೂ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ ಕೆಲವೊಂದು ಟೆಕ್ನಿಕಲ್ ಪ್ರಾಬ್ಲಮ್ನಿಂದಾಗಿ ವಿಮಾನ ಸಂಚಾರ ತಡವಾಗಿದೆ. ಹಾಗಂತ ಆಂತಕ ಪಡಬೇಕಿಲ್ಲ, ಇನ್ನೂ 15-20 ದಿನಗಳಲ್ಲಿ ವಿಮಾನ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ಮೇಲೆ ಶಿವಮೊಗ್ಗದಲ್ಲಿ ನೂತನ ರೈಲ್ವೆ ಹಳಿ ನಿರ್ಮಾಣ ಕಾರ್ಯ ಆಗಿರಲಿಲ್ಲ. ಆದರೆ ನಿಮ್ಮ ಸಂಸದನಾಗಿ ರಾಘವೇಂದ್ರ ಆಯ್ಕೆಯಾದ ಮೇಲೆ ಕೇಂದ್ರ ಸರ್ಕಾರದಿಂದ 250 ಕೋಟಿ ವೆಚ್ಚಮಾಡಿ, ಸಾಗರದವರೆಗೂ ಮೀಟರ್ ಗೇಜ್ ಹಳಿಯನ್ನ ಬ್ರಾಡ್ಗೇಜ್ ಮಾಡಲಾಗಿದೆ ಹಾಗಾಗಿ ಎಲ್ಲಾ ಟ್ರೈನ್ಗಳು ತಾಳಗುಪ್ಪದವರೆಗೂ ಹೋಗುತ್ತಿದೆ ಎಂದು ತಮ್ಮ ಕೆಲಸದ ಬಗ್ಗೆ ವಿವರಿಸಿದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga Agumbe Tiger, ಶಿವಮೊಗ್ಗ ವಿಮಾನ ನಿಲ್ದಾಣ,ಶಿವಮೊಗ್ಗ,ಶಿವಮೊಗ್ಗ ಏರ್ಪೋರ್ಟ್,ರಾಷ್ಟ್ರಕವಿ ಕುವೆಂಪು,tv9 kannada,shivamoggaairport,airport,bjp,karnatakagovernment,shivamogga,shivamogga airport,shivamogga airport inauguration,shivamogga new airport,pm modi inaugurate shivamogga airport,shivamogga mp,shivamogga airport,reacts on shivamogga airport,shivamogga airport live,new airport,shivamogga airport project,shivamogga airport latest updates