Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಭಯಂಕರ ಹುಲಿಯೊಂದು ಓಡಾಡ್ತಿದೆ ಕಣ್ರಿ, ಯಾರೋ ದಾರಿಯಲ್ಲಿ ಹೋಗೋರು ವಿಡಿಯೋ ಮಾಡ್ಯಾರೆ,, ಕಂಡ್ರಾ ವಿಡಿಯೋನಾ? ಹೀಗೆ ಮೂರು ದಿನಗಳಿಂದ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ. ಮಲೆನಾಡ ಮಂದಿಯ ಸೋಶಿಯಲ್ ಮೀಡಿಯಾ ಅಕೌಂಟ್​ಗಳಲ್ಲಿ ಹಾಗೂ ಮಲೆನಾಡಿನ ವಾಟ್ಸ್ಯಾಪ್​ಗಳಲ್ಲಿ ಆಗುಂಬೆಯಲ್ಲಿ ಕಾಣಿಸಿದ ಹುಲಿರಾಯ ಎಂಬ ಹೆಡ್ಡಿಂಗ್​ನೊಂದಿಗೆ ವಿಡಿಯೋ ಪ್ರದರ್ಶನಗೊಳ್ತಿದೆ. ಸದ್ಯ ಈ ವಿಡಿಯೋ ನಿಜವಾದದ್ದಾ? ವಿಡಿಯೋದಲ್ಲಿರುವ ಹುಲಿ ಶಿವಮೊಗ್ಗದ ಆಗುಂಬೆಯಲ್ಲಿ ಕಾಣಿಸಿಕೊಂಡಿದ್ದಾ ಎಂಬುದು ಪ್ರಶ್ನೆ. ಇದಕ್ಕೆ ಉತ್ತರ ನಾವು ಕೊಡುತ್ತೇವೆ. 

ಅಸಲಿಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ವ್ಯಾಘ್ರ ಜಂಪಿಂಗ್​ನ ವಿಡಿಯೋ ಆಗುಂಬೆಯದ್ದಲ್ಲ, ಆಗುಂಬೆಯ ಘಾಟಿಯ ಉಡುಪಿ ವ್ಯಾಪ್ತಿಗೆ ಬರುವ ತಿರುವೊಂದರಲ್ಲಿ ಈ ಹುಲಿ ಕಾಣಿಸಿಕೊಂಡಿದೆ ಎಂದು ಹಲವೆಡೆ ಬರೆಯಲಾಗಿದೆ. ಆದರೆ ಆಗುಂಬೆ ಘಾಟಿ ಯಾವ ಹೇರ್ ಪಿನ್  ಕಟ್​ನಲ್ಲಿಯು ಈ ಹುಲಿ ಕಾಣಿಸಿಕೊಂಡಿಲ್ಲ. ಹಾಗಾದರೆ ವಿಡಿಯೋ ಸುಳ್ಳಾ? ಈ ಪ್ರಶ್ನೆಗೆ ವಿಡಿಯೋ ನಿಜವಾದುದ್ದು ಆದರೆ ಆಗುಂಬೆಯದ್ದಲ್ಲ ಎಂಬುದು ಉತ್ತರ. 

ಹಾಗಾದರೆ ವಿಡಿಯೋ ಎಲ್ಲಿಯದ್ದು? 

ಅಸಲಿಗೆ ಈ ವಿಡಿಯೋ ತಮಿಳುನಾಡಿನದ್ದು ಅಲ್ಲಿಯ “Valparai”  ಎಂಬ ಸ್ಥಳದಲ್ಲಿ ಕಾಣ ಸಿಕ್ಕಿರುವ ಹುಲಿ! ಕಳೆದ ವರ್ಷದ ಜನವರಿ ಮೂವತ್ತನೇ ತಾರೀಖು ಈ ಸಂಬಂಧ ಮೊದಲ ಪೋಸ್ಟ್​ನ್ನು ಇನ್​ಸ್ಟಾಗ್ರಾಮ್​ನಲ್ಲಿ ಸ್ಫೂರ್ತಿ ಗುಪ್ತಾ ಎಂಬವರು ಪೋಸ್ಟ್​ ಮಾಡಿದ್ರು. ಆನಂತರ ಈ ವಿಡಿಯೋ ಸಾಕಷ್ಟು ಸಲ ಹಾಗೂ ಸಾಕಷ್ಟು ರೀತಿಯಲ್ಲಿ ವೈರಲ್ ಆಗುತ್ತಿದೆ. ಕೆಲವರು ಮಹಾರಾಷ್ಟ್ರ ಎಂದರೆ, ಮತ್ತೆ ಕೆಲವರು ಮಧ್ಯಪ್ರದೇಶ, ಇನ್ನೂ ಆಂಧ್ರ ತೆಲಂಗಾಣದಲ್ಲಿಯು ವಿಡಿಯೋ ಅಲ್ಲಿಯದ್ದೆ ಎಂಬಂತೆ ವೈರಲ್ ಆಗಿದೆ. ಇದೀಗ ಆಗುಂಬೆಯ ಹುಲಿರಾಯ ಎಂಬಂತೆ ವಿಡಿಯೋ ಹರಿದಾಡುತ್ತಿದೆ. 

Shivamogga Malenadu Today

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga Agumbe Tiger, Tiger spotted at Agumbe Ghat, Tiger at Udupi Ghat, Viral Video Valparai Tigere Video, Tiger Video in Shivamogga.  ಆಗುಂಬೆ ಹುಲಿ, ಆಗುಂಬೆ ಘಾಟಿಯಲ್ಲಿ ಹುಲಿ ಪ್ರತ್ಯಕ್ಷ , ಉಡುಪಿ ಘಾಟಿಯಲ್ಲಿ ಹುಲಿ , ವೈರಲ್​ ವಿಡಿಯೋ Valparai tigere video , ಶಿವಮೊಗ್ಗದಲ್ಲಿ ಹುಲಿ ವಿಡಿಯೋ,  

Leave a Comment