ಅಮ್ಮನ ಮನೆಗೆ ಕನ್ನ ಹಾಕಿದ ಮಗ, ಹೌದು, ಓದುತ್ತಿರುವುದು ಸರಿಯಾಗಿಯೇ ಇದೆ. ಇತ್ತೀಚೆಗೆ ಶಿರಾಳಕೊಪ್ಪದಲ್ಲಿ ತಂದೆಯನ್ನು ಕೊಲ್ಲಿಸಿದ ಮಕ್ಕಳು ಎಂಬ ಸುದ್ದಿ ಓದಿರ್ತೀರಿ. ಇದೀಗ ತನ್ನ ತಾಯಿ ಇಲ್ಲದಿದ್ದಾಗ, ಅವಳ ಮನೆಗೆ ನುಗ್ಗಿ ಚಿನ್ನ ಕದ್ದು ಹೋಗಿದ್ದ ಮಗ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನು ಸಹ ಓದಿ : ಜೆಡಿಎಸ್ನಲ್ಲಿ ಸಿದ್ದರಾಮಯ್ಯ ಆಪರೇಷನ್/ ವೈಎಸ್ವಿ ದತ್ತ ಸದ್ಯದಲ್ಲಿಯೇ ಕಾಂಗ್ರೆಸ್ಗೆ
ಈ ಸಂಬಂಧ ತುಂಗಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಅಂದರ್ ಮಾಡಿದ್ದಾರೆ. ಕಳೆದ ಆರನೇ ತಾರೀಖು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ನಗರ ಬಡಾವಣೆಯಲ್ಲಿರುವ ನಿವಾಸಿಯೊಬ್ಬರ ಮನೆಯಲ್ಲಿ ಚಿನ್ನ ಕಳುವಾಗಿತ್ತು. ಈ ಸಂಬಂಧ ಮಹಿಳೆ ನೀಡಿದ್ದ ದೂರಿನನ್ವಯ ಐಪಿಸಿ 380 ಐಪಿಸಿ ರೀತ್ಯಾ ಮನೆಗಳ್ಳತನ ಪ್ರಕರಣ ದಾಖಲಾಗಿತ್ತು.
ಇದನ್ನು ಸಹ ಓದಿ : bhadravati BREAKING NEWS / ಭದ್ರಾವತಿ ರೌಡಿಗಳ ಮನೆಗಳ ಮೇಲೆ ಪೊಲಿಸರ ರೇಡ್
ಸದ್ಯ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯೇ ತನ್ನ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗ ಗಿರೀಶ್ನನ್ನು ಕರೆತಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೇ ಆತ ಕಳ್ಳತನ ಮಾಡಿರುವುದನ್ನ ಬಾಯಿಟ್ಟಿದ್ಧಾನೆ. ಸದ್ಯ ಆತನಿಂದ ಎರಡುವರೆ ಲಕ್ಷ ಮೌಲ್ಯ ಆರವತ್ತು ಗ್ರಾಂ ಚಿನ್ನವನ್ನು ಜಪ್ತಿ ಮಾಡಿರುವ ಪೊಲೀಸರು ಆತನನ್ನ ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp
