ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶದಲ್ಲಿ ಗಮನ ಸೆಳೆದ ತುಮಕೂರಿನ ಜೋಮೊಟೋ ಬಾಯ್‌

Jomoto Boy from Tumkur who attracted attention in Shimoga Lok Sabha constituency results

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶದಲ್ಲಿ ಗಮನ ಸೆಳೆದ ತುಮಕೂರಿನ ಜೋಮೊಟೋ ಬಾಯ್‌
Jomoto Boy from Tumkur , Shimoga Lok Sabha constituency results

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆ

ಶಿವಮೊಗ್ಗ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಈ ಸಲ ಕೆಎಸ್‌ ಈಶ್ವರಪ್ಪನವರು ತೀವ್ರ ಕುತೂಹಲ ಮೂಡಿಸ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಮತದಾರ ಅವರಿಗೆ ನಿರೀಕ್ಷಿತ ಮತಗಳನ್ನ ನೀಡಿಲ್ಲ. 

ಈ ನಡುವೆ ಮತ್ತೊಬ್ಬ ಅಭ್ಯರ್ಥಿ ಫಲಿತಾಂಶದಲ್ಲಿ ಗಮನಾರ್ಹವಾಗಿ ಕಾಣಿಸುತ್ತಿದ್ದಾರೆ. ಜೊಮ್ಯೋಟೋದಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.  ತುಮಕೂರಿನ  Zomoto ಪುಡ್‌ ಡೆಲಿವರಿ ಬಾಯ್‌ ಬಂಡಿ ರಂಗನಾಥ ಕಣಕ್ಕಿಳಿದಿದ್ದರು. ಚುನಾವಣೆ ವೇಳೆ ಅವರ ಬಳಿ ಸುಮಾರು ಐವತ್ತು ಸಾವಿರ ರೂಪಾಯಿಗಳು ನಗದಿದ್ದು, ಆಸ್ತಿ ಕಾಲಂನಲ್ಲಿ ಇವರು ಏನೂ ಇಲ್ಲ ಎಂದು ಬರೆದುಕೊಂಡಿದ್ದರು.

ಮತ ಎಣಿಕೆಯಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದು, 4557 ( -475289) ಮತಗಳನ್ನು  ಪಡೆದಿದ್ದಾರೆ. ರಾಘವೇಂದ್ರ , ಗೀತಾ ಶಿವರಾಜ್‌ ಕುಮಾರ್‌ ಹಾಗೂ ಈಶ್ವರಪ್ಪನವರು ಬಿಟ್ಟರೆ ಇದುವರೆಗಿನ ಮತ ಎಣಿಕೆಯಲ್ಲಿ ಬಂಡಿ ರಂಗನಾಥ್‌ ಉಳಿದವರಿಗಿಂತಲೂ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಅವರು ಗಮನ ಸೆಳೆದಿದ್ದಾರೆ. 

The Lok Sabha election results in Shivamogga have been surprising. K S Eshwarappa, who was expected to garner significant votes, did not perform as anticipated.