ಬಿಜೆಪಿಗೆ ಗುಡ್ ಬೈ ಹೇಳಿದ ಆಯನೂರು ಮಂಜುನಾಥ್ ! ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಸ್ಪರ್ಧೆಗೆ ಪಂಥಾಹ್ವಾನ ! ಚುನಾವಣೆಯೊಳಗೆ ಮತ್ತೆರೆಡು ಗಲಾಟೆಗೆ ಸಿದ್ದತೆ ನಡೆದಿದೆ ಎಂದಿದ್ದೇಕೆ ಆಯಯನೂರ್? ಗಲಾಟೆಯ ರುವಾರಿ ಯಾರು ಎಂದು ಸುಳಿವು ಕೊಟ್ಟ ಆಯನೂರ್ !

Ayanur Manjunath announces quitting BJP Ayanur Manjunath announces that he will contest the upcoming assembly elections.

ಬಿಜೆಪಿಗೆ ಗುಡ್ ಬೈ ಹೇಳಿದ ಆಯನೂರು ಮಂಜುನಾಥ್ ! ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಸ್ಪರ್ಧೆಗೆ ಪಂಥಾಹ್ವಾನ ! ಚುನಾವಣೆಯೊಳಗೆ ಮತ್ತೆರೆಡು ಗಲಾಟೆಗೆ ಸಿದ್ದತೆ ನಡೆದಿದೆ ಎಂದಿದ್ದೇಕೆ ಆಯಯನೂರ್?  ಗಲಾಟೆಯ ರುವಾರಿ ಯಾರು ಎಂದು ಸುಳಿವು ಕೊಟ್ಟ ಆಯನೂರ್ !

ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಬಹಳ ದಿನಗಳಿಂದ ತೀವೃ ಕುತುಹಲ ಕೆರಳಿಸಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಾರ್ಕಿಕ ಅಂತ್ಯ ಕಂಡಿದೆ. ಆಯನೂರು ಮಂಜುನಾಥ್ ಕೊನೆಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಶಿವಮೊಗ್ಗದ ಮಥುರಾ ಪ್ಯಾರಡೈಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರ ಗೋಷ್ಠಿಯ ಹೈಲೈಟ್ಸ್ ಇಲ್ಲಿದೆ.

ನಿನ್ನನ್ನೇ ಲೆಕ್ಕಕ್ಕೆ ಇಟ್ಟಿಲ್ಲ ಎಂದ ಮೇಲೆ ಅವನ್ಯಾವ ಲೆಕ್ಕ-ಕೆರಳಿದ ಆಯನೂರು ಮಂಜುನಾಥ್

ಪತ್ರಿಕಾ ಗೋಷ್ಠಿಯಲ್ಲಿ ಆಯನೂರು ಮಂಜುನಾಥ್ ಶಾಸಕ ಕೆ.ಎಸ್ ಈಶ್ವರಪ್ಪ ಹಾಗು ಪುತ್ರ ಕೆಇ ಕಾಂತೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಪ್ರಸ್ಥುತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾನೆ. ನನ್ನ ನಿಲುವುಗಳನ್ನು ಈಗಾಗಲೇ ಸಾರ್ವಜನಿಕವಾಗಿ ಪ್ರಚುರ ಪಡಿಸಿದ್ದೇನೆ. ನನ್ನ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದೇನೆ. ನನಗೆ ಟಿಕೇಟ್ ಸಿಗುವ ಭರವಸೆಗಳಿಲ್ಲ. ಅವರವರ ಮಕ್ಕಳಿಗೆ ಟಿಕೇಟ್ ಸಿಗುವ ಸಾಧ್ಯತೆಗಳಿವೆ. ಈಶ್ವರಪ್ಪನವರು ಪತ್ರಿಕಾಗೋಷ್ಠಿಯೊಂದರಲ್ಲಿ ನಿನ್ನನ್ನೇ ಲೆಕ್ಕಕ್ಕೆ ಇಟ್ಟಿಲ್ಲ ಎಂದ ಮೇಲೆ ಅವನ್ಯಾವ ಲೆಕ್ಕ ಎಂದು ಹೇಳಿದ್ದಾರೆ. ಅದನ್ನು ನಾನು ಸವಾಲಿಗೆ ಸ್ವಿಕಾರ ಮಾಡಿದ್ದು, ಚುನಾವಣೆಗೆ ನಿಲ್ಲುತ್ತೇನೆ. ಅವರು ತಮ್ಮ ಎಲ್ಲಾ ಪ್ರಭಾವ ಬಳಸಿ ಪಕ್ಷದಲ್ಲಿ ಟಿಕೆಟ್ ಪಡೆದು ಚುನಾವಣೆಗೆ ಬರಲಿ.. ಟಿಕೆಟ್ ನೀಡಲಿಲ್ಲವೆಂದು ಪಲಾಯನ ಮಾಡಬಾರದು. ಈಶ್ವರಪ್ಪನವರು ಯಾರ ಬಗ್ಗೆಯೂ ಗೌರವವಾಗಿ ನಡೆದುಕೊಂಡಿರುವ ಉದಾಹರಣೆ ಇಲ್ಲ. ಎದುರಾಳಿ ಸ್ಪರ್ಧಿಯಾನ್ನ ಅಹ್ವಾನ ಮಾಡಿದ್ದೇನೆ, ಅಲ್ಲಿ ವೀರಾಧಿವೀರರು ಇದ್ದಾರೆ. ಬೇರೆಯವರ ಬಗ್ಗೆ ಯಕಷ್ಚಿತ್ ಆಗಿ ಮಾತನಾಡುವವರು ಇದ್ದಾರೆ. ಈಶ್ವರಪ್ಪ ನನಗೆ ಅವನ್ಯಾರು ಲೆಕ್ಕ ಎಂದಿದ್ದಾರೆ. ಯಡಿಯೂರಪ್ಪನವರತಂಹ ನಾಯಕರನ್ನು ಧಿಕ್ಕರಿಸುವ ಮನುಷ್ಯರು ಇದ್ದಾರೆ.. ನಾನು ಅವರಿಗೆ ತೃಣಕ್ಕೆ ಸಮಾನ. ಈಶ್ವರಪ್ಪನವರು ದುರಂಹಕಾರದ ಮಾತುಗಳನ್ನು ಆಡಬಾರದು, ಸಾರ್ವಜನಿಕರಲ್ಲಿ  ಕ್ಷೇಮೆಯಾಚಿಸಬೇಕು.ಈಶ್ವರಪ್ಪನವರು ಬರುತ್ತಾರೋ, ಅವರ ಮಗನನ್ನ ಕರೆದುಕೊಂಡು ಬರ್ತಾರೋ ಬರಲಿ. ನಾನು ರಾಜಿನಾಮೆ ನೀಡಿದ ಬಳಿಕವೇ ಮುಂದಿನ ಪಕ್ಷ ಯಾವುದೆಂದು ತೀರ್ಮಾನವಾಗುತ್ತೆ.

 

 

ಮಗನನ್ನು ಸರ್ವ ಶ್ರೇಷ್ಠನನ್ನಾಗಿ ಮಾಡಿ ಅವನಿಗೆ ಟಿಕೆಟ್ ಕೇಳಿದ್ದಾರೆ

ಈಶ್ವರಪ್ಪನವರು ಈ ಬಾರಿ ತಮ್ಮ‌ ಮಗನಿಗೆ ಟಿಕೆಟ್ ಕೇಳಿದ್ದಾರೆ.. ಅವರಿಬ್ಬರಿಗೂ ಸ್ವಾಗತ. ಈಶ್ವರಪ್ಪನವರು, ಕೇಲವೆ ಕೇಲವು ಮತಗಳಿಂದ ಸೋತ ರುದ್ರೆಗೌಡರಿಗಾಗಲಿ, ಸಿದ್ರಾಮಣ್ಣರಿಗಾಗಲಿ, ಭಾನು ಪ್ರಕಾಶ್ ಗಾಗಲಿ ಚನ್ನ ಬಸಪ್ಪನವರಿಗಾಗಲಿ ಟಿಕೇಟ್ ಕೇಳಲಿಲ್ಲ. ನಿಮ್ಮ ಮಗನನ್ನು ಸರ್ವ ಶ್ರೇಷ್ಠನನ್ನಾಗಿ ಮಾಡಿ ಅವನಿಗೆ ಟಿಕೆಟ್ ಕೇಳಿದ್ದಾರೆ. ನಿಮಗೆ ಹಾಗೂ ನಿಮ್ಮ ಮಗನಿಗೆ  ನೇರವಾಗಿ ಚುನಾವಣೆಗೆ  ಅಹ್ವಾನ 24 ವರ್ಷದ ಶಾಸಕ ಅವದಿಯಲ್ಲಿ ನನ್ನ ಮೇಲೆ ಯಾವ ಆರೋಪಗಳು ಇಲ್ಲ. ಈಶ್ವರಪ್ಪನವರ ವಿರುದ್ಧ ಸಾಕಷ್ಟು ಆರೋಪಗಳಿವೆ ಅವರ ವಿರುದ್ಧ ರಾಜ್ಯಪಾಲರಿಗೆ ದೂರುಗಳು ಹೋಗಿವೆ ಎಂದು ಅಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಕೆಎಸ್ ಈಶ್ವರಪ್ಪನವರಿಗೆ ಅಧಿಕಾರದ ಹಪಹಪಿತನವಿದೆ..ಅಧಿಕಾರದ ಮದದಿಂದ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಕಲಾಪಕ್ಕೆ ಗೈರು ಆಗಿದ್ದರು. ಸಂವಿಧಾನವನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

 

ಕೆಮ್ಮಣ್ಣಿಗೆ ಬಿದ್ದ ಮೇಲೆ ಎಲ್ಲಾ ಲಂಗೂಟಿ ಬಣ್ಣವೂ ಒಂದೇ ಆಗಿರುತ್ತೆ

ಈ ಬಾರಿ ಚುನಾವಣೆಯಲ್ಲಿ  ಕಣಕ್ಕಿಳಿಯುವುದು ಪಕ್ಕ. ವಿಧಾನಪರಿಷತ್ ಶಾಸಕ ಸ್ಥಾನಕ್ಕೆ ಸದ್ಯದಲ್ಲೇ ರಾಜಿನಾಮೆ ನೀಡುತ್ತೇನೆ.

ಬರುವ ಮಾರಿಹಬ್ಬದಲ್ಲಿ ಕುಸ್ತಿ ಮಾಡಬೇಕು ಅಂದುಕೊಂಡಿದ್ದೇನೆ. ನೀವು ಪೈಲ್ವಾನನನ್ನು ನೋಡಿ, ಪೈಲ್ವಾನನ ಲಂಗೋಟಿ ಬಣ್ಣವನ್ನು ನೋಡಿಬೇಡಿ. ನಾನು ಪಲ್ವಾನನಾಗಿ ಬರುತ್ತೇನೆ. ಕೆಮ್ಮಣಿಗೆ ಬಿದ್ದ ಮೇಲೆ ಎಲ್ಲಾ ಲಂಗೋಟಿಯ ಬಣ್ಣವೂ ಒಂದೇ ಆಗಿರುತ್ತೆ. ಕಾಂಗ್ರೆಸ್ ನವರು ಜೆಡಿಎಸ್ ನವರು ಲಂಗೋಟಿ ಕೊಡ್ತಾರೋ ಗೊತ್ತಿಲ್ಲ, ನನ್ನದೆ ಆದ ಲಂಗೋಟಿ ಇದೆ ತಾನೆ. ಎಂದು ಪ್ರತಿಪಕ್ಷದ ಮುಖಂಡರಿಗೆ ಟಾಂಗ್ ನೀಡಿದ್ದಾರೆ.

 

ನಾನು ಯಾವುದೇ ಪ್ರಚೋದನೆ ಮಾಡಿ ಗಲಾಟೆ ಎಬ್ಬಿಸಿ ಚುನಾವಣೆಗೆ ಬಂದಿಲ್ಲ

ನಾನು ಯಾವುದೇ ಪ್ರಚೋದನೆ ಮಾಡಿ ಗಲಾಟೆ ಎಬ್ಬಿಸಿ ಚುನಾವಣೆಗೆ ಬಂದಿಲ್ಲ.. ಅವರಿಗೆ ಅದೊಂದೆ ದಾರಿ ಇರೋದು ಎಂದು ಆಯನೂರು, ಪರೋಕ್ಷವಾಗಿ ಈಶ್ವರಪ್ಪರ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ. ಶಿವಮೊಗ್ಗದ ಹಿಂದೂ ಮುಸ್ಲಿಂ ಜನತೆಗೆ ಮನವಿ ಮಾಡುತ್ತೇನೆ ಬಹಳ ಸಾವಧಾನದಿಂದ ತಾಳ್ಮೆ ಸಹನೆಯಿಂದ ಇರಿ. ಅವರ ತಂತ್ರ ಷಡ್ಯಂತ್ರ ನನಗೆ ಗೊತ್ತಿದೆ.. ಸದ್ಯದಲ್ಲಿ ಯಾವುದಾದರೂ ದೇವಸ್ಥಾನ ಹಾಗೂ ಪ್ರಾರ್ಥನ ಮಂದಿರ  ಮಲೀನವಾಗಬಹುದು. ಅದನ್ನು ಬೇರೆಯವರು ಮಾಡಬೇಕೆಂದು ಇಲ್ಲ.. ಈಗ ಚುನಾವಣೆಯಲ್ಲಿ ಯಾರು ಗೆಲ್ಲಬೇಕೆಂದು ಕೊಂಡಿದ್ದಾರೆ ಅವರೇ ಮಾಡಿಸುತ್ತಾರೆ. ಉದ್ರೇಕದ ಘಟನೆಗಳಿಗೆ ಅವಕಾಶ ಸಿಗಬಹುದು, ಅದನ್ನು ಈಶ್ವರಪ್ಪನವರು ಮಾಡಿಸುತ್ತಾರೆ ಎಂದು ಹೇಳಲ್ಲ. ಯಾರಿಗೆ ಆಸಕ್ತಿ ಇದೆ ಅವರು ಮಾಡಿಸುತ್ತಾರೆ. ಯಾವುದೇ ಸಂದರ್ಭದಲ್ಲಿಯೂ  ಹಿಂದೂ ಮುಸ್ಲಿಂ ಬಾಂಧವರು ಸಂಯಮ ಕಳೆದುಕೊಳ್ಳಬಾರದು. ಪೊಲೀಸರಿಗೆ ವಿನಂತಿ ಮಾಡುತ್ತೇನೆ. ಮೈ ಮರೆಯಬೇಡಿ ಚುನಾವಣೆ ಒಳಗೆ ಇತಂಹ ಒಂದರೆಡು ಘಟನೆ  ನಡೆಯುವ ಸಾಧ್ಯತೆ ಇದೆ. ಇತಂಹ ಘಟನೆಗಳನ್ನ ವಿರೋಧಿಸುವ ಹಾಗೂ ಶಾಂತಿ ಪ್ರಿಯನಾಗಿರುವ ನನಗೆ ಬಡವರು ಮತ್ತು ಕಾರ್ಯಕರ್ತರು ನನ್ನ ಪರವಾಗಿದ್ದಾರೆ. ಸದ್ಯದಲ್ಲಿ ರಾಜಿನಾಮೆ ಕೂಡುತ್ತೇನೆ. ಅದಕ್ಕೂ ಮುಂಚೆ ನನ್ನನ್ನು ಗೆಲ್ಲಿಸಿದ ಪಕ್ಷ ಹಾಗೂ ಕಾರ್ಯಕರ್ತರಿಗೆ ಋಣಿಯಾಗಿರುತ್ತೇನೆ.

 

ಪಕ್ಷದ ನನ್ನ ಕಾರ್ಯಕರ್ತರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ನೀವು ನಾಯಕರಾಗಿ ಬೆಳೆಯಿರಿ

ಪಕ್ಷದ ಬಗ್ಗೆ ಯಾವುದೆ ಕಾಮೆಂಟ್ ಇಲ್ಲ.. ಅಲ್ಲಿರುವ ನಾಯಕರ ವರ್ತನೆ ಬಗ್ಗೆ ನೋವಿದೆ.ಯಾರು ಪಾಠ ಹೇಳಬೇಕಾಗಿತ್ತೋ,  ಅವರು ಕೂಡ  ಈಶ್ವರಪ್ಪನವರು ಮಗನ ತರಹ ತಮ್ಮ ಮಗನನ್ನು ಕೂಡ ನೋಡುತ್ತಾರೆ..ಹಿಂದೆ ಯಡಿಯೂರಪ್ಪ ತಮ್ಮ‌ ಮಗನನ್ನು ತರುವಾಗ ವೀರಾವೇಷದಿಂದ ಹೋರಾಟ ಮಾಡಿದ್ರು, ಅವರೇ ಹಿಂಬಾಗಿಲಿನಿಂದ  ತಮ್ಮ‌ಮಗನನ್ನು ತರಲು ಯತ್ನಿಸುತ್ತಿದ್ದಾರೆ ಎಂದು ಆಯನೂರ್, ಭಾನುಪ್ರಕಾಶ್ ರನ್ನು ಕುಟುಕಿದ್ದಾರೆ. ಪಕ್ಷದ ನನ್ನ ಕಾರ್ಯಕರ್ತರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ನೀವು ನಾಯಕರಾಗಿ ಬೆಳೆಯಿರಿ.. ಮಕ್ಕಳಿಗಾಗಿ ನೀವು ಮೋಸ ಮಾಡಬೇಡಿ. ನಾಯಕರು ತಮ್ಮ ಮಕ್ಕಳನ್ನು  ನಾಯಕನ್ನಾಗಿ ಮಾಡುವ ವಾತಾವರಣ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ. ಇದನ್ನು ಧಿಕ್ಕರಿಸಿ ನಿಂತಿದ್ದೇನೆ, ಇದನ್ನ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರು ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ಆಂತರಿಕ ತುಮುಲ ನೋವುಗಳನ್ನ ಪ್ರಕಟ ಮಾಡುತ್ತಿದ್ದೇನೆ.. ನೀವು ಎಲ್ಲಿರುತ್ತಾರೆ ಅಲ್ಲಿಂದಲೇ ಅಶಿರ್ವಾದ ಮಾಡಿ. ಕುಟುಂಬ ರಾಜಕಾರಣದ ಈ ಚೈನ್ ಬ್ರೇಕ್ ಆಗದೆ ಇದ್ದರೆ, ಬಹಳ ಜನ ಸೇರಿ ಕಟ್ಟಿದಂತಹ ಪಕ್ಷ ವಿನಾಶದ ಕಡೆಗೆ ಹೋಗುತ್ತೆ ಎಂದು ಆಯನೂರು ಮಂಜುನಾಥ್ ವಿಷಾಧ ವ್ಯಕ್ತಪಡಿಸಿದ್ದಾರೆ.

 

ಈಶ್ವರಪ್ಪನವರೇ ಯಡಿಯೂರಪ್ಪರನ್ನು ಕಡೆಗಣಿಸಿದ್ದೇಕೆ ? ಆಯನೂರು ಪ್ರಶ್ನೆ

ಬಿಎಸ್ ವೈ ಮುಖ್ಯಮಂತ್ರಿ ಯಾಗಿ ಹತ್ತಾರು ಬಾರಿ ಶಿವಮೊಗ್ಗಕ್ಕೆ ಬಂದಾಗ ಹೆಲಿಪ್ಯಾಡ್ ನಲ್ಲಿ ಒಮ್ಮೆಯಾದರು ಸ್ವಾಗತ ಮಾಡಲು ಬಂದಿದ್ದಾರಾ..? ಅವರ ಜೊತೆ ವೇದಿಕೆಯನ್ನು ಹಂಚಿಕೊಂಡರಾ..? ಅವರು ಹೋಗುವಾಗ ಬಿಳ್ಕೊಡಲು ಬಂದಿದ್ರಾ..? ಮಂತ್ರಿಯಾಗಿ ಯಡಿಯೂರಪ್ಪ ನವರನ್ನು ಸಾಕಷ್ಟು ಅಪಮಾನ ಮಾಡಿದ್ದೀರಾ ಎಂದು ಆಯನೂರು ಮಂಜುನಾಥ್ ಈಶ್ವರಪ್ಪನವರಿಗೆ ನೇರ ಪ್ರಶ್ನೆ ಮಾಡಿದ್ದಾರೆ

..

ನಾನಾಗಿದ್ರೆ ನೇಣು ಹಾಕಿಕೊಳ್ತಿದ್ದೆ ಎಂದಿದ್ರಿ..ಈಗ ನೇಣಿನ ಹಗ್ಗವನ್ನಾದ್ರೂ ತಂದಿಟ್ಟುಕೊಂಡಿದ್ದಿರಾ?

ಈ ಹಿಂದೆ ಯಡಿಯೂರಪ್ಪ ನವರ ವಿರುದ್ದ ಆಪಾದನೆ ಬಂದಾಗ ನೀವು ಆ ಸಂದರ್ಭದಲ್ಲಿ ನಾನಾಗಿದ್ರೆ ನೇಣು ಹಾಕಿಕೊಳ್ಳುತ್ತೆನೆ ಎಂದು ಹೇಳಿದ್ರಿ..ಯಡಿಯೂರಪ್ಪರು ನೋವಿನಲ್ಲಿ ನೀವು ಅವರ ಜೊತೆಯಲ್ಲಿ ಇರಲಿಲ್ಲ.. ಈಗ ನಿಮ್ಮ ಮೇಲೆ ಅಪಾದನೆ ಬಂದಿದೆ

ನೀವು ನೇಣು ಹಾಕಿಕೊಳ್ಳುವುದು ಬದಿಗೆ ಇರಲಿ , ನೇಣಿಗೆ ಹಾಕಿಕೊಳ್ಳುವ ಹಗ್ಗವನ್ನು ತಂದಿಟ್ಟುಕೊಂಡಿದ್ದೀರಾ..? ಎಂದು ಆಯನೂರು ಈಶ್ವರಪ್ಪರನ್ನು ಕುಟುಕಿದ್ದಾರೆ..