ವಿಮಾನದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ! ಹೆಚ್​ಡಿಕೆ ವಾಗ್ದಾಳಿ! ಕಟೌಟ್ ಹರಿದಿದ್ದಕ್ಕೆ ಶಾರದಾ ಅಪ್ಪಾಜಿ ಕಣ್ಣೀರು

Yeddyurappa and Eshwarappa's children fly in the plane! HDK attack! Sharda Appaji in tears after the cutout was torn

ವಿಮಾನದಲ್ಲಿ   ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ! ಹೆಚ್​ಡಿಕೆ ವಾಗ್ದಾಳಿ! ಕಟೌಟ್ ಹರಿದಿದ್ದಕ್ಕೆ ಶಾರದಾ ಅಪ್ಪಾಜಿ ಕಣ್ಣೀರು
ವಿಮಾನದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ! ಹೆಚ್​ಡಿಕೆ ವಾಗ್ದಾಳಿ! ಕಟೌಟ್ ಹರಿದಿದ್ದಕ್ಕೆ ಶಾರದಾ ಅಪ್ಪಾಜಿ ಕಣ್ಣೀರು

MALENADUTODAY.COM | SHIVAMOGGA  | #KANNADANEWSWEB

ಭದ್ರಾವತಿಯಲ್ಲಿ ಪಂಚರತ್ನ ಯಾತ್ರೆ ಕೈಗೊಂಡು ಓಲ್ಡ್​ಟೌನ್​ನ ಕನಕಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ  ಜಿಲ್ಲೆಯಲ್ಲಿ ರೈತರು, ಕಾರ್ಮಿಕರ ಸಮಸ್ಯೆಗಳು ಬಹಳಷ್ಟಿವೆ. ಆದರೆ ಜನರ ಅಗತ್ಯ ಸಮಸ್ಯೆಗಳಿಗೆ ಇಲ್ಲಿನ ರಾಜಕಾರಣಿಗಳು ಸ್ಪಂದಿಸದೆ ಹಣ ಲೂಟಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ರು. 

ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ, ಬಗರ್‌ಹುಕುಂ ರೈತರ ಸಮಸ್ಯೆಗಳಿವೆ. ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಬೃಹತ್ ಕಾರ್ಖಾನೆಗಳು ಮುಚ್ಚಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಸಾಕಷ್ಟು ಬಡವರಿಗೆ ಮನೆಗಳಿಲ್ಲವಾಗಿದೆ. ಇಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲೆಯ ರಾಜಕಾರಣಿಗಳು ವಿಫಲರಾಗಿದ್ದಾರೆ. ಈ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಉದ್ದೇಶವೇ ಪಂಚರತ್ನ ಯಾತ್ರೆಯಾಗಿದೆ. ಇದನ್ನು ಜನರು ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಬೇಕೆಂದರು.

READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ಜಿಲ್ಲೆಯ ರಾಜಕಾರಣಿಗಳು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಕೇವಲ ಅವರು ಹಾಗು ಕುಟುಂಬದವರು ಸಮೃದ್ಧಿಯಾಗುತ್ತಿದ್ದಾರೆ. ಇಂತಹ ರಾಜಕಾರಣ ನಾನು ಎಂದಿಗೂ ಮಾಡಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದರೂ ಸಹ ಪೂರ್ಣ ಅಧಿಕಾರ ನೀಡದಿದ್ದರೂ ಸಹ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಎರಡು ಬಾರಿ ಸಾಲ ಮನ್ನಾ ಮಾಡಿದ್ದೇನೆ. ಬಡವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲು ೨.೫ ಲಕ್ಷ ಕೋಟಿ ಅನುದಾನದ ಅಗತ್ಯವಿದೆ.  ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಅಗತ್ಯವಿರುವ ಅನುದಾನವನ್ನು ಜನರ ತೆರಿಗೆ ಹಣದಲ್ಲಿ ಬಳಸಿಕೊಳ್ಳುತ್ತೇನೆ. ಈ ಬಾರಿ ನನಗೆ ಪೂರ್ಣ ಪ್ರಮಾಣದ ಅಧಿಕಾರ ನೀಡುವಂತೆ ಮನವಿ ಮಾಡಿದರು.
ಕ್ಷೇತ್ರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಮುಚ್ಚಲು ಹಣ ಬಿಡುಗಡೆ ಮಾಡಿರುವ ಈ ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿಗೆ ಈ ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದಾಗಿ ಭರವಸೆ ನೀಡುವ ಯಾವುದೇ ನೈತಿಕತೆ ಇಲ್ಲವಾಗಿದೆ. ನಮ್ಮ ಸರ್ಕಾರ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ಬದ್ಧವಾಗಿದೆ. ರಾಜ್ಯ ಸರ್ಕಾರವೇ ಈ ಎರಡು ಕಾರ್ಖಾನೆಗಳನ್ನು ಮುನ್ನಡೆಸಿಕೊಂಡು ಹೋಗಲಿದೆ. ಅಲ್ಲದೆ ಇಲ್ಲಿನ ಬಗರ್ ಹುಕುಂ ರೈತರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಗೆಲ್ಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಏರ್ ಪೋರ್ಟ್ ಎಷ್ಟು ಜನರಿಗೆ ಅನುಕೂಲವಾಗುತ್ತೆ? ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ. ಅವಸರದಲ್ಲಿ ವಿಮಾನ ನಿಲ್ದಾಣ ಬೇಕಿತ್ತಾ? ವಸತಿ ನಿರಾಶ್ರಿತರನ್ನಾಗಿಸಿ, ರೈತರನ್ನ ಒಕ್ಕಲೆಬ್ಬಿಸಿ, ಕಮಿಷನ್ ಒಡೆಯಲು ಕಾರ್ಯಕ್ರಮ ಇದಾಗಿದೆ ಅಷ್ಟೇ ಎಂದು ಆರೊಪಿಸಿದ ಮಾಜಿ ಸಿಎಂ ಬಗುರ್ ಹುಕುಂ ಸರಿಪಡಿಸಿ ಹಕ್ಕುಪತ್ರ ಕೊಡಿಸುವುದು ನನ್ನ ಜವಬ್ದಾರಿ. ಲೂಟಿ ಹೊಡೆದ ಹಣವನ್ನ ತಡೆದರೆ ಭದ್ರಾವತಿಯ ಕಾರ್ಖಾನೆ ಆರಂಭಿಸಬಹುದು. ರಾಜ್ಯ ಸರ್ಕಾರದ ಮೂಲಕವೇ ಪುನಶ್ಚೇತನ ಗೊಳಿಸಲಾಗುವುದು. ನಾನು ಮುಖ್ಯಮಂತ್ರಿ ಯಾಗುವುದಕ್ಕಿಂತ ಹೆಚ್ಚಾಗಿ ನಿಮ್ಮ ಭವಿಷ್ಯಕ್ಕೆ ಜೆಡಿಎಸ್ ಗೆ ಮತಹಾಕಬೇಕು. ಹಣ ಸಂಪಾದಿಸಲು ನಾನು ಹೋರಾಡುತ್ತಿಲ್ಲವೆಂದರು.

ಕಣ್ಣೀರು ಹಾಕಿದ ಶಾರದಾ ಅಪ್ಪಾಜಿ 

ಕನಕ ಮಂಟಪದಲ್ಲಿ ಮಾತನಾಡಿದ ಶಾರದಾ ಅಪ್ಪಾಜಿ  ನಮ್ಮ ಎದುರಾಳಿಗಳು ಕಟೌಟ್ ಹರಿದಿದ್ದಾರೆ ಆದರೆ ಅವರು ಮಾಡಿದ ಕೆಲಸವನ್ನ ನಾವು ಹಾಗೆ ಮಾಡೋದು ಬೇಡ, ಅಪ್ಪಾಜಿ ಗೌಡರನ್ನ ಭದ್ರಾವತಿಯಲ್ಲಿ ಚಿರವಾಗಿ ನೆಲೆಸಲು ನನಗೆ ಮತಹಾಕಿ ಎಂದು ಕೇಳಿಕೊಂಡ ಶಾರದಾ ಅಪ್ಪಾಜಿ ಗೌಡರು ಈ ಬಾರಿ ಗೆಲ್ಲಿಸಲಿಲ್ಲವೆಂದರೆ ಮುಂದೆ ಯಾವತ್ತೂ ಭದ್ರಾವತಿ ಚಿತ್ರಣ ಬದಲಾಗಲ್ಲವೆಂದರು. ಕಟೌಟ್ ಹರಿದವರು ಅನುಭವಿಸುತ್ತಾರೆ ಎಂದು ಕಣ್ಣೀರು ಹಾಕಿದ್ರು.  ಇನ್ನೂ ಇದೇ ವೇಳೆ ಫೆ.24 ರಂದು ವಿಐಎಸ್ ಎಲ್ ಉಳಿಸಿ ಕರೆದಿರುವ ಭದ್ರಾವತಿ ಬಂದ್ ಗೆ ನೀವೆಲ್ಲಾರೂ ಯಶಸ್ವಿ ಮಾಡಿಕೊಡಲು ಮನವಿ ಮಾಡಿಕೊಂಡರು.