ಬೀದಿನಾಯಿಗೆ ಅನ್ನ ಹಾಕುವ ಮೊದಲು ಹುಷಾರ್ ! ಪೆಟ್ಟು ಬೀಳುತ್ತೆ/ Bus stop ನಲ್ಲಿ ಬಸ್​ ಹತ್ತಿದ್ದ ಮಹಿಳೆಗೆ ಕ್ಷಣದಲ್ಲಿ ಎದುರಾಗಿತ್ತು ಶಾಕ್!

A woman who lost her purse at the Shimoga bus stand lodged a complaint with the Doddapet policeಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಪರ್ಸ್​ ಕಳೆದುಕೊಂಡ ಮಹಿಳೆ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ಧಾರೆ

ಬೀದಿನಾಯಿಗೆ ಅನ್ನ ಹಾಕುವ ಮೊದಲು ಹುಷಾರ್ ! ಪೆಟ್ಟು ಬೀಳುತ್ತೆ/ Bus stop ನಲ್ಲಿ ಬಸ್​ ಹತ್ತಿದ್ದ ಮಹಿಳೆಗೆ ಕ್ಷಣದಲ್ಲಿ ಎದುರಾಗಿತ್ತು ಶಾಕ್!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಬೀದಿ ನಾಯಿ ವಿಚಾರಕ್ಕೆ ಕಿರಿಕ್!

ಬೀದಿ ನಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿ ಪೊಲೀಸ್ ಕಂಪ್ಲೆಂಟ್ ಆದ ಘಟನೆ ಶಿವಮೊಗ್ಗದ ಆರ್​ಎಂಎಲ್​ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಬೀದಿ ನಾಯಿಗೆ ಅನ್ನ ಹಾಕುತ್ತಿದ್ದರಂತೆ. ಆ ನಾಯಿಯು ಅಲ್ಲಿಯೇ ಸುತ್ತಾಡುತ್ತ, ಅನ್ನಹಾಕಿದವರ ಪಕ್ಕದ ಮನೆಯ ನಿವಾಸಿಯ ಕಾರಿನ ಚಕ್ರದ ಮೇಲೆ ಮೂತ್ರ ಮಾಡಿದೆ. ಈ ವಿಚಾರಕ್ಕೆ ನೆರೆಮನೆ ನಿವಾಸಿ ನಿಮ್ಮ ನಾಯಿಯಿಂದ ಇಷ್ಟೆಲ್ಲಾ ಆಗುತ್ತಿದೆ ಎಂದು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಮಾರಣಾಂತಿಕ ಹಲ್ಲೆ ಸಂಬಂಧ ಕಾರಿನ ಮಾಲೀಕ ಹಾಗೂ ಇತರರ ವಿರುದ್ಧ ದೂರುದಾಖಲಾಗಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.  


ಬಸ್​ ನಿಲ್ದಾಣದಲ್ಲಿ ಕಳುವಾಯ್ತು ಪರ್ಸ್​! 

ಮದುವೆ ಸಮಾರಂಭಕ್ಕೆ ತೆರಳಲು ಕೆಎಸ್‌ ಆರ್‌ಟಿಸಿ ಬಸ್ ಹತ್ತಿದ್ದ ವೇಳೆ ಮಹಿಳೆಯೊಬ್ಬರ ಪರ್ಸ್​ ಕಳುವಾದ ಘಟನೆ ಶಿವಮೊಗ್ಗದ ಬಸ್​ ನಿಲ್ದಾಣದಲ್ಲಿ ನಡೆದಿದೆ. ತಮ್ಮ ಸ್ನೇಹಿತೆಯೊಬ್ಬರಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರರು, ಜನರ ರಶ್ ನಡುವೆ ಬಸ್ ಹತ್ತಿ , ಸೀಟು ಹಿಡಿದಿದ್ದರು. ಆನಂತರ ಸ್ನೇಹಿತೆ ಬರದ ಹಿನ್ನೆಲೆ ವಾಪಸ್ ಬಸ್ನಿಂದ ಇಳಿದಿದ್ದಾರೆ. ಅಷ್ಟರಲ್ಲಿ ಅವರ ಪರ್ಸ್​ ಮಾಯವಾಗಿತ್ತು. 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಹಾಗೂ 22 ಸಾವಿರ ಕ್ಯಾಶ್ ಇದ್ದ ಪರ್ಸ್​​ನ್ನು ಯಾರೋ ಕದ್ದೊಯ್ದಿದ್ದರು. ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  


ಇನ್ನಷ್ಟು ಸುದ್ದಿಗಳು