ವೆಂಕಟೇಶ್​ ನಗರದಲ್ಲಿ ಕೊಲೆ/ ಸೀಗೆಹಟ್ಟಿಯಲ್ಲಿನ ಘಟನೆಗೂ ಲಿಂಕ್ ಇದ್ಯಾ?/ ಏನಿದು ಅನುಮಾನ? ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು?

What did SP Mithun Kumar say about venaktesh nagara/murder incident?

ವೆಂಕಟೇಶ್​ ನಗರದಲ್ಲಿ ಕೊಲೆ/ ಸೀಗೆಹಟ್ಟಿಯಲ್ಲಿನ  ಘಟನೆಗೂ ಲಿಂಕ್ ಇದ್ಯಾ?/ ಏನಿದು ಅನುಮಾನ? ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು?
shivamogga sp mithun kumar, ಎಸ್​ಪಿ ಮಿಥುನ್ ಕುಮಾರ್

Malenadu today news report  | ಮೊದಲನೆಯದ್ದಾಗಿ, ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯವಾಗಿ ಆಗುವ ಕೊಲೆಗಳಂತೆ ರಕ್ತಸ್ರಾವ ಆಗಿರುವುದು, ಕಂಡುಬಂದಿಲ್ಲ. ಕರಳು ಮಾತ್ರ ಹೊರಕ್ಕೆ ಬಂದಿದ್ದು, ಡ್ರ್ಯಾಗರ್ ಬಳಸಿ ಕೊಲೆ ಮಾಡಿರುವ ಸಾಧ್ಯತೆಯನ್ನು ದೃಶ್ಯ ಹೇಳುತ್ತಿದೆ.

Venaktesh nagara/ ಶಿವಮೊಗ್ಗದ ವೆಂಕಟೇಶ್​ ನಗರದದಲ್ಲಿ ಇವತ್ತು ಬೆಳಗ್ಗಿನ ಜಾವ ಮೂರು ಗಂಟೆಯ ನಂತರ ಕೊಲೆಯೊಂದು ಆಗಿದೆ. ಈ ಘಟನೆ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೇಲಾಗಿ ರಕ್ತಬರದಂತೆ ಚುಚ್ಚಿ ಸಾಯಿಸುವುದಕ್ಕೆ ಸಾಧ್ಯವಾಗುವುದು ವೃತ್ತಿಪರ ದುಷ್ಕರ್ಮಿಗಳಿಗೆ, ಇನ್ನೂ ಅಪರಾಧ ಕೃತ್ಯಗಳಿಗೆ, ಕೇವಲ ಡ್ರ್ಯಾಗರ್ ಬಳಸುವಂತಹ ದುಷ್ಕರ್ಮಿಗಳ ಒಂದು ವರ್ಗವೇ ಇದೆ. ಇದು ಆರಂಭಿಕ ಅನುಮಾನ. ಪೊಲೀಸ್ ಇಲಾಖೆ ಕೂಡ ಈ ವಿಚಾರವನ್ನು ಗಮನಿಸಿದೆ. ಇನ್ನೂ ಮುಖ್ಯವಾಗಿ ನಿನ್ನೆ ಪೊಲೀಸ್ ಇಲಾಖೆ ಹೆಚ್ಚುವರಿ ಬಂದೋಬಸ್ತ್​ನ್ನು ಹಳೇಶಿವಮೊಗ್ಗದ ಭಾಗಗಳಲ್ಲಿ ಮಾಡಿತ್ತು.

ಸೀಗೇಹಟ್ಟಿ ಘಟನೆ

ಇದಕ್ಕೆ ಕಾರಣ ನಿನ್ನೆ ರಾತ್ರಿ ಸೀಗೇಹಟ್ಟಿಯಲ್ಲಿ ಇರುವ ಮೃತ ಹರ್ಷನ ಮನೆಯ ಎದುರು ಒಂದು ಗುಂಪು ಬಂದು ಬೆದರಿಕೆ ಹಾಕಿ ಹೋಗಿತ್ತು. ಈ ಘಟನೆ ಬೆನ್ನಲ್ಲೆ ಸೀಗೇಹಟ್ಟಿಯಲ್ಲಿ ಜನರು ಹೊರಕ್ಕೆ ಬಂದು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಇದರ ಬೆನ್ನಲ್ಲೆ ಭರ್ಮಪ್ಪ ನಗರದಲ್ಲಿ ಓರ್ವನ ಮೇಲೆ ಹಲ್ಲೆ ಮಾಡಲಾಗಿತ್ತು.

ಹೀಗಾಗಿ ಶಾಂತಿ ಸುವ್ಯವಸ್ಥೆಗೆ ಆಧ್ಯತೆ ನೀಡಿದ ಪೊಲೀಸರು ಹಳೇಶಿವಮೊಗ್ಗದಲ್ಲಿ ಬಂದೋಬಸ್ತ್ ಟೈಟ್ ಮಾಡಿದ್ದರು. ಹಾಗಾಗಿ ವೆಂಕಟೇಶ್​ ನಗರ ಭಾಗದಲ್ಲಿ ಈ ಪರಿಸ್ಥಿತಿಯ ಲಾಭ ಪಡೆದು ಯಾರಾದರೂ ಕೊಲೆ ಮಾಡಿದರೇ ಎಂಬ ಅನುಮಾನವೂ ಸಹ ಮೂಡಿತ್ತು.

ಎಸ್​ಪಿ ಮಿಥುನ್ ಕುಮಾರ್

ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಎಸ್​ಪಿ ಮಿಥುನ್​ ಕುಮಾರ್​, ಇದು ಪರಿಚಯಸ್ಥರು ನಡೆಸಿರಬಹುದಾದ ಕೊಲೆ ಎಂಬ ಅನುಮಾನವಿದೆ. ಸಿಸಿಟಿವಿ ಪೂಟೇಜ್ ಸಿಕ್ಕಿದೆ. ಈ ಬಗ್ಗೆ ಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತರೇ ಘಟನೆಗಳಿಗೂ ಈ ಘಟನೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಆಸ್ಪತ್ರೆಗೆ ಹೋಗದ ವಿಜಯ್​

ಇನ್ನೊಂದೆಡೆ ಮೃತ ವಿಜಯ್​ ನಿನ್ನೆ ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಯಿಂದ ಕರೆಬಂದಿದ್ದರಿಂದ ಅಲ್ಲಿಗೆ ಹೋಗಿದ್ದರು ಎನ್ನಲಾಗಿತ್ತು. ಬೆಳಗ್ಗೆ ನೋಡಿದರೇ ಅವರ ಕೊಲೆಯಾಗಿತ್ತು. ಆದರೆ ಮೂಲಗಳಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಅವರು ನಿನ್ನೆ ರಾತ್ರಿ ಆಸ್ಪತ್ರೆಗೆ ಹೋಗಿರಲಿಲ್ಲ. ಹಾಗೂ ಅವರಿಗೆ ಆಸ್ಪತ್ರೆಯಿಂದ ಕರೆಯು ಬಂದಿರಲಿಲ್ಲ ಎಂಬ ಮಾಹಿತಿಯಿದೆ.

ಹಾಗಾದರೇ ನಡೆದಿದ್ದೇನು?

ವಿಜಯ್​ ರವರಿಗೆ ನಿನ್ನೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಕರೆಯೊಂದು ಬಂದಿದ್ದು ಅದರಿಂದ ಕೊಂಚ ಡಿಸ್ಟರ್ಬ್​ ಆಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಈ ವಿಚಾರ ಪೊಲೀಸರ ಗಮನದಲ್ಲಿದ್ದು, ಎಲ್ಲಾ ಆ್ಯಂಗಲ್​ನಲ್ಲಿಯು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.