ದೊಡ್ಡಪೇಟೆ ಪೊಲೀಸರ ಬಲೆಗೆ ಬಿದ್ದ ಮೈಸೂರು, ತಿಪಟೂರು, ದಾವಣಗೆರೆ, ಹಾಸನ, ಹರಪನಹಳ್ಳಿ ಬೈಕ್​ ಕಳ್ಳ !

Mysuru, Tiptur, Davanagere, Hassan, Harappanahalli bike thieves caught by Doddapet police

ದೊಡ್ಡಪೇಟೆ ಪೊಲೀಸರ ಬಲೆಗೆ ಬಿದ್ದ  ಮೈಸೂರು, ತಿಪಟೂರು, ದಾವಣಗೆರೆ, ಹಾಸನ, ಹರಪನಹಳ್ಳಿ ಬೈಕ್​ ಕಳ್ಳ !
Doddapet Police Station,

SHIVAMOGGA  |  Dec 13, 2023  |  ನಗರದ ಬೈಪಾಸ್ ರಸ್ತೆಯ ಬಳಿ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣವನ್ನು ಭೇದಿಸಿದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಪೊಲೀಸರ  ತಂಡ 20 ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದು, ಒಟ್ಟು 17 ಬೈಕ್‌ಗಳನ್ನು ವಶಕ್ಕೆ  ಪಡೆದಿದ್ದಾರೆ. 

ದೊಡ್ಡಪೇಟೆ ಪೊಲೀಸ್ ಸ್ಟೇಷನ್

ಈ ಸಂಬಂಧ ನಿನ್ನೆ  ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ   ಮಾತನಾಡಿದ ಎಸ್​ಪಿ ಜಿಕೆ ಮಿಥುನ್ ಕುಮಾರ್,  ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನ.18ರಂದು ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿತ್ತು. ಇದರ ಪತ್ತೆಗೆ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಪಾಟೀಲ್, ಅಪರಾಧ ದಳದ ಪಿಎಸ್‌ಐ ಶ್ರೀನಿವಾಸ್ ಮುಂದಾಳತ್ವದಲ್ಲಿ ತಂಡ ರಚಿಸಲಾಗಿತ್ತು.

17 ಬೈಕ್ ಕಳವು ಪ್ರಕರಣದಲ್ಲಿ ಇಬ್ಬರು ಭಾಗಿಯಾಗಿದ್ದು, ಒಬ್ಬ ಅಪ್ರಾಪ್ತ ಇದ್ದಾನೆ. ಈತನನ್ನು ಬಂಧಿಸಲಾಗಿದ್ದು, ವಯಸ್ಕ ಜಬೀವುಲ್ಲಾ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಆತನನ್ನೂ ಬಂಧಿಸಲಾಗುವುದು. ವಶಕ್ಕೆ ಪಡೆದ 17 ಬೈಕ್‌ಗಳ ಒಟ್ಟು ಮೌಲ್ಯ ₹10,55,000 ಎಂದು ತಿಳಿಸಿದ್ದಾರೆ. 

BIG NEWS | ಟ್ರಾನ್ಸಫರ್ ಆದರೂ ಸೂಚಿಸಿದ ಸ್ಥಳದಲ್ಲಿ ಡ್ಯೂಟಿಗೆ ಹಾಜರಾಗದ 44 ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ ನೋಟಿಸ್!

ಇನ್ನೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನದಿಂದ ಶಿವಮೊಗ್ಗದ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 4 ಪ್ರಕರಣ ಹಾಗೂ ಸಾಗರ, ಸಖರಾಯಪಟ್ಟಣ, ರಾಮನಗರ, ಪಟ್ಟಣ, ದಾವಣಗೆರೆ, ಹೊನ್ನಾಳ್ಳಿ, ಭದ್ರಾವತಿ, ಮೈಸೂರು, ತಿಪಟೂರು, ಹಾಸನ, ಹರಪನಹಳ್ಳಿಯಲ್ಲಿ ತಲಾ ಒಂದೊಂದು ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಿಸಲು ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತಿದೆ. ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ಕಳ್ಳತನ ಪ್ರಕರಣ ವರದಿಯಾಗಿವೆ. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುವವರನ್ನು ವಿಚಾರಿಸಲಾಗುತ್ತಿದೆ. ಸಿಸಿ ಕ್ಯಾಮೆರಾ ಹಾಕಲಾಗಿದೆ. ಡಿವೈಎಸ್‌ಪಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅಗತ್ಯವಿರುವ ಕಡೆ ಸಿಸಿಕ್ಯಾಮೆರಾ ಅಳವಡಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಂಪರ್ಕಿಸಲಾಗಿದೆ ಎಂದಿದ್ದಾರೆ.