‘ಸ್ಮಾರ್ಟ್’​ ಸಮಸ್ಯೆ ಬಗೆಹರಿಸುತ್ತವಾ ಹೊಸ ಶಾಸಕಎಸ್​.ಎನ್.​ ಚನ್ನಬಸಪ್ಪರವರು ನೀಡಿದ ಸೂಚನೆಗಳು!? ಏನದು!

On the monsoon and smart city works, the new MLA S.N. Channabasappa has instructed the officials

‘ಸ್ಮಾರ್ಟ್’​ ಸಮಸ್ಯೆ ಬಗೆಹರಿಸುತ್ತವಾ ಹೊಸ ಶಾಸಕಎಸ್​.ಎನ್.​ ಚನ್ನಬಸಪ್ಪರವರು ನೀಡಿದ ಸೂಚನೆಗಳು!? ಏನದು!

KARNATAKA NEWS/ ONLINE / Malenadu today/ Jun 22, 2023 SHIVAMOGGA NEWS 

ಶಿವಮೊಗ್ಗ / ಸ್ಮಾರ್ಟ್​ ಸಿಟಿಯ ತೋರಿಕೆಯನ್ನ ಮೊನ್ನೆ ಸುರಿದ ಮಳೆ ತನ್ನ ಆರ್ಭಟದೊಂದಿಗೆ ತೊಳೆದುಕೊಂಡು ಹೋಗಿತ್ತು. ಶಿವಮೊಗ್ಗದ ದೊಡ್ಡ ಮೋರಿಗಳೆಲ್ಲಾ ಮೊದಲ ಮಳೆಯಲ್ಲಿಯೇ ತುಂಬಿ ಸಮುದ್ರದಂತೆ ಅಬ್ಬರಿಸಿದ ವಿಡಿಯೋಗಳು ಇದೀಗ ರಾಜ್ಯದಲ್ಲೆಡೆ ವೈರಲ್ ಆಗುತ್ತಿದೆ. ಇದರ ನಡುವೆ ಶಾಸಕ ಚನ್ನಬಸಪ್ಪನವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಹಿಂದೆ ಮಹಾ ನಗರ ಪಾಲಿಕೆಯ ಸದಸ್ಯರಾಗಿದ್ದ ಅವರು ಇದೀಗ ಶಾಸಕರಾಗಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಹಿಂದೆಯು ಇದ್ದ ಸಮಸ್ಯೆ ಈಗಲೂ ಸಹ ಅವರಿಗೆ ಎದುರಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅವರು ಪ್ರಮುಖ ಸೂಚನೆಗಳನ್ನ ಸಹ ನೀಡಿದ್ಧಾರೆ. 

ನಗರ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದ್ದಾಗಿರು ವಂತೆ ಹಾಗೂ ತ್ವರಿತವಾಗಿ ಪೂರ್ಣಗೊಳಿಸಬೇಕು 

ಮಳೆಗಾಲ ಈಗಷ್ಟೆ ಆರಂಭಗೊಂಡಿದ್ದು, ಕೈಗೊಂಡ ಕಾಮಗಾರಿಗಳು ಅಪೂರ್ಣವಾಗಿದ್ದರಿಂದಾಗಿ ವಾಹನ ಸಂಚಾರಕ್ಕೆ ತೀವ್ರತರಹದ ಅಡಚಣೆ ಉಂಟಾಗಿದೆ ಎಂಬ ಆಕ್ಷೇಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ರಾಜಾಕಾಲುವೆಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉತ್ತಮವಾಗಿ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿ ಹಾಗೂ ಮಳೆ ನೀರಿನಿಂದ ಹಾನಿಗೊಳಗಾಗಬಹುದಾದ ಪ್ರದೇಶಗಳ ಬಗ್ಗೆ ವಿಶೇಷ ಗಮನಹರಿಸಬೇಕು. 

 

ಸ್ಟಾರ್ಟ್‌ಸಿಟಿ ಯೋಜನೆಯಡಿ ನಗರದೆಲ್ಲೆಡೆ ನಿರ್ಮಿಸಲಾಗಿರುವ ಚರಂಡಿ ಮೇಲ್ಬಾಗ ಮುಚ್ಚಲಾಗಿದ್ದು, ಅದನ್ನು ತೆರೆಯಲು ಸಾಧ್ಯವಾಗದಂತೆ ಅಳವಡಿಸಲಾಗಿದೆ. ಮಳೆ ನೀರು ತುಂಬಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಚರಂಡಿಗಳನ್ನು ಕೂಡಲೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಶಾಲೆಗಳ ಸ್ವಚ್ಚತೆ ನಿರ್ವಹಣೆಯಲ್ಲಿಯೂ ನ್ಯೂನತೆಗಳಿದ್ದು, ಅಲ್ಲಿನ ನೀರು, ನೈರ್ಮಲ್ಯದ ಕುರಿತು ಪಾಲಿಕೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. 

ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಮತ್ತು ಸಂಚಾರ ನಿಯಮಗಳ ಪಾಲನೆಯಲ್ಲಿ ಪೊಲೀಸ್ ಇಲಾಖೆ ಕ್ರಿಯಾಶೀಲರಾಗಬೇಕು, ನಗರದಲ್ಲಿ ಬಹುಮುಖ್ಯವಾಗಿ ಆಗಾಗ್ಗೆ ಕಂಡುಬರುವ ಸೈಬರ್ ಕ್ರೈಂ ಗಳ ಬಗ್ಗೆಯೂ ಗಮನಹರಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. 

ಶಾಸಕರು ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಸಹ ಚನ್ನಬಸಪ್ಪರವರ ಮಾತುಗಳಿಗೆ ಎಸ್​ ಸರ್ ಎಂದಿದ್ಧಾರೆ. ಆದರೆ ನಿಜವಾಗಲೂ ಕೆಲಸಗಳು ಆಗುತ್ತವಾ? ಅಥವಾ ಬರೀ ಮಾತೇ ಆಗುತ್ತದೆಯೇ ಎಂಬುದನ್ನ ಮುಂದಷ್ಟೆ ನೋಡಬೇಕಿದೆ.  


ಬಕ್ರೀದ್​ ಹಬ್ಬ ಹಿನ್ನೆಲೆ ಶಾಂತಿ ಸಭೆ! ಎಸ್​ಪಿ ಮಿಥುನ್ ಕುಮಾರ್​ರಿಂದ 6 ಪ್ರಮುಖ ಸೂಚನೆ! ಏನದು ವಿವರ ಇಲ್ಲಿದೆ

ಭದ್ರಾವತಿ  ಯಲ್ಲಿ ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಎಸ್​ಪಿ ಮಿಥುನ್ ಕುಮಾರ್ ರೋಟರಿ ಕ್ಲಬ್ ಸಭಾಂಗಣದಲ್ಲಿ, ಶಾಂತಿ ಸಮಿತಿ ಸಭೆಯನ್ನು ನಡೆಸಿದ್ದಾರೆ. ಅಲ್ಲದೆ ಈ ವೇಳೆ ಆರು ಸೂಚನೆಗಳನ್ನು ನೀಡಿದ್ದಾರೆ .  

ಏನು ಸೂಚನೆ?

1) ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ, ಶಾಂತಿ ಕದಡುವ ಕಿಡಿಗೇಡಿಗಳನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಯಾವುದೇ  ಕಿಡಿಗೇಡಿಗಳು ಸಮಸ್ಯೆಯನ್ನುಂಟು ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. 

2) ಕಾನೂನು ಬಾಹೀರವಾದ ಕೆಲಸಗಳನ್ನು ಮಾಡಿದರೆ ಅಂತಹ ಸಂದರ್ಭಗಳಲ್ಲಿ ಸಮಸ್ಯೆಗಳು ಉದ್ಭವವಾಗುತ್ತದೆ. ಕಾನೂನಿನ ಚೌಕಟ್ಟಿನ ಒಳಗಿರುವ ಅವಕಾಶಗಳನ್ನು ಬಳಸಿಕೊಂಡಾಗ ಯಾವುದೇ ಸಮಸ್ಯೆಗಳಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಎಲ್ಲರೂ ಕಾನೂನನ್ನು ಪಾಲನೆ ಮಾಡುವುದು.  

3) ಆಕ್ಷೇಪಾರ್ಹ ವೀಡಿಯೋ / ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಅಂತಹವರ ವಿರುದ್ದ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.

4) ಯಾವುದೇ ವ್ಯಕ್ತಿಗಳು ಅನಾವಶ್ಯಕವಾಗಿ ತೊಂದರೆಯನ್ನುಂಟು ಮಾಡುತ್ತಿರುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖಾ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದು.

5) ಪೊಲೀಸ್ ಇಲಾಖಾ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಿದ್ದು, ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಸೂಚಿಸಲಾಯಿತು.

6)  ಸಭೆಯಲ್ಲಿ ಹಿಂದೂ,  ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮುಖಂಡರು, ವಖ್ಫ್ ಬೋರ್ಡ್  ಅಧಿಕಾರಿಗಳು, ಭದ್ರಾವತಿ ನಗರಸಭೆಯ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು ಮತ್ತು ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡುವುದಾಗಿ ಆಶ್ವಾಸನೆ ನೀಡಿದರು.