ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malneadu today Sepical

One lorry, arecanut worth Rs 1 crore! Do you know how

ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malneadu today Sepical
One lorry, arecanut worth Rs 1 crore! Do you know how

One lorry, arecanut worth Rs 1 crore! Do you know how / ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malenadu today story / SHIVAMOGGA

ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಮೊಗ್ಗದಿಂದ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನ ಹಿಡಿಯಲಾಗಿತ್ತು. ಅಕ್ರಮವಾಗಿ ಅಡಿಕೆಗಳನ್ನು ಜಿಎಸ್​ಟಿ ನೀಡದೇ, ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಜಿಎಸ್​ಟಿ ಅಧಿಕಾರಿಗಳು, ವಾಹನಗಳನ್ನ ಸೀಜ್​ ಮಾಡಿದ್ದರು. ಐದು ಲಕ್ಷ ರೂಪಾಯಿ ಜಿಎಸ್​ಟಿ ಕಟ್ಟದೇ, ಅಡಿಕೆಗಳನ್ನ ಲಾರಿಗಳಲ್ಲಿ ಸಾಗಿಸುತ್ತಿರುವುದು ಅಧಿಕಾರಿಗಳ ರೇಡ್​ ವೇಳೆ ಪತ್ತೆಯಾಗಿತ್ತು.

ಸಾಮಾನ್ಯವಾಗಿ ಒಂದು ಲಾರಿ ಲೋಡು ಅಡಿಕೆಯಲ್ಲಿ, ಅಂದಾಜು ಒಂದು ಕೋಟಿ ಮೌಲ್ಯದ ಅಡಿಕೆಯಿರುತ್ತದೆ. ಅಷ್ಟೊಂದು ಪ್ರಮಾಣದ ಅಡಿಕೆಯನ್ನು ಸಾಗಿಸುವಾಗ ಕನಿಷ್ಟ 5 ಲಕ್ಷ ಜಿಎಸ್​ಟಿಯನ್ನು ಕಟ್ಟದಿರಲು, ಅಡಿಕೆಯ ಮಾಲೀಕರಿಗೆ ಸಾಧ್ಯವಾಗಲ್ವಾ?

ಹೀಗೊಂದು ಅನುಮಾನದ ಹುಳು ಹೊರಬಿದ್ದ ಬೆನ್ನಲ್ಲೆ, ಅಡಿಕೆ ಸಾಗಾಟದ ಜಾತಕ ಹುಡುಕಾಟ ನಡೆಸಿದಾಗ, ಅಡಿಕೆ ಚೀಲದ ಹಿಂಬದಿಯಿಂದ ಇನ್ನೂರು ಮುನ್ನೂರು ಕೋಟಿ ವಹಿವಾಟು ನಡೆಯುತ್ತಿರುವ ವಿಚಾರಗಳು ಗೊತ್ತಾಗುತ್ತಾ ಹೋದವು.

ವಿತ್​ಔಟ್​ ಬಿಲ್​ನ ಹಿಂದಿದೆ ಚಿದಂಬರ ರಹಸ್ಯ?

ಅಸಲಿಗೆ ಸುಮಾರು ಒಂದು ಕೋಟಿ ಮೌಲ್ಯದ ಅಡಿಕೆಯನ್ನು ಸಾಗಾಟ ಮಾಡುವವರು ನಿರ್ದಿಷ್ಟ ಜಾಗಕ್ಕೆ ತಲುಪಿಸುವ ಜವಾಬ್ದಾರಿಯನ್ನ ಹೊತ್ತಿರುತ್ತಾರೆ. ತಲೆ ಮೇಲೆ ತಲೆ ಬಿದ್ದರೂ, ಲಾರಿ ಸೇರಬೇಕಾದ ಜಾಗ ತಲುಪಿಸುವುದಕ್ಕೆಂದೆ ಭರಪೂರ ಟ್ರಾನ್ಸ್​ಪೋರ್ಟ್​ ಚಾರ್ಜ್​ ನೀಡಲಾಗುತ್ತದೆಯಂತೆ. ಒಂದು ಲಾರಿಗೆ 5 ಲಕ್ಷಕ್ಕೂ ಹೆಚ್ಚು ಟ್ರಾನ್ಸ್​ಪೋರ್ಟ್​ ಚಾರ್ಜ್​ ಪಡೆದುಕೊಂಡವರಿದ್ದಾರೆ.

ಇಲ್ಲಿ ಮೊದಲೇ ಅಡಿಕೆ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಇಷ್ಟು ರೇಟಿಗೆ ಇಷ್ಟು ಅಡಿಕೆ ನೀಡಬೇಕು ಎಂದು ಒಪ್ಪಂದ ಆಗಿರುತ್ತದೆ. ಆ ನಂತರ ರೇಟು ಹೆಚ್ಚಾದರೂ, ಕಡಿಮೆಯಾದರೂ, ಒಪ್ಪಂದದಂತೆಯೇ ಅಡಿಕೆಯನ್ನು ನೀಡಬೇಕು, ಖರೀದಿಸಬೇಕು. ಇದು ಸಾಮಾನ್ಯ ಸಂಗತಿಯಾದರೆ, ಇದರ ಜೊತೆಯಲ್ಲಿಯೇ ಇನ್ನೊಂದು ಒಪ್ಪಂದ ಆಗಿರುತ್ತದೆ. ಅದೇನೆಂದರೆ, ವಿತ್​ ಬಿಲ್​, ವಿತ್​ಔಟ್​ ಬಿಲ್​ ಅಡಿಕೆ..

ಹೌದು, ಗುಟ್ಕಾ ಫ್ಯಾಕ್ಟರಿಗಳಿಗೆ ಅಡಿಕೆಯನ್ನು ಮಾರುವವರು, ಖರೀದಿದಾರರು ಹೇಳಿದಾಗೆ, ಅಡಿಕೆಯನ್ನು ಕಳುಹಿಸುತ್ತಾರೆ. ವಿತ್​ ಬಿಲ್​ ಆದರೆ, ಅಧಿಕೃತವಾಗಿ ಅಡಿಕೆ ಫ್ಯಾಕ್ಟರಿ ಸೇರುತ್ತದೆ. ವಿತ್​ ಔಟ್​ ಬಿಲ್​ ಆದರೆ, ಕದ್ದುಮುಚ್ಚಿ ಹೋಗಿ ಫ್ಯಾಕ್ಟರಿ ಸೇರುತ್ತದೆ ಅಡಿಕೆ ಲಾರಿ. ಬೆಳಗಾವಿಯಲ್ಲಿ ಮೊನ್ನೆ ಮೊನ್ನೆ ಸಿಕ್ಕಬಿದ್ದ ಲಾರಿಯು ಕದ್ದುಮುಚ್ಚಿ ಹೋಗುತ್ತಿದ್ದ ಲಾರಿಯಾಗಿತ್ತು.

ಜಿಎಸ್​ಟಿ ಅಧಿಕಾರಿಗಳು, ದಾರಿಯಲ್ಲಿ ಅಡ್ಡನಿಂತು, ಇಂತಹ ಲಾರಿಗಳನ್ನು ಹಿಡಿದು ಬಿಲ್​ ಕೇಳಿ ಫೈನ್​ ಬರೆಯುತ್ತಾರೆ. ಆದರೆ, ಅಡಿಕೆ ನೋಡೋದಕ್ಕೆ ಚಿಕ್ಕದಿದ್ದರೂ, ಅದರಾಚೆಗಿನ ದಂಧೆ ಬೃಹತ್​ ಗಾತ್ರದಲ್ಲಿದೆ. ಹೈಟೆಕ್​ ವಿವಿಐಪಿ ಪ್ರೊಫೈಲ್​ನಲ್ಲಿದೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ವಿತ್​ಔಟ್​ ಬಿಲ್​ ಅಡಿಕೆಯಿಂದ ಸರ್ಕಾರಕ್ಕೆ 5 ಲಕ್ಷವಷ್ಟೆ ಜಿಎಸ್​ಟಿ ವಂಚನೆಯಾಗದು. ಸರಿಸುಮಾರು 300 ಕೋಟಿ ರೂಪಾಯಿ ವಂಚನೆಯ ಮುನ್ನುಡಿ ಈ ಐದು ಲಕ್ಷವಾಗಿರುತ್ತದೆ. ಹೌದು, ಅಕ್ರಮವಾಗಿ ವಿತ್​ ಔಟ್​ ಬಿಲ್​ ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆಯನ್ನು ಗುಟ್ಕಾ ಫ್ಯಾಕ್ಟರಿಗೆ ತಲುಪಿಸುತ್ತದೆ.

ಅಲ್ಲಿ ಹೋದ ಲಾರಿ ಲೋಡು ಅಡಿಕೆ ಸುಪಾರಿಯಾಗಿ ಮಾರಾಟ ಮಳಿಗೆಗೆ ತಲುಪುವಾಗಲೂ ವಿತ್​ ಔಟ್​ ಬಿಲ್​ ಆಗಿಯೇ ತಲುಪುತ್ತದೆ. ಸರ್ಕಾರಕ್ಕೆ ವಂಚಿಸೋದು ಅಂದರೆ, ಬಹಳಷ್ಟು ಜನರಿಗೆ ಇಷ್ಟ. ಇದೊಂಥರಾ ಅಪ್ಪನ ಜೇಬಿನಿಂದ ಮಗಾ ದುಡ್ಡು ಕದ್ದ ಹಾಗೆ, ತಪಲ್ಲ ಅಂತಾ ಕಳ್ಳರೆ ಅಂದುಕೊಂಡು ಬಿಡ್ತಾರೆ.

ಸರ್ಕಾರಕ್ಕೆ 200-300 ಕೋಟಿ ರೂಪಾಯಿ ವಂಚನೆ?

ಹೀಗೆ ವಿತ್​ಔಟ್​ ಬಿಲ್​ನ ಮೂಲಕ ಅಡಿಕೆ ಬೆಳೆಗಾರನಿಂದ ಫ್ಯಾಕ್ಟರಿಗೆ ಹೊರಟ ಅಡಿಕೆ ಲಾರಿ, ಅಂತಿಮವಾಗಿ ಸುಪಾರಿಯಾಗಿ ಮಾರಾಟ ಮಳಿಗೆ ಸೇರುವರೆಗೂ ವಿತ್​ಔಟ್​ ಬಿಲ್​ ಆಗಿಯೇ ತಲುಪುತ್ತದೆ. ನಿಮಗೆ ಗೊತ್ತಿರಲಿ ಓದುಗರೆ, ವ್ಯಾಪಾರದ ಮಹಾಮೋಸ ನಡೆಯೋದು ಇಲ್ಲಿಯೇ..

ಸಾಮಾನ್ಯವಾಗಿ ಒಂದು ರೂಪಾಯಿ ಮೌಲ್ಯದ ಗುಟ್ಕಾಕ್ಕೆ 200 ಪರ್ಸೆಂಟ್​ನಷ್ಟು ಸೆಸ್​ ಹಾಕಲಾಗುತ್ತದೆ. ಈ ಲೆಕ್ಕವನ್ನೆ ತೆಗೆದುಕೊಂಡು ಒಂದು ಕೋಟಿ ಮೌಲ್ಯದ ಅಡಿಕೆಯಿಂದ ತಯಾರಿಸಲಾದ ಸುಪಾರಿಗೆ ಎಷ್ಟು ಸೆಸ್​​ ಬೀಳಬಹುದು ಎಂದು. ಅಂದಾಜಿಗೆ ತೆಗೆದುಕೊಂಡು 200-300 ಕೋಟಿ ರೂಪಾಯಿಯ ವ್ಯಹವಾರ ಇದಾಯ್ತು. ವಿತ್​ಔಟ್​ ಬಿಲ್​ ಎಂದರೆ ಸರ್ಕಾರಕ್ಕೆ ಎಷ್ಟು ನಷ್ಟವಾಯ್ತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಾ..

ಗುಟ್ಕಾ ಕಂಪನಿಗಳು ಸರ್ಕಾರಕ್ಕೆ 200-300 ಕೋಟಿ ರೂಪಾಯಿಯನ್ನು ವಂಚಿಸುವ ಸಲುವಾಗಿ ವಿತ್​ಔಟ್​ ಬಿಲ್​ ಅಡಿಕೆಗಳನ್ನು ತರಿಸಿಕೊಳ್ಳುತ್ತವೆ. ವಿತ್ ಬಿಲ್​ ತಂದರೆ, ಪ್ರತಿಯೊಂದಕ್ಕೂ ಲೆಕ್ಕ ಇಡಬೇಕಾಗುತ್ತದೆ. ಸೆಸ್​ ಇಲ್ಲದೆ ಮಾರಲು ಬರುವುದಿಲ್ಲ. ಹಾಗಾಗಿ ವಿತ್​ಔಟ್​ ಬಿಲ್​ ಬಂದರೆ ವಂಚನೆ ಸುಲಭ. ಒಂದು ಪರ್ಮಿಟ್​ ಪಡೆದುಕೊಂಡು, ಅದರ ಅವದಿ ಮುಗಿಯುವುದರೊಳಗೆ ಮೂರು ನಾಲ್ಕು ಸಲ ವಿತ್​ಔಟ್​ ಬಿಲ್​ ಗುಟ್ಕಾಗಳನ್ನ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಇಲ್ಲಿಂದ ರಿಟೇಲ್​​ ಮಾರಾಟಕ್ಕೆ ಸರಭರಾಜಾಗುತ್ತದೆ.

ಹೀಗೆ ಆರಂಭದಿಂದ ಅಂತ್ಯದವರೆಗೂ ವಿತ್​ಔಟ್​ ಬಿಲ್​ ಮಾಲ್​ನಲ್ಲಿ, ಕೋಟಿಗಟ್ಟಲೇ ರೂಪಾಯಿಗಳನ್ನು ಅಕ್ರಮ ಮುಚ್ಚಿಡಲೆಂದೆ ಚೆಲ್ಲಲಾಗುತ್ತದೆ. ಚೆಕ್​ಪೋಸ್ಟ್​ಗಳ ಪೊಲೀಸರಿಂದ ಹಿಡಿದು, ಅಧಿಕಾರಿಗಳ ಬಾಯಿಮುಚ್ಚಿಸುವರೆಗೂ, ರಾಜ್ಯದ ಗಡಿ ದಾಟಿಸುವುದರಿಂದ ಹಿಡಿದೂ, ಹೋಲ್​ಸೇಲ್​ ವ್ಯಾಪಾರಿಗೆ ಕಡಿಮೆ ರೇಟು ನೀಡುವರೆಗೂ ಅಕ್ರಮವಾಗಿಯೇ ವೆಚ್ಚಮಾಡಲಾಗುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿಯು ಉಳಿವುದು ಕೋಟ್ಯಾನುಕೋಟಿ. ಈತ ಜಿಎಸ್​ಟಿ ತಂದಿದ್ದಾನಾ ಇಲ್ವಾ? ತಾನು ಕೊಟ್ಟ ದುಡ್ಡು ಸರ್ಕಾರಕ್ಕೆ ಸೆಸ್ ಆಗಿ ಹೋಗುತ್ತಾ ಅಥವಾ ಅಕ್ರಮ ದಂಧೆಕೋರರಿಗೆ ಹೋಗುತ್ತಾ ಅನ್ನೋದನ್ನ ಗೊತ್ತಿಲ್ಲದೆ ಜನರು ಗುಟ್ಕಾ ಖಾಲಿಮಾಡುತ್ತಲೇ ಇದ್ದಾರೆ.

ರಾಜ್ಯದಲ್ಲಷ್ಟೆ ಹೆಚ್ಚಾಗಿ ನಡೆಯುವ ಅಡಿಕೆ ವಹಿವಾಟಿನಲ್ಲಿ ಈ ಕಾಳದಂಧೆ ಒಂದು ವೃಂದಕೂಟವಾಗಿ ನಡೆಯುತ್ತಿದೆಯಂತೆ. ಅವರು ಇವರಿಗೆ ಇವರು ಅವರಿಗೆ ಸಹಾಯ ಮಾಡುತ್ತಲೇ ಹೈಪ್ರೊಫೈಲ್​ ವಹಿವಾಟು ನಡೆಸುವ ಮಂದಿ ಟೆಂಡರ್​ನಲ್ಲೂ ಗೋಲ್​ಮಾಲ್​ ಮಾಡುತ್ತಾರಂತೆ. ಒಬ್ಬ ಜಾದುಗಾರ ಕಣ್ಕಟ್ಟಿನಲ್ಲಿ ಆಟವಾಡಿ, ಜನರನ್ನ ನಂಬಿಸುತ್ತಾರೆ. ಆದರೆ, ಅಡಿಕೆಯ ಮಹಾದಂಧೆಯಲ್ಲಿ ಜನರ ಕಣ್ಮುಂದೆಯೇ ಕಣ್ಕಟ್ಟು ನಡೆಯುತ್ತಿರುತ್ತದೆ. ಆದಾಗ್ಯು ಏನೂ ಮಾಡಲಾಗುವುದಿಲ್ಲ ಎನ್ನುವದೇ ವಿಪರ್ಯಾಸ.