ಪತ್ನಿಯನ್ನ ಕೊಂದು, ಸಹಜ ಸಾವು ಎನ್ನುತ್ತಾ ಅಂತ್ಯಕ್ರಿಯೆಗೆ ಮುಂದಾದ ಪತಿ! ಚಿಕ್ಕಮಗಳೂರು ಪೊಲೀಸರು ಕೊನೆ ಕ್ಷಣದಲ್ಲಿ ಕೊಟ್ರು ಶಾಕ್

ಪತ್ನಿಯನ್ನ ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲು ಮುಂದಾಗಿದ್ದ ಪತಿರಾಯನನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ, The Chikkamagaluru police have arrested a man for allegedly murdering his wife and destroying evidence.

ಪತ್ನಿಯನ್ನ ಕೊಂದು, ಸಹಜ ಸಾವು ಎನ್ನುತ್ತಾ ಅಂತ್ಯಕ್ರಿಯೆಗೆ ಮುಂದಾದ ಪತಿ! ಚಿಕ್ಕಮಗಳೂರು ಪೊಲೀಸರು ಕೊನೆ ಕ್ಷಣದಲ್ಲಿ ಕೊಟ್ರು ಶಾಕ್

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ ಬಳಿ ಬರುವ ಬಾಳೂರು ಸಮೀಪದ ಕಲ್ಲಕ್ಕಿ ಕಾಫಿ ತೋಟದಲ್ಲಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪತಿಯನ್ನ ಬಾಳೂರು ಪೊಲೀಸರು ಬಂಧಿಸಿದ್ಧಾರೆ. 

ಏನಿದು ಘಟನೆ? 

ಕಲ್ಲಕ್ಕಿ ಎಸ್ಟೇಟ್ ಲೈನಿನಲ್ಲಿ ದಾವಣಗೆರೆ ಮೂಲದ ಶಿವ ಹಾಗೂ ಪತ್ನಿ ಲೀಲಾಬಾಯಿ ಕಾರ್ಮಿಕರಾಗಿ ಎರಡು ವರ್ಷದಿಂದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ  ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಶಿವ ದೊಣ್ಣೆಯಿಂದ ಪತ್ನಿಯನ್ನ ಹೊಡೆದಿದ್ದಾನೆ. ಪರಿಣಾಮ  ಪತ್ನಿ ಲೀಲಾಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆ ಮುಚ್ಚಿ ಹಾಕಲು ಯತ್ನ

ಕೊಲೆ ಘಟನೆಯನ್ನು ಮುಚ್ಚಿಟ್ಟ ಆರೋಪಿ ಮರುದಿನ ಅಂದರೆ ನಿನ್ನೆ ಮಂಗಳವಾರ ಸಹಜ ಸಾವಾಗಿದೆ ಎಂದು ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ಧಾನೆ. ಅಲ್ಲದೆ  ಪತ್ನಿಯ ರಕ್ತಸಿಕ್ತ ಸೀರೆ ಬದಲಾಯಿಸಿ ಅನುಮಾನ ಬಾರದಂತೆ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದ. ಈ ಮಧ್ಯೆ ಪೊಲೀಸರಿಗೆ ಅನುಮಾಸ್ಪದ ಕರೆಯೊಂದು ತಲುಪಿದ್ದು, ತಕ್ಷಣವೇ ಸ್ಥಳಕ್ಕೆ ಬಾಳೂರು ಪೊಲೀಸರು ಆಗಮಿಸಿದ್ದಾರೆ. 

ಸ್ಥಳ ಮಹಜರು ನಡೆಸಿದ ಪೊಲೀಸರು ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿ,  ಆರೋಪಿ ಶಿವನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿ ಬಾಯಿಬಿಟ್ಟಿದ್ದಾನೆ.

ಇನ್ನೂ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಉಮಾಪ್ರಶಾಂತ್, ಮೂಡಿಗೆರೆ ಸರ್ಕಲ್ ಇನ್‌ಸ್ಪೆಕ್ಟರ್ ಸೋಮೇಗೌಡ, ತಲೆಗೆ ಬಾಳೂರು ಸಬ್ ಇನ್‌ಸ್ಪೆಕ್ಟರ್ ವಿ. ಶ್ರೀನಾಥ್ ರೆಡ್ಡಿ, ಎಎಸ್‌ ಐಗಳಾದ ರಾಜು, ವಿಶ್ವನಾಥ್, ಹೆಡ್ ಕಾನ್‌ಸ್ಟೆಬಲ್ ಶ್ರೀಧರ್, ಸಿಬ್ಬಂದಿ ಗಿರೀಶ್, ಮನು, ಅಭಿಷೇಕ್, ಮಹೇಶ್, ಸತೀಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು


ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?



ಬೆಂಗಳೂರು: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಮಲೆನಾಡು ಭಾಗದ ಸಮಸ್ಯೆಗಳ ಕುರಿತು ಸಂಬಂಧಿಸಿದ ಸಚಿವರು, ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಯಿತು.

ಅರಣ್ಯ ಮತ್ತು ಪರಿಸರ ಸಚಿವರು, ಕಾನೂನು, ಸಂಸದೀಯ ವ್ಯವಹಾರ ಸಚಿವರು, ಕಂದಾಯ ಸಚಿವರು, ಮಾನ್ಯ ಸಮಾಜ ಕಲ್ಯಾಣ ಸಚಿವರು, ಯುವಜನ ಸೇವೆ ಮತ್ತು ಬುಡಕಟ್ಟು ವರ್ಗಗಳ ಸಚಿವರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ರಾಜ್ಯದ ಅಡ್ವಕೇಟ್ ಜನರಲ್‌ರವರನ್ನು ಒಳಗೊಂಡಂತೆ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳಿದ್ದ  ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 

 

ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ, 94 ಸಿ, 94 ಸಿಸಿ ಹಾಗೂ ಬಹಳ ವರ್ಷದಿಂದ ಬಾಕಿ ಇರುವ ಸಂತ್ರಸ್ಥರ ಕುಟುಂಬಗಳ ಬೇಡಿಕೆಯ ಕುರಿತು ಮತ್ತು ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು  ಬಗ್ಗೆ ಸಂಬಂಧ ಪಟ್ಟ ಹಾಗು ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರು.

ಇನ್ನೂ ಈ ವೇಳೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಮಲೆನಾಡಿನ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ಮಧು ಬಂಗಾರಪ್ಪ ಅವರು ತಂದು ಶಾಶ್ವತ ಪರಿಹಾರಕ್ಕೆ ಏನೆಲ್ಲ ಮಾಡಬೇಕು ಎಂಬುದರ ಚರ್ಚಿಸಿದ್ದಾರೆ. ಮಲೆನಾಡಿನ ಜನರಿಗೆ, ರೈತರಿಗೆ ನ್ಯಾಯ ಒದಗಿಸಬೇಕಾಗಿದೆ. ಸುಸ್ಥಿರ ಅಭಿವೃದ್ಧಿಯ ಸಮತೋಲನ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಪಶ್ಚಿಮಘಟ್ಟದ ಹತ್ತು ಜಿಲ್ಲೆಗಳಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ನಡೆಯುತ್ತಿದೆ.  ಆನೆಗಳ ತುಳಿತಕ್ಕೆ ಒಳಗಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ‌. ಶರಾವತಿ ಕಣಿವೆ ಭಾಗದಲ್ಲಿ ಮಳೆಯಿಂದ ಹಾನಿ ಆಗಿದೆ. ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಸರ್ಕಾರ ಈಗಾಗಲೇ ಜಮೀನು ನೀಡಿದೆ ಎಂದರು.

1978 ರಲ್ಲಿ 17 ಸಾವಿರ ಎಕರೆ ಜಮೀನು ಸರ್ಕಾರ ನೀಡಿ ಆದೇಶ ಮಾಡಿದೆ. ಆದರೆ ಅದಕ್ಕೆ ಹೈ ಕೋರ್ಟ್ ತಡೆ ನೀಡಿರುವುದರಿಂದ ಸುಪ್ರೀಂ ಕೋರ್ಟ್ ಗೆ ಆ ವಿಚಾರ ಹೋಗಿದೆ. ನಾವು ಸುಪ್ರೀಂ ಕೋರ್ಟ್ ನಲ್ಲಿ ಈ ಸಮಸ್ಯೆ ಬಗ್ಗೆ ಮನದಟ್ಟು ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡುತ್ತೇವೆ. ಇನ್ನು ಈ ಭಾಗದಲ್ಲಿ ರೈತರಿಗೆ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಡೆದ ಚರ್ಚೆಯ ವಿಷಯಗಳು

1) ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್‌ ಯೋಜನೆಯಡಿ ಮುಳುಗಡೆ ಸಂತ್ರಸ್ಥರಾದ ರೈತರಿಗೆ ಪುನರ್ ವಸತಿಗಾಗಿ ಈ ಹಿಂದೆ 1958 ರಿಂದ 1969 ರವರೆಗಿನ ಅವಧಿಯಲ್ಲಿ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ವಿವಿಧ ಅರಣ್ಯ ಪ್ರದೇಶದಲ್ಲಿ ಪುನರ್ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ನಡೆಯಿತು. 


2)ಅರಣ್ಯ ಭೂಮಿಯನ್ನು ಡಿ-ರಿಸರ್ವ್ ಮಾಡುವ ಬಗ್ಗೆ ತೆಗೆದುಕೊಳ್ಳುವ ಕ್ರಮಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸುವ ಕುರಿತು

3) 2015ರ 'ಡಿ' ನೋಟಿಫಿಕೇಷನ್‌ ಆದೇಶಗಳನ್ನು ರದ್ದುಗೊಳಿಸಿದ್ದು, ಪುನಃ ಪರಿಶೀಲಿಸುವ ಕುರಿತು ಹಾಗೂ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಗಳ ಆರಣ್ಯ ಸಂರಕ್ಷಣಾ ಕಾಯ್ದೆ 1980ರ ರೀತ್ಯಾ 'ಡಿ' ನೋಟಿಫಿಕೇಷನ್ ಹಾಗೂ 'ಡಿ' ರಿವಿಜನ್ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನ‌ ಪ್ರಸ್ತಾವನೆ ಸಲ್ಲಿಸುವ ಬಗ್ಗೆ

4) ಅನುಸೂಚಿತ ಬುಡ್ಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಭೂ ಮಂಜೂರಾತಿ ಕುರಿತು ಮತ್ತು ಮೂರು ಹಂತದ ಅರಣ್ಯ ಹಕ್ಕು ಸಮಿತಿಗಳು ಸಾಧಿಸಿದ ಕಾರ್ಯ ಪ್ರಗತಿ ಮತ್ತು ಬಾಕಿಯಿರುವ ಮಂಜೂರಾತಿ ಅರ್ಜಿಗಳ ಕುರಿತು.

5) ದಿನಾಂಕ: 27-04-1978ರ ಪೂರ್ವದ ಅರಣ್ಯ ಒತ್ತುವರಿ ಸಕ್ರಮಗೊಳಿಸಿ ಪಟ್ಟಾ ವಿತರಿಸುವ ಬಗ್ಗೆ.

6) ಅರಣ್ಯ ಭೂಮಿ ಇಂಡೀಕರಣ ಕುರಿತು, (ವಿವಿಧ ಭೂ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರು ಮಾಡಲಾದ ಭೂಮಿಗಳು).

7) ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4(1) ರೀತಿಯ ಸರ್ಕಾರಿ ಭೂಮಿಗಳನ್ನು ಮೀಸಲು ಅರಣ್ಯ ಎಂದು ಘೋಷಿಸುವ ಬಗ್ಗೆ ಹೊರಡಿಸುವ ಪ್ರಾಥಮಿಕ ಅಧಿಸೂಚನೆಗೊಂಡು ಅಂತಿಮ ಅಧಿಸೂಚನೆಗೊಳಿಸಲು ಕಾಲಮಿತಿ ನಿಗದಿಗೊಳಿಸಿ ಬಗರ್ ಹುಕುಂ ಸಾಗುವಳಿದಾರರಿಗೆ ಹಾಗೂ ಅನಧಿಕೃತ ವಸತಿ ಕಟ್ಟಡಗಳ ಸಕ್ರಮ ಮಾಡುವ ಕುರಿತು, 

8) ಪರಿಭಾವಿತ ಅರಣ್ಯ (Deemed forest) ಅಧಿಸೂಚನೆ ಕುರಿತು

 9) ಕರ್ನಾಟಕ ಭೂ-ಕಂದಾಯ ಕಾಯ್ದೆ 1964ರ ಸೆಕ್ಷನ್ 79(2)ರ ರೀತಿಯ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನ ಬೆಟ್ಟ, ಕಾನು(ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ), ಬೆಟ್ಟ ಭೂಮಿ (ಉತ್ತರ ಕನ್ನಡ ಜಿಲ್ಲೆ), ಕುಮ್ಮಿ (ದಕ್ಷಿಣ ಕನ್ನಡ ಜಿಲ್ಲೆ), ಜಮ್ಮಾ ಬಾಣೆ (ಕೊಡಗು) ಹಾಗೂ ಮೋಟಸಾಲು ತರಿ ಜಮೀನು (ಹೈದರಾಬಾದ್ ಕರ್ನಾಟಕ) ಅನಧಿಕೃತ ಸಾಗುವಳಿ ಹಾಗೂ ಅನಧಿಕೃತ ವಸತಿ ಸಕ್ರಮಗೊಳಿಸುವ ಕುರಿತು.

10) ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 1888ರ ಸೆಕ್ಷನ್, ಕಂದಾಯ ಇಲಾಖೆ, 10(ಎಲ್) ಅಪೆಂಡಿಕ್ಸ್-'ಸಿ' ನಿಯಮ 47 ರೀತಿಯ ಕರ್ನಾಟಕ ಭೂ-ಕಂದಾಯ ಕಾಯ್ದೆ 1964 ಜಾರಿಗೆ ಬರುವ ಪೂರ್ವದಲ್ಲಿ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ಮಂಜೂರು ಮಾಡಲಾದ ಹಂಗಾಮಿ ಮನೆಗಳ ಪತ್ರಗಳನ್ನು ಖಾಯಂಗೊಳಿಸುವ ಬಗ್ಗೆ.

11) ಕೆ.ಎಲ್.ಆರ್. ಕಾಯ್ದೆ 1964ರ ಕಲಂ 94 ರನ್ವಯ 94ಸಿ ಮತ್ತು 94ಸಿಸಿ ಪ್ರಗತಿ ಕುರಿತು.ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 


ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಸಮೀಪ, ನಿಂತಿದ್ದ ಕ್ಯಾಂಟರ್​ ಒಂದಕ್ಕೆ ಒಮಿನಿಯೊಂದು ಡಿಕ್ಕಿಯಾಗಿದೆ.   ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ -ಕೊಪ್ಪ ಶೃಂಗೇರಿಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.  ಕುಂಬಾರದಡಿಗೆ ಬಳಿ ರಸ್ತೆ ಬದಿಯಲ್ಲಿ  ಕ್ಯಾಂಟರ್ ವೊಂದು ನಿಂತಿತ್ತು . ಈ ವೇಳೆ  ಅತೀ ವೇಗದಲ್ಲಿ ಇದ್ದ ಓಮಿನಿ ಕಾರು ಕ್ಯಾಂಟರ್ ಗೆ ಗುದ್ದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.  


ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?