ಕುಂದಾಪುರದ ಬನ್ಸ್​ ರಾಘು ಕೊಲೆ ಕೇಸ್! ಶಿವಮೊಗ್ಗದ ಇಬ್ಬರು ಅರೆಸ್ಟ್​ ! ಆಗುಂಬೆ ಘಟನೆಯಲ್ಲಿಯು ಆರೋಪಿಗಳಿಗಿದೆ ಲಿಂಕ್?

Kundapur Buns Raghu Case! Two arrested from Shimoga! Is there a link to the accused in the Agumbe incident?ಕುಂದಾಪುರದ ಬನ್ಸ್​ ರಾಘು ಕೇಸ್! ಶಿವಮೊಗ್ಗದ ಇಬ್ಬರು ಅರೆಸ್ಟ್​ ! ಆಗುಂಬೆ ಘಟನೆಯಲ್ಲಿಯು ಆರೋಪಿಗಳಿಗಿದೆ ಲಿಂಕ್?

ಕುಂದಾಪುರದ ಬನ್ಸ್​ ರಾಘು ಕೊಲೆ ಕೇಸ್! ಶಿವಮೊಗ್ಗದ ಇಬ್ಬರು ಅರೆಸ್ಟ್​ ! ಆಗುಂಬೆ ಘಟನೆಯಲ್ಲಿಯು ಆರೋಪಿಗಳಿಗಿದೆ ಲಿಂಕ್?

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS

ದೂರದ ಕುಂದಾಪುರದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗದ ಇಬ್ಬರನ್ನ ಬಂಧಿಸಲಾಗಿದೆ. ಕುಂದಾಪುರದ ಚಿಕ್ಕನ್ ಸ್ಟಾಲ್​ ರಸ್ತೆಯಲ್ಲಿ  ರಾಘವೇಂದ್ರ ಅಲಿಯಾಸ್ ಬನ್ಸ್​ ರಾಘು ಎಂಬಾತನ ಕೊಲೆಯಾಗಿತ್ತು. ಕೊಲೆಯ ಬಳಿಕ, ಇದೊಂದು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದೇ ಹೇಳಲಾಗಿತ್ತು. 

ಇದೀಗ ಕುಂದಾಪುರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಸಂಗಮ್​ ಬಳಿಯಲ್ಲಿ ಬರುತ್ತಿದ್ದ ವ್ಯಾಗನರ್ ಕಾರು ಹಾಗೂ ಕೊಲೆಯಾದ ರಾಘುವರ ಕಾರಿಗೂ ಟಚ್ ಆಗಿತ್ತು. ಈ ಕಾರಣಕ್ಕೆ ರಾಘುವವರನ್ನ ಹಿಂಬಾಲಿಸಿಕೊಂಡು ಬಂದು ಇಬ್ಬರು ಜಗಳವಾಡಿದ್ದರು. ಅಲ್ಲದೆ ಹೊಡೆದಾಟ ನಡೆಸಿದ್ದರು. ಆನಂತರ ಓರ್ವ ರಾಘವೇಂದ್ರನಿಗೆ ಚುಚ್ಚಿ ಅಲ್ಲಿಂದ ಓಡಿಹೋಗಿದ್ದ.. ಈ ವೇಳೆ ರಾಘವೇಂದ್ರರಿಗೆ ಅಷ್ಟೊಂದು ಗಾಯವಾಗಿರಲಿಲ್ಲ. ಇದರ ಬೆನ್ನಲ್ಲೆ  ಕಾರಿನಲ್ಲಿದ್ದ ಮತ್ತೊಬ್ಬನೂ ರಾಘವೇಂದ್ರನಿಗೆ ಚುಚ್ಚಿ ಪರಾರಿಯಾಗಿದ್ದ ಪರಿಣಾಮ ರಾಘವೆಂದ್ರ ಸಾವನ್ನಪ್ಪಿದ್ದರು. 

ಪ್ರಕರಣ ಸಂಬಂಧ  ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದಕುಮಾರ್‌ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್‌ ನೇತೃತ್ವದಲ್ಲಿ 3 ವಿಶೇಷ ತಂಡ ರಚಿಸಲಾಗಿತ್ತು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 

ಇದೀಗ ಆರೋಪಿಗಳು ಪತ್ತೆಯಾಗಿದ್ದು, ಶಿವಮೊಗ್ಗ ಮೂಲದ ಶಫಿವುಲ್ಲಾ (40) ಹಾಗೂ ಇಮ್ರಾನ್ (43) ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳನ್ನು  2ನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ  ಹಾಜರು ಪಡಿಸಲಾಗಿದ್ದು, ಕೋರ್ಟ್ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 

ಮೂಲಗಳ ಪ್ರಕಾರ, ಇಬ್ಬರು ಆರೋಪಿಗಳ ಪೈಕಿ ಓರ್ವ ಉಡುಪಿ ಜಿಲ್ಲೆಯಲ್ಲಿ ಮದುವೆಯಾಗಿದ್ದು, ಕುಂದಾಪುರ, ಭಟ್ಕಳದಲ್ಲಿ  ಅಕ್ರಮ ದಂಧೆಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ. ಜುಗಾರಿ ಆಟದಲ್ಲಿ ಪಾಲ್ಗೊಳ್ಳುತ್ತಿದ್ದ ಇಬ್ಬರು ಆರೋಪಿಗಳು ಮಾರಕಾಸ್ತ್ರಗಳನ್ನು ತಮ್ಮೊಂದಿಗೆ ಇಟ್ಟುಕೊಂಡೆ ಓಡಾಡುತ್ತಿದ್ರು ಎಂದು ಹೇಳಲಾಗುತ್ತಿದೆ. ಇಬ್ಬರು ಆರೋಪಿಗಳು ಈ ಹಿಂದೆ ಆಗುಂಬೆಯಲ್ಲಿ ಸಂಭವಿಸಿದ ಆಕ್ಸಿಡೆಂಟ್​ ಒಂದರಲ್ಲಿ  ಒಬ್ಬರಿಗೆ ಚೂರಿಯಿಂದ ಇರಿದಿದ್ದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.  


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ