ಟ್ರ್ಯಾಕ್ಟರ್ ಪಲ್ಟಿಯಾಯ್ತು! ಮೈಮೇಲೆ ಮೂರು ಕರೆಂಟ್ ಕಂಬ ಬಿತ್ತು! ಯಮನೇ ಬೆನ್ನತ್ತಿದ್ರೂ ಬದುಕಿ ಬಂದ ಯುವಕ! VIRAL ಘಟನೆ

Malenadu Today

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS

ಹಣೆಬರಹ ಗಟ್ಟಿಯಿದ್ರೆ ಯಮ ಬಂದ್ರೂ ವಾಪಸ್ ಹೋಗುತ್ತಾನೆ ಎಂಬ ಮಾತಿದೆ. ಆ ಮಾತಿಗೆ ಪೂರಕವಾದ ಘಟನೆಯೊಂಧು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ನಡೆದಿದೆ. 

ಕರೆಂಟ್ ಕಂಬಗಳನ್ನು ಸಾಗಿಸ್ತಿದ್ದ ಟ್ರ್ಯಾಕ್ಟರ್​ವೊಂದು ಚಾಲಕನ ನಿಯಂತ್ರಕ್ಕೆ ಸಿಗದೆ ಹೊಲಕ್ಕೆ ನುಗ್ಗಿ ಪಲ್ಟಿಯಾಗಿತ್ತು. ಅಚಾನಕ್ ಆಗಿ ನಡೆದ ಈ ಘಟನೆಯಲ್ಲಿ ಕರೆಂಟ್ ಕಂಬಗಳೆಲ್ಲಾ ಹೊಲಕ್ಕೆ ಉರುಳಿದ್ದವು. ಇಷ್ಟೆ ಆಗಿದ್ದರೇ ಏನೂ ಆಗುತ್ತಿರಲಿಲ್ಲ. ಹೀಗೆ ಬಿದ್ದ ಕರೆಂಟ್ ಕಂಬಗಳು ಕೆಳಕ್ಕೆ ಬೀಳುವಾಗ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಯುವಕನು ಕೆಳಕ್ಕೆ ಬಿದ್ದಿದ್ದ. ಆತನ ಮೇಲೆ ಮೂರು ಕಂಬಗಳು ಬಿದ್ದಿದ್ದವು. ಮೇಲಕ್ಕೆ ಬರಲಾಗದ ಯುವಕನ ಜೀವ ಉಳದಿದ್ದೇ ಹೆಚ್ಚಾಗಿತ್ತು. 

ತಾಲೂಕಿನ ಹರಳಹಳ್ಳಿ ಬಳಿ ಈ ಘಟನೆ ನಡೆದಿತ್ತು. ಟ್ರ್ಯಾಕ್ಟರ್​ ನಲ್ಲಿ ಐದು ವಿದ್ಯುತ್ ಕಂಬಗಳಿದ್ದವು. ಅಪ್​ಸೆಟ್ ಆದಾಗ ಟ್ರ್ಯಾಕ್ಟರ್​ನಿಂದ ಕಂಬಗಳ ಪೈಕಿ ಮೂರು ಯುವಕನ ಮೈಮೇಲೆ ಬಿದ್ದಿವೆ. ಅದೃಷ್ಟಕ್ಕೆ ಆತನ ತಲೆ ಮೇಲೆ ಕಂಬ ಬೀಳಲಿಲ್ಲ. ತಕ್ಷಣ ಸ್ತಳಕ್ಕೆ ಬಂದ ಸ್ಥಳಿಯರು ಕೂಗಿ ಕರೆದು ಜನ ಸೇರಿ ಕರೆಂಟ್ ಕಂಬಗಳನ್ನ ಎತ್ತಿ ಜಾರಿಸಿ ಯುವಕನನ್ನ ಮೇಲಕ್ಕೆ ಎತ್ತಿದ್ದಾರೆ. ಬಳಿಕ ಆ್ಯಂಬುಲೆನ್ಸ್​ ಮೂಲಕ ಸ್ತಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಅಲ್ಲಿದ್ದವರು ಗಟ್ಟಿ ಜೀವ ಬಿಡಪ್ಪ ಇವನದ್ದು ಎನ್ನುತ್ತಿದ್ರು. ಯುವಕ ಅಪಾಯದಿಂದ ಪಾರಾಗಿ ಸದ್ಯ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದುಕೊಳ್ತಿದ್ದಾನೆ.  


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

Share This Article