ರಾಗಿಗುಡ್ಡ ಘಟನೆ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು! ಹೀಗೇಕೆ ಹೇಳಿದ್ರು ರೇಣುಕಾಚಾರ್ಯ!?

Renukacharya spoke about the incident that happened in Ragigudda, Shimogaಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ರೇಣುಕಾಚಾರ್ಯ ಮಾತನಾಡಿದ್ದಾರೆ

ರಾಗಿಗುಡ್ಡ ಘಟನೆ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು! ಹೀಗೇಕೆ ಹೇಳಿದ್ರು ರೇಣುಕಾಚಾರ್ಯ!?

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ನಿನ್ನೆ ಅವರು ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡ್ತಾ, ಶಿವಮೊಗ್ಗದ ರಾಗಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ  ಹಿಂದೂಗಳ ಮನೆಗಳು ಜಖಂ ಆಗಿದ್ದು ಕೂಡಲೇ ಅವರಿಗೆ ಪರಿಹಾರ ನೀಡಬೇಕು.  

ರಾಜ್ಯ ಸರ್ಕಾರವೇ ಮುಸ್ಲಿಂರ ತುಷ್ಟಿಕರಣಕ್ಕೆ ಮುಂದಾಗಿದ್ದು ಇದರಿಂದ ಪ್ರಚೋದನೆಗೆ ಒಳಗಾದ ಕೆಲ ಪುಂಡರು ಈ ರೀತಿಯ ಕೃತ್ಯವೆಸಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.  

ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದ್ದು ಖಂಡನೀಯ. ಹಿಂದುಗಳು ಯಾರೂ ಕೂಡ ಇಂತಹ ಕೃತ್ಯಗಳನ್ನು ಎಸಗುವುದಿಲ್ಲ ಎಂದ ಅವರು ಸಚಿವರು ಜನರ ಕ್ಷಮೆಯಾಚಿಸ ಬೇಕು ಎಂದು ಆಗ್ರಹಿಸಿದರು

.

ಶಿವ, ದುರ್ಗಮ್ಮ ಆಂಜನೇಯ ಶಿಷ್ಟ ಸಂಹಾರಕ್ಕೆ ಆಯುದ ಬಳಸುತ್ತಿದ್ದರು, ಆದರೇ ಇವರು ತಲ್ವಾರ್​ ಪ್ರದರ್ಶನ ಮಾಡಿದ್ದು ಯಾವ ಯಾವುದರ ಸಂಕೇತ ಎಂದು ಪ್ರಶ್ನೆ ಮಾಡಿದ ರೇಣುಕಾಚಾರ್ಯ, ಹಿಂದುಗಳ ಭಾವನೆಗಳಿಗೆ ಧಕ್ಕೆ ತರು ವಂತಹ ಹೇಳಿಕೆಗಳನ್ನು ನೀಡುವುದನ್ನು ಮೊದಲು ಕಾಂಗ್ರೆಸ್ ಸಚಿವರು ಬಿಡಬೇಕೆಂದರು

ಶಿವಮೊಗ್ಗ ಗಲಾಟೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ. ಜಿಲ್ಲಾಡಳಿತದ ನಿರ್ಲಕ್ಷವೇ ಗಲಾಟೆಗೆ ಕಾರಣ ಎಂದು ದೂರಿದರು.ಗೃಹ ಸಚಿವ ಜಿ. ಪರಮೇಶ್ವರ್ ಸಣ್ಣ ಘಟನೆ ಎಂದಿದ್ದಾರೆ. ಶಿವಮೊಗ್ಗದ  ಜನತೆ ತತ್ತರಿಸಿ ಹೋಗಿದ್ದಾರೆ. 

ಗಣೇಶ ಉತ್ಸವ ಸಮಿತಿಗಳು ಎಲ್ಲಾ ಕಡೆಗಳಲ್ಲಿಯೂ ಗಣೇಶ ಮೂರ್ತಿ ವಿಸರ್ಜನೆ ವಿಜೃಂಭಣೆಯಿಂದ ಮಾಡಿವೆ. ಕೆಲವು ಕಡೆ ವಿಸರ್ಜನೆ ಮಾಡಬೇಕು. ಒಂದೇ ಒಂದು ಸಣ್ಣ ಕಹಿ ಘಟನೆ ನಡೆದಿಲ್ಲ, ಶಾಂತಿ ರೀತಿಯಿಂದ ಕುಣಿದು ಕುಪ್ಪಳಿಸಿ ವಿಸರ್ಜನೆ ಮಾಡುತ್ತಾರೆ. ಎಲ್ಲಾದರೂ ನಡೆದಿದ್ದರೆ ತೋರಿಸಿ ಎಂದು ಸವಾಲು ಹಾಕಿದರು


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ