ನಶೆಯಲ್ಲಿ ಗಾಡಿ ಓಡಿಸಿದವರಿಗೆ 50 ಸಾವಿರ ದಂಡ!/ತೀರ್ಥಹಳ್ಳಿಯಲ್ಲಿ ಬಸ್ ಆಕ್ಸಿಡೆಂಟ್! ಕೌರಿಬೈಲ್​ನಲ್ಲಿ ಹುಲಿ ಪ್ರತ್ಯಕ್ಷ? ರೇಡಿಯೋ ಜಾಕಿಯಾದ ಸಂಸದರು! TODAY @NEWS

Rs 50,000 fine for drunken driving!/Bus accident in Thirthahalli! Tiger spotted in Kouribail? Answering questions as a radio jockey, MP B.Y. Raghavendra today @NEWSನಶೆಯಲ್ಲಿ ಗಾಡಿ ಓಡಿಸಿದವರಿಗೆ 50 ಸಾವಿರ ದಂಡ!/ತೀರ್ಥಹಳ್ಳಿಯಲ್ಲಿ ಬಸ್ ಆಕ್ಸಿಡೆಂಟ್! ಕೌರಿಬೈಲ್​ನಲ್ಲಿ ಹುಲಿ ಪ್ರತ್ಯಕ್ಷ? ರೇಡಿಯೋ ಜಾಕಿಯಾಗಿ ಪ್ರಶ್ನೆಗಳಿಗೆ ಉತ್ತರಿಸಿದ ಸಂಸದ ಬಿ.ವೈ.ರಾಘವೇಂದ್ರ TODAY @NEWS

ನಶೆಯಲ್ಲಿ ಗಾಡಿ ಓಡಿಸಿದವರಿಗೆ 50 ಸಾವಿರ ದಂಡ!/ತೀರ್ಥಹಳ್ಳಿಯಲ್ಲಿ ಬಸ್ ಆಕ್ಸಿಡೆಂಟ್! ಕೌರಿಬೈಲ್​ನಲ್ಲಿ ಹುಲಿ ಪ್ರತ್ಯಕ್ಷ? ರೇಡಿಯೋ ಜಾಕಿಯಾದ ಸಂಸದರು! TODAY @NEWS

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ಹೋಟೆಲ್​ನಲ್ಲಿ ಬೆಂಕಿ

ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ರಾತ್ರಿ ಹೋಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೋಟೆಲ್​ನಲ್ಲಿ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿದೆ.  ಬಾಲಾಜಿ ಹೋಟೆಲ್ ನಲ್ಲಿ ನಡೆದ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

ತೀರ್ಥಹಳ್ಳಿಯಲ್ಲಿ ಆಕ್ಸಿಡೆಂಟ್​  

ತೀರ್ಥಹಳ್ಳಿ:  ತಾಲ್ಲೂಕಿನ ಮೇಗರವಳ್ಳಿ ಸಮೀಪದ ಕೊಳಿಗೆ ಬಳಿ  ಖಾಸಗಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಹಾಲಾಡಿ ಮೂಲದ ಕುಟುಂಬವೊಂದು ಶಿವಮೊಗ್ಗ ಆಸ್ಪತ್ರೆಗೆ ಬಂದು ಕಾರಿನಲ್ಲಿ ವಾಪಸ್  ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ.  ತೀರ್ಥಹಳ್ಳಿಯಿಂದ ಬಿದರುಗೋಡು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಶೆ ಇಳಿಸಿದ ಪೊಲೀಸರು

ಭದ್ರಾವತಿ ತಾಲ್ಲೂಕಿನಲ್ಲಿ ಸಂಚಾರಿ ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ ಕಾರ್ಯಾಚರಣೆ ಕೈಗೊಂಡಿದ್ದರು. ಈ  ವೇಳೆ, ಐದು ಮಂದಿ ವಿರುದ್ಧ ಕೇಸ್​  ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣ ಸಂಬಂಧ 1 ನೇ ಎಸಿಜೆ ನ್ಯಾಯಾಲಯದ ನ್ಯಾಯಾಧೀಶರು ತಲಾ ಒಬ್ಬರಿಗೆ 10000. ದಂಡ ವಿಧಿಸಿದ್ದು, ಒಟ್ಟು  50 ಸಾವಿರ ದಂಡ ವಿಧಿಸಿದ್ದಾರೆ. 

ರೇಡಿಯೋ ಜಾಕಿಯಾದ ಸಂಸದ

ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಲೈವ್ ಫೋನ್ ಇನ್ ಕಾರ್ಯಕ್ರಮ ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಸಮುದಾಯ ಬಾನುಲಿಯಲ್ಲಿ  ಪ್ರಸಾರವಾಗಿದೆ, ಅಜೇಯ ಸಿಂಹರವರ ನಿರೂಪಯಣೆಯಲ್ಲಿ ಮಾತನಾಡಿದ ಸಂಸದರ ರಾಘವೇಂದ್ರರವರು  ಯಾವುದೇ ಕಾರಣಕ್ಕೂ ಭದ್ರಾವತಿಯ ವಿ ಐ ಎಸ್ ಎಲ್ ನ್ನು ಮುಚ್ಚಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ರು.  

 ಶಿವಮೊಗ್ಗ ಶಿಕ್ಷಣ ಕಾಶಿ, ಪ್ರವಾಸೋದ್ಯಮ ಕಾಶಿಯಾಗಿ ಹೇಗೆ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ತಿಳಿಸಿದರು.  

ಹೊಸನಗರ & ತೀರ್ಥಹಳ್ಳಿ ಗಡಿಯಲ್ಲಿ ಕಂಡಿದ್ದು ಹುಲಿಯೇ

ಶಿವಮೊಗ್ಗ ಜಿಲ್ಲೆ  ಹೊಸನಗರ ಮತ್ತು ತೀರ್ಥಹಳ್ಳಿಯ ಗಡಿ ಭಾಗದ ಸಮೀಪ ಇರುವ  ಕೌರಿಬೈಲು ಸುತ್ತಮುತ್ತ ಹುಲಿ ಕಾಣಿಸಿಕೊಂಡಿದೆ ಎಂಬ ಸಮಾಚಾರವೊಂದು ಕೇಳಿಬಂದಿದೆ. ಆದರೆ ಕಂಡಿದ್ದು ಹುಲಿನೇನಾ ಎಂಬುದು ಖಾತರಿಯಾಗಿಲ್ಲ. ಇನ್ನೂ ಬಗ್ಗೆ ಮಲೆನಾಡು ಟುಡೆ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅರಣ್ಯ ಪ್ರದೇಶದಲ್ಲಿ ಹುಲಿಯು ಇದ್ದು, ಚಿರತೆಗಳು ಸಹ ಇವೆ. ಆದರೆ ವನ್ಯಮೃಗ ಪ್ರತ್ಯಕ್ಷವಾಗಿರುವ ಯಾವುದೇ ಗ್ರಾಮಸ್ಥರು ಇದುವರೆಗೂ ದೂರು ಕೊಟ್ಟಿಲ್ಲ ಎಂದಿದ್ಧಾರೆ. 

ವಿದ್ಯುತ್ ಲೈನ್​ನ್ನೆ ಕದ್ದ ಕಳ್ಳರು

ಸಾಗರ ತಾಲ್ಲೂಕಿನ ತಾಲೂಕಿನ ಎಸ್.ಎಸ್. ಭೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಇನ್ನಿತರ ಗ್ರಾಮಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಗಳನ್ನು ವಿದ್ಯುತ್ ಕಂಬಗಳಿಂದಲೇ ಕಳ್ಳತನ ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.  ಟ್ರಾನ್ಸ್‌ಫಾರ್ಮರ್ಗೆ ಅಳವಡಿಸಿ ಕಂಬದ ಮೂಲಕ ತಂತಿ ಎಳೆಯಲಾಗಿತ್ತು. ಆದರೆ  ಲೈನ್​ ಕಟ್ ಮಾಡಿದ ಕಳ್ಳರು, ಕರೆಂಟ್ ಹರಿಯುವುದನ್ನ ತಡೆದು  ಸಾವಿರ ಮೀಟರ್‌ನಷ್ಟು ಉದ್ದದ ತಂತಿಯನ್ನು ಕದ್ದೊಯ್ದಿದ್ದಾರೆ.  


ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

ಪೋಸ್ಟ್ ಆಫೀಸ್​ನಲ್ಲಿ SB ಅಕೌಂಟ್ ಇದೆಯಾ? ಆಧಾರ್ ಲಿಂಕ್ ಮಾಡಿಸಿದ್ದೀರಾ? ಇಲ್ಲದಿದ್ದರೇ ರದ್ದಾಗುತ್ತೆ ಈ ಸೌಲಭ್ಯ! ವಿವರ ಓದಿ!

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ