ಶಾಸಕರ ಕಾರ್ಖಾನೆ ಎಸ್​. ಬಂಗಾರಪ್ಪ ರಾಜಕೀಯದಲ್ಲಿದ್ದ ಸಂದರ್ಭದಲ್ಲಿ ಅವರು ಮಾಡುತ್ತಿದ್ದ ಮ್ಯಾಜಿಕ್​ಗಳು ಹೇಗಿರುತ್ತಿತ್ತು ಗೊತ್ತಾ? - JP ಬರೆಯುತ್ತಾರೆ.

MLA's factory Do you know what the magic that S. Bangarappa used to do when he was in politics? - JP writes.

ಶಾಸಕರ ಕಾರ್ಖಾನೆ ಎಸ್​. ಬಂಗಾರಪ್ಪ ರಾಜಕೀಯದಲ್ಲಿದ್ದ ಸಂದರ್ಭದಲ್ಲಿ ಅವರು ಮಾಡುತ್ತಿದ್ದ ಮ್ಯಾಜಿಕ್​ಗಳು ಹೇಗಿರುತ್ತಿತ್ತು ಗೊತ್ತಾ? - JP  ಬರೆಯುತ್ತಾರೆ.

SHIVAMOGGA  |  Dec 26, 2023  |   ಶಾಸಕರ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆದಿರುವ ಬಂ...ಈಗಿದ್ದಿದ್ದರೆ. ಬಂಗಾರಪ್ಪ ರಾಜಕೀಯದಲ್ಲಿದ್ದ ಸಂದರ್ಭದಲ್ಲಿ ಅವರು ಮಾಡುತ್ತಿದ್ದ ಮ್ಯಾಜಿಕ್ ಗಳಿಗೆ ಎಂತವರು ಫಿಧಾ ಆಗ್ತಿದ್ರು- ಜೆಪಿ ಬರೆಯುತ್ತಾರೆ.

ರಾಜ್ಯದಲ್ಲಿ ಯಾವುದೇ ಚುನಾವಣೆಗಳು ಎದುರಾದ ಸಂದರ್ಭದಲ್ಲಿ ಸರ್ವಕಾಲಕ್ಕೂ ಮುನ್ನಲೆಗೆ ಬರುವ ರಾಜಕಾರಣಿಯಿದ್ದರೆ ಅದು ಸಾರೇಕೊಪ್ಪ ಬಂಗಾರಪ್ಪರ ಹೆಸರು ಮಾತ್ರ.ಹೌದು ಚುನಾವಣೆಯ ಗೆಲುವಿಗಾಗಿ ಬಂಗಾರಪ್ಪ ಮಾಡೋ ಮ್ಯಾಜಿಕ್ ,ತಂತ್ರಗಾರಿಕೆಗಳು ವಿರೋಧಿಗಳ ನಿದ್ದೆಗೆಡಿಸುತ್ತಿತ್ತು..,ಬಂಗಾರಪ್ಪರ ನಾಮಬಲದಲ್ಲಿ ಶಾಸಕರಾದವರೆಷ್ಟೋ ಮಂದಿ...ಶಾಸಕರ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆದಿರುವ ಬಂಗಾರಪ್ಪ ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಹಚ್ಟ ಹಸಿರಾಗಿಯೇ ಪ್ರಚಾರಕ್ಕೆ ಬಳಕೆಯಾಗಿದ್ದಾರೆ

ಬಂಗಾರಪ್ಪರ ನಾಮಬಲದಲ್ಲಿಯೇ ಚುನಾವಣಾ ಪ್ರಚಾರ.

ಸಾರೆಕೊಪ್ಪ ಬಂಗಾರಪ್ಪ..,ಅಂದರೆ ಎಂದರೆ ಪಕ್ಷಾಂತರ,ಹೊಸ ಪಕ್ಷಗಳ ಜನಕ.ಶಾಸಕರುಗಳನ್ನು ತಯಾರಿಸುವ ಕಾರ್ಖಾನೆ ಎಂಬೆಲ್ಲ ಹೆಗ್ಗಳಿಕೆಯಿದೆ.ಕಾಂಗ್ರೇಸ್ ಪಕ್ಷದೊಂದಿಗೆ ಮುನಿಸಿಕೊಂಡಾಗಲೆಲ್ಲಾ, ಹೊಸದಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಆ ಮುಖಾಂತರ ನಾಡಿನ ಅಭ್ಯುದಯ ಸಾಧ್ಯ ಎಂಬುದನ್ನು ಸಾರಿದ ಖ್ಯಾತಿ ಬಂಗಾರಪ್ಪರಿಗಿದೆ..ಬಂಗಾರಪ್ಪ ಒಬ್ಬರು ರಾಜಕಾರಣಿ ಅನ್ನೋದಕ್ಕಿಂತಲೂ ಅವರಲ್ಲೊಬ್ಬ ಸಾಹಿತಿ,ಕಲೆಗಾರ ಸಂಗೀತಗಾರ,ಕ್ರೀಡಾಪಟು ಎಲ್ಲರೂ ಮನೆ ಮಾಡಿದ್ದಾರೆ.ಬಂಗಾರಪ್ಪ ಹಾಡಿದರೆ,ಕುಣಿದರೆ,ಹಾಸ್ಯಮಾಡಿದರಷ್ಟೆ ಅಭಿಮಾನಿಗಳು ಮೆಚ್ಚುತ್ತಿದ್ದರು.

 READ  : ಬಂಗಾರ...ಬಂಗಾರ..ಸಾರೇಕೊಪ್ಪದ ಬಂಗಾರ, ಸೋಲಿಲ್ಲದ ಸರದಾರ ಅಗಲಿದ ಆ ದಿನ ಏನೇನೆಲ್ಲಾ ಆಯ್ತು ನೋಡಿ / ಬಂಗಾರಪ್ಪರವರ ಸ್ಮರಣೆಯ ಸರಣಿ

ಬಂಗಾರಪ್ಪರನ್ನು ರಾಜಕಾರಣಿ ರೀತಿ ಜಿಲ್ಲೆಯ ಜನರು ಅವರನ್ನು ನೋಡದೆ ಅವರೊಬ್ಬ ಶ್ರೀಸಾಮನ್ಯರಂತೆ ಜನೋಪಕಾರಿ ಕೆಲಸ ಮಾಡಿದ್ದರಿಂದಲೇ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಕಾಲ ಬಂಗಾರಪ್ಪನ್ನು ಸೋಲಿಲ್ಲದ ಸರದಾರನನ್ನಾಗಿ ಮಾಡಿದರು.ನಾಡಿನ ರಾಜಕೀಯ ಆಕಾಶದಲ್ಲಿ ಬಂಗಾರಪ್ಪ ದೃವತಾರೆಯಾಗಿ ಮಿನುಗಿದರು.ಶಾಂತವೇರಿ ಗೋಪಾಲ ಗೌಡರ ನಂತರದಲ್ಲಿ ಕರ್ನಾಟಕದ ರಾಜಕೀಯ ನೆಲದಲ್ಲಿ ಸಮಾಜವಾದಿ ಪಕ್ಷದ ಬೇರುಗಳಿಗೆ ನೀರು ಎರೆದು ಸಮಾಜವಾದಿ ರಾಜಕೀಯ ಚಿಂತನೆಗಳನ್ನು ಪೋಷಿಸಲು,ಪ್ರಯತ್ನಿದ ಬಂಗಾರಪ್ಪ ಅತ್ಯಂತ ಕ್ರೀಯಾಶೀಲ ಸೋಷಿಯಲಿಸ್ಟ್ ರಾಜಕಾರಣಿ.

ರಾಜಕೀಯ ಬದುಕಿನಲ್ಲಿ ಪಕ್ಷ ಬಿಟ್ಟು.., ಪಕ್ಷ ಕಟ್ಟಿ ಕೊನೆಯಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದ ಬಂಗಾರಪ್ಪ ಆ ಪಕ್ಷದಲ್ಲಿದ್ದುಕೊಂಡೆ ಇಹದ ಯಾತ್ರೆ ಮುಗಿಸಿದರು.ಬಂಗಾರಪ್ಪ ಇಲ್ಲದ  ಚುನಾವಣೆಯಲ್ಲಿ ಅವರ ನಾಮಬಲ ಚುನಾವಣೆಯಲ್ಲಿ ಟ್ರಂಪಾ ಕಾರ್ಡ್ ಆಗಿ ಬಳಕೆಯಾಗುತ್ತಿದೆ.ರಾಜಕೀಯದ ಆಳ ಅಗಲಗಳದ ಪಟ್ಟುಗಳನ್ನು ಅರಿತಿದ್ದ ಬಂಗಾರಪ್ಪ ...ಜನರ ನಾಡಿ ಮಿಡಿತ ಅರಿತೇ ತಂತ್ರಗಾರಿಕೆ ರೂಪಿಸುತ್ತಿದ್ದರು.ಅವರು ಪ್ರಯೋಗಿಸಿದ ದಾಳಗಳು..ಹಲವರಿಗೆ ರಾಜಕೀಯ ಭವಿಷ್ಯ ಕಲ್ಪಿಸಿದರೆ...ಎದುರಾಳಿಗಳ ರಾಜಕೀಯ ಭವಿಷ್ಯವನ್ನು ಮಸುಕಾಗಿಸಿದೆ.

ಪಕ್ಷದಲ್ಲಿ ಉಸಿರುಕಟ್ಟಿದ ವಾತಾವರಣ ಸೃಷ್ಟಿಯಾದಾಗೆಲ್ಲಾ ಬಂಗಾರಪ್ಪ ಯಾರನ್ನೂ ಲೆಕ್ಕಿಸಿದೆ ಪಕ್ಷದಿಂದ ಹೊರಬಂದು ಬೇರೆ ಪಕ್ಷ ಸೇರಿದ್ದಾರೆ..ಹೊಸ ಪಕ್ಷ ಕಟ್ಟಿದ್ದಾರೆ.ಆ ಸಂದರ್ಭದಲ್ಲಿಯೇ ಬಂಗಾರಪ್ಪ ಹಲವು ಕಾರ್ಯಕರ್ತರನ್ನು ಅಭಿಮಾನಿಗಳನ್ನು ತಮ್ಮ ನಿಷ್ಠರನ್ನು ಶಾಸಕ  ಸಂಸದರನ್ನಾಗಿ ಮಾಡಿದ್ದಾರೆ.ರಾಜ್ಯದ ರಾಜಕಾರಣದಲ್ಲಿ ಬಂಗಾರಪ್ಪರ ಗರಡಿಯಲ್ಲಿ ಪಳಗಿದವರು ಸಾಕಷ್ಟು ಮಂದಿಯಿದ್ದಾರೆ

READ :  ಸಾರೆಕಕೊಪ್ಪ ಬಂಗಾರಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಮತ್ತು ಯಾತ್ರೆ ಕುಬಟೂರಿನಿಂದ ಸೊರಬದವರೆಗಿನ ಮನಕಲುಕುವ ದೃಷ್ಯ?! ಸಾರೇಕೊಪ್ಪ ಬಂಗಾರಪ್ಪರ ನೆನಪಿನ ಸ್ಮರಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಶಿವಮೊಗ್ಗ ಜನತೆಗೆ ಪರಿಚಯವೇ ಇಲ್ಲದ ಸಂದರ್ಭದಲ್ಲಿ ತಟ್ಟನೇ ನಿಲ್ಲಿಸಿ ಇಬ್ಬರನ್ನು ಶಾಸಕರನ್ನಾಗಿ ಮಾಡಿದ್ದರು.ಕೆ.ಜಿ ಶಿವಪ್ಪರನ್ನು ಎಂಪಿಯಾಗಿ ಮಾಡಿದರೆ..,ಡಾಕ್ಟರ್ ಜಿ.ಡಿ ನಾರಾಯಣಪ್ಪ,ಬಿ.ಎನ್ ಮಹಾಲಿಂಗಪ್ಪ,ಹೆಚ್,ಎಂ ಚಂದ್ರಶೇಖರಪ್ಪ,ತಮ್ಮ ಪುತ್ರ ಕುಮಾರ್ ಬಂಗಾರಪ್ಪರನ್ನು ಶಾಸಕರನ್ನಾಗಿ ಮಾಡಿದರು.ರಾಜ್ಯದಲ್ಲಿ ಯು.ಆರ್ ಸಭಾಪತಿ,ಸ್ಪೀಕರ್ ಕೋಳಿವಾಡ,ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್,ವಿ.ಆರ್.ಸುದರ್ಶನ್,ಸೇರಿದಂತೆ ಹಲವು ಮಂದಿ ಬಂಗಾರಪ್ಪರ ಗರಡಿಯಿಂದ ಬಂದಿದ್ದಾರೆ.ಪಂಚಾಯಿತಿ ಚುನಾವಣೆಯಲ್ಲಿ,ನಿಗಮ ಮಂಡಳಿಗಳಲ್ಲಿ  ಬಂಗಾರಪ್ಪರಿಂದಾಗಿ ರಾಜಕೀಯ ಜೀವನ ಕಂಡವರು ಹಲವಾರು ಮಂದಿಯಿದ್ದಾರೆ

1976 ರ ಚುನಾವಣೆಯಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಬಂಗಾರಪ್ಪ ಏಳು ಬಾರಿ ಶಾಸಕರಾಗಿ..ನಾಲ್ಕು ಬಾರಿ ಎಂಪಿಯಾಗಿದ್ದಾರೆ.ಬಂಗಾರಪ್ಪ ನಾಲ್ಕು ಪಕ್ಷಗಳನ್ನು ಕಟ್ಟಿದರೆ..ಹತ್ತು ಪಕ್ಷಗಳನ್ನು ಪ್ರತಿನಿಧಿಸುವ ಮೂಲಕ ಪಕ್ಷಾಂತರಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದರು. .ಬಂಗಾರಪ್ಪ ಚುನಾವಣೆ ಬಂದಾಗಲೆಲ್ಲಾ ಮತದಾನಕ್ಕೂ ಮುನ್ನ ನಲ್ವತ್ನಾಲ್ಕು ಗಂಟೆಗಳಲ್ಲಿ ಮಾಡುತ್ತಿದ್ದ ಮ್ಯಾಜಿಕ್ ಮೇಲೆಯೇ ಎದುರಾಳಿಗಳು ಕಣ್ಣು ನೆಡುತ್ತಿದ್ದರು.ಹಣ ಹೆಂಡ ಹಂಚುತ್ತಾರೆಂಬ ಆರೋಪವಿದ್ದರೂ..ಬಂಗಾರಪ್ಪ ಕೊನೆ ಹಂತದಲ್ಲಿ ಜನರ ನಾಡಿಮಿಡಿತ ಅರಿತು ಮತದಾರರ ಚಿತ್ತ ತಮ್ಮ ಮೇಲಿರುವಂತೆ ಮಾಡುತ್ತಿದ್ದರು.

READ : ಸಾರೆಕೊಪ್ಪ ಬಂಗಾರಪ್ಪರವರ ಅಂತ್ಯ ಸಂಸ್ಕಾರದ ನೆನಪುಗಳ ಮಾಲಿಕೆ-ಭಾಗ-01/ ಮಲೆನಾಡು ಟುಡೆಯ ತಂಡ ಸರಣಿ ವಿಡಿಯೋ/ ಸೋಲಿಲ್ಲದ ಸರದಾರನಿಗೆ ಅರ್ಪಣೆ



ಅದು ರಾಜಕಾರಣದಲ್ಲಿ ಅವರಿಗೊಲಿದ ಮಾಂತ್ರಿಕ ಶಕ್ತಿ...ಆದರೆ ಇಳಿವಯಸ್ಸಿನಲ್ಲಿ ಬಂಗಾರಪ್ಪರ ಆ ಮ್ಯಾಜಿಕ್ ಗಳು ಕೆಲಸ ಮಾಡಲಿಲ್ಲ.ಬಂಗಾರಪ್ಪರ ಪಟ್ಟುಗಳನ್ನು ಅರಿತಿದ್ದ ಶಿಷ್ಯರೇ ಬೇರೆ ಪಕ್ಷಗಳಲ್ಲಿದ್ದು ಕೊಂಡು ಅದನ್ನೇ ಪ್ರತ್ಯಸ್ತ್ರವನ್ನಾಗಿ ಮಾಡಿದರು.2004 ರಲ್ಲಿ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ ಬಂಗಾರಪ್ಪ ಆ ಪಕ್ಷಕ್ಕೆ ಶಕ್ತಿ ತುಂಬಿದರು.ಅಲ್ಲಿಯವರೆಗೆ ಒಂದೆರೆಡು ಕ್ಷೇತ್ರಗಳಿಗೆ ಸೀಮೀತವಾಗಿದ್ದ ಬಿಜೆಪಿ ಈಗ ರಾಜ್ಯ ರಾಜಕೀಯದ ಶಕ್ತಿಕೇಂದ್ರವಾಗಿ ಬಿಂಬಿತವಾಗಿದೆ.

ಬಂಗಾರಪ್ಪ ಇಲ್ಲದ ಹೊತ್ತಿನಲ್ಲಿ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ಬಂಗಾರಧಾಮ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಬಂಗಾರಪ್ಪರ ಸವಿ ನೆನಪನ್ನು ಮೆಲಕು ಹಾಕುವ ಕಾರ್ಯಕ್ರಮ ಸೊರಬದಲ್ಲಿ ನಡೆಯುತ್ತಿರುವುದು ಅವರ ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. .

ಹಾಸ್ಯ,ವಿಡಂಬನೆ,ಪ್ರನಾಳಿಕೆ ವಿಷಯಗಳನ್ನಿಟ್ಟುಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದ್ದ ಬಂಗಾರಪ್ಪರನ್ನು ನೋಡಿದಾಗ..ಇಂದಿನ ರಾಜಕಾರಣಿಗಳ ಆರೋಪ ಪ್ರತ್ಯಾರೋಪಗಳು ಕೀಳು ರಾಜಕೀಯವನ್ನು ಬಿಂಬಿಸುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸ.