ಲೋಕಸಭೆ ಚುನಾವಣಾ ಕಣಕ್ಕೆ ಇಳಿಯುವುದಿಲ್ಲವೆಂದು ಸಂಸದ ಬಿ.ವೈ.ರಾಘವೇಂದ್ರ ಸವಾಲ್ ಹಾಕಿದ್ದೇಕೆ?

Mp B.Y. Raghavendra has challenged not to contest the Lok Sabha elections.

ಲೋಕಸಭೆ ಚುನಾವಣಾ ಕಣಕ್ಕೆ ಇಳಿಯುವುದಿಲ್ಲವೆಂದು ಸಂಸದ ಬಿ.ವೈ.ರಾಘವೇಂದ್ರ ಸವಾಲ್ ಹಾಕಿದ್ದೇಕೆ?

SHIVAMOGGA  |  Dec 26, 2023  |   ತುಂಗಭದ್ರಾ ಸಕ್ಕರೆ ಕಾರ್ಖಾನೆಗೆ ಸೇರಿದ ಜಾಗದಲ್ಲಿ ನನ್ನದೂ ಪಾಲಿದೆ ಎಂದು ಆರೋಪಿಸಿ ಕಾಂಗ್ರೆಸ್‌ನವರು ಜಿಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನು ಅವರು ಸಾಬೀತುಪಡಿಸಬೇಕು. ಸಾಬೀತಾದರೆ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯುವುದಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ರವರು ಸವಾಲು ಹಾಕಿದ್ದಾರೆ

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ವ ಮಾತನಾಡಿದ ಅವರು, ನಾನು ರೈತರ - ಪರವಿದ್ದೇನೆ. ಜಾಗದಲ್ಲಿ ನನ್ನ ಪಾಲು ಇಲ್ಲ. ಸಕ್ಕರೆ ಆ ಕಾರ್ಖಾನೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರ ಬಡಾವಣೆಗಳಲ್ಲಿ ದೊಡ್ಡವರ ಪಾತ್ರವಿದೆ. ಸ್ವತಃ

ಜಿಲ್ಲಾ ಉಸ್ತುವಾರಿ ಸಚಿವರೇ ಡಿಸಿಯವರಿಗೆ ಮತ್ತು ವಿವಿಧ ಇಲಾಖೆಯವರಿಗೆ ತೊಂದರೆ ಕೊಡದಂತೆ ಒತ್ತಡ ಹೇರುತ್ತಿದ್ದಾರೆಂಬ ಮಾಹಿತಿ ಇದೆ. ಆದರೂ ನನ್ನ ಮೇಲೆ ಆರೋಪವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದರು.

ದೇವಿ ಶುಗರ್ಸ್ ಕಂಪನಿ ಮುಚ್ಚಿದ ಮೇಲೆ ಅದರ ಸಾಲ ವಸೂಲಾತಿಗೆ ಎಸ್‌ಬಿಎಂ ಜಾಗವನ್ನು ತನ್ನ ವಶಕ್ಕೆ ಪಡೆದಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಇದನ್ನು ರದ್ದುಗೊಳಿಸಿದೆ. 2374 ಎಕ್ರೆ ಜಮೀನನ್ನು ಮಾಲಿಕರ ವಶಕ್ಕೆ ಮರಳಿಸಲು ಆದೇಶಿಸಿದೆ.

READ : ಭದ್ರಾವತಿಯಲ್ಲಿ ಒಂದು ಪಾಸಿಟಿವ್ ಕೇಸ್! ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟಿದೆ ಕೊರೊನಾ ಪ್ರಕರಣ ! ಇಲ್ಲಿದೆ ರಿಪೋರ್ಟ್​ !?

ಕಾರ್ಖಾನೆ ಇರುವ ಜಾಗವನ್ನು ಹೊರತುಪಡಿಸಿ ಉಳಿದೆಡೆ ರೈತರು ಉಳುಮೆ ಮಾಡುತ್ತಿದ್ದಾರೆ. ಹಲವರು ಮನೆ ಕಟ್ಟಿಕೊಂಡಿದ್ದಾರೆ. ತೋಟ, ಗದ್ದೆ ಮಾಡಿಕೊಂಡಿದ್ದಾರೆ. ಸರಕಾರಿ ಕಟ್ಟಡ, ಕಚೇರಿಯೂ ಇದೆ. 

ಈಗ ಇವುಗಳನ್ನು ರಕ್ಷಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದರು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ರೈತರ ಹಿತ ಮತ್ತು ನಿವಾಸಿಗಳನ್ನು ರಕ್ಷಿಸಬೇಕೆಂದು ರಾಘವೇಂದ್ರ ಆಗ್ರಹಿಸಿದರು.

11-5-2023 ರಂದು ಮದ್ರಾಸ್ ಹೈಕೋರ್ಟ ಈ ಹಿಂದೆ ಲಿಕ್ವಿಡೇಶನ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ, ಕಂಪನಿಯು ಸರ್ಕಾರಕ್ಕೆ ಕಟ್ಟಬೇಕಾಗಿರುವ ಕಂದಾಯ ಬಾಕಿ " ಹಾಗೂ ಇತರರಿಗೆ ಪಾವತಿಸಬೇಕಾಗಿರುವ ಸಾಲವನ್ನು ಸಂದಾಯ ಮಾಡಿದ ನಂತರ, ಕೆಲವು ಜಮೀನುಗಳ ಪಹಣಿ ಕಾಲಂ 9 ರಲ್ಲಿ ಸರ್ಕಾರಿ ಪಡಾ ಎಂದು ನಮೂದಿಸಿರುವುದನ್ನು ತೆಗೆದು ತುಂಗಭದ್ರಾ ಶುಗರ ವರ್ಕ್ಸ ಕಂಪನಿ ಇವರಿಗೆ ಸೇರಿದ ಎಲ್ಲಾ ಜಮೀನುಗಳನ್ನು ವಾಪಸ್ಸು ಕಂಪನಿಗೆ 12 ವಾರಗಳಲ್ಲಿ ಹಸ್ತಾಂತರಿಸಲು ಆದೇಶಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರರವರು ತಿಳಿಸಿದ್ದಾರೆ.