ಭದ್ರಾವತಿಯಲ್ಲಿ ಒಂದು ಪಾಸಿಟಿವ್ ಕೇಸ್! ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟಿದೆ ಕೊರೊನಾ ಪ್ರಕರಣ ! ಇಲ್ಲಿದೆ ರಿಪೋರ್ಟ್​ !?

One positive case in Bhadravathi! How many covid-19 cases are there in Shivamogga district? Here's the report!?

SHIVAMOGGA  |  Dec 26, 2023  |  ರಾಜ್ಯ ವ್ಯಾಪ್ತಿಯಲ್ಲಿ ಕೋವಿಡ್ 19 ಸದ್ದು ಮತ್ತೆ ಹೆಚ್ಚಾಗುತ್ತಿದೆ. ಅದರಲ್ಲಿಯು ನಿನ್ನೆಯ ಸ್ಟೇಟ್ ರಿಪೋರ್ಟ್​ನಲ್ಲಿ ಮೂವರು ಸಾವಿನ ಬಗ್ಗೆ ವರದಿಯಾಗಿದೆ. ಇದು ಆತಂಕ ಮೂಡಿಸಿದೆ. 

ಈ ನಡುವೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ದೈನಂದಿನ ವರದಿ ಸಹ ಬಿಡುಗಡೆ ಯಾಗಿದೆ. ನಿನ್ನೆ ಸಂಜೆ ಬಿಡುಗಡೆಯಾದ ವರದಿಯಲ್ಲಿ, 

READ : ಭದ್ರಾವತಿಗೆ ವಾಪಸ್ ಬರುವಾಗ ಸಂಭವಿಸಿದ ಅಪಘಾತದಲ್ಲಿ ಶಾಸಕರ ಆಪ್ತ ದುರ್ಮರಣ! ನಡೆದಿದ್ದೇನು?

ನಿನ್ನೆಗೆ ಸೀಮಿತವಾಗಿ ಒಬ್ಬರಲ್ಲಿ ಮಾತ್ರ ಕೋವಿಡ್​ 19 ಸೋಂಕು ಪಾಸಿಟಿವ್ ಕಂಡು ಬಂದಿದೆ. ಒಟ್ಟು 103  ಕೋವಿಡ್ ಟೆಸ್ಟ್​ಗಳನ್ನ ಮಾಡಲಾಗಿದ್ದು, ಈ ಪೈಕಿ ಭದ್ರಾವತಿಯ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ರಿಪೋರ್ಟ್​ ಬಂದಿದೆ.. 

ಇನ್ನೂ ಇದುವರೆಗೂ ಕೊರೊನಾ ಪಾಸಿಟಿವ್ ಇರುವವರ ಸಂಖ್ಯೆ 8 ಕ್ಕೇ ಏರಿದ್ದು, ಈ ಪೈಕಿ  ಇಬ್ಬರನ್ನ ನಿರ್ದಿಷ್ಟ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು , ಆರು ಮಂದಿ ಹೋಮ್​ ಐಸೋಲೇಷನ್ ನಲ್ಲಿದ್ದಾರೆ