ಕಬಡ್ಡಿ ಆಟಗಾರರ ಕನಸನ್ನು ಕೊಂದ ವಿಧಿ | ಬಾರದ ಲೋಕಕ್ಕೆ ಸಂತೋಷ್​ !

Kabbadi player from Shimoga district Soraba died ಶಿವಮೊಗ್ಗ ಜಿಲ್ಲೆ ಸೊರಬದ ಕಬ್ಬಡಿ ಆಟಗಾರ ಸಾವನ್ನಪ್ಪಿದ್ದಾರೆ

ಕಬಡ್ಡಿ ಆಟಗಾರರ ಕನಸನ್ನು ಕೊಂದ ವಿಧಿ | ಬಾರದ ಲೋಕಕ್ಕೆ ಸಂತೋಷ್​ !

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Shivamogga | ಪ್ರತಿಭಾವಂತ ಕಬ್ಬಡಿ ಆಟಗಾರರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಸಂಭವಿಸಿದೆ. 

ಇಲ್ಲಿನ ಹುಲ್ತಿಕೊಪ್ಪದ ಸಂತೋಷ್​ ರವರು ರಾಜ್ಯಮಟ್ಟದ ಕಬ್ಬಡಿ ಆಟಗಾರರಾಗಿದ್ದರು. ಪ್ರೊ ಕಬ್ಬಡಿ ಟೂರ್ನಿಮೆಂಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದರು. ಈ ನಡುವೆ ಟ್ರ್ಯಾಕ್ಟರ್ ಅಪಘಾತದಲ್ಲಿ ಸಂತೋಷ್​ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 

READ : ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಉದ್ಯೋಗವಕಾಶ! ZP ಯಲ್ಲಿ ಕೆಲಸ!

ಬಡ ಕುಟುಂಬದ ಅವರನ್ನು ಉಳಿಸಿಕೊಳ್ಳಲು ಅವರ ಸ್ನೇಹಿತ ವರ್ಗ ಬಹಳಷ್ಟು ಕಷ್ಟಪಟ್ಟಿತ್ತಾದರೂ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಂತೋಷ್ ಸಾವನ್ನಪ್ಪಿದ್ದಾರೆ