ವಾಲಿಬಾಲ್ ಟೂರ್ನಿಗೆ ಹೊರಟ ಆಟಗಾರರಿಬ್ಬರ ದುರ್ಮರಣ! ಸೊರಬದಲ್ಲಿ ಸಾವನ್ನಪ್ಪಿದ ರಿಪ್ಪನ್ಪೇಟೆ ಯುವಕರು
Two natives of Ripponpet died near Chandragutti in Soraba ರಿಪ್ಪನ್ಪೇಟೆ ಮೂಲದ ಇಬ್ಬರು ಸೊರಬದ ಚಂದ್ರಗುತ್ತಿ ಸಮೀಪ ಸಾವನ್ನಪ್ಪಿದ್ದಾರೆ

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS
Shivamogga | ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸೊರಬದ ಚಂದ್ರಗುತ್ತಿ ಸಮೀಪದ ನ್ಯಾರ್ಶಿ ಬಳಿಯಲ್ಲಿ ಬೈಕ್ವೊಂದು ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರು ಹೊಸನಗರ ತಾಲೂಕು ರಿಪ್ಪನ್’ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ನಿವಾಸಿಗಳು. ಸುಬ್ರಹ್ಮಣ್ಯ (20) ಹಾಗೂ ಹರ್ಷ (20). ಚಂದ್ರಗುತ್ತಿ ಸಮೀಪದ ಕೆಂಚಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಹೊನಲು – ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ರು.
READ : ರಿಪ್ಪನ್ಪೇಟೆ ಪೊಲೀಸರ ಕಾರ್ಯಾಚರಣೆ ! 15 ದಿನಗಳಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರು!
ಆದರೆ ವಿದಿಯಾಟ ಬೇರೆಯದ್ದಾಗಿತ್ತು , ನ್ಯಾರ್ಶಿ ರಸ್ತೆಯ ತಿರುವಿನ ಬಳಿ ಬೈಕ್ ಕಂಟ್ರೋಲ್ ತಪ್ಪಿ ಬಂದ ವೇಗದಲ್ಲಿಯೇ ಮರಕ್ಕೆ ಗುದ್ದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್ ನುಜ್ಜುಗುಜ್ಜಾಗಿದ್ದು, ಸೊರಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.