ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಉದ್ಯೋಗವಕಾಶ! ZP ಯಲ್ಲಿ ಕೆಲಸ!

Malenadu Today

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

 

JOBNEWS| ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆಯಡಿಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅಭ್ಯರ್ಥಿಗಳ ನೇಮಕಕ್ಕೆ ಅರ್ಜಿ ಕರೆಯಲಾಗಿದೆ.

ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ  ತಾಂತ್ರಿಕ ಸಹಾಯಕರು (ಅರಣ್ಯ) – 4 ಹುದ್ದೆ, ತಾಂತ್ರಿಕ ಸಹಾಯಕರು (ಕೃಷಿ) 3 ಹುದ್ದೆ, ತಾಂತ್ರಿಕ ಸಹಾಯಕರು (ತೋಟಗಾರಿಕೆ) 4 ಹುದ್ದೆ, ತಾಂತ್ರಿಕ ಸಹಾಯಕರು (ಸಿವಿಲ್)‌ 2 ಹುದ್ದೆಗಳು, ಡೇಟಾ ಎಂಟ್ರಿ ಆಪರೇಟರ್‌ 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಅ.20 ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಬರುವ ನವೆಂಬರ್​ ಮೂರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಇನ್ನೂ ಈ ಸಂಬಂಧ ಜಾಹಿರಾತು ಪ್ರಕಟಿಸಲಾಗಿದೆ. ಇನ್ನೂ ಬಿಆರ್‌ಕೆ ಸರ್ವೀಸ್ ಪ್ರವೇಟ್ ಲಿಮಿಟೆಡ್, ರಾಜಾಜಿನಗರ ಬೆಂಗಳೂರು ಹೊರಗುತ್ತಿಗೆಯಡಿಯಲ್ಲಿ ಅಭ್ಯರ್ಥಿಗಳನ್ನು ಭರ್ತಿ ಮಾಡುತ್ತಿದೆ. ಉಳಿದ ವಿವರ ಇಲ್ಲಿದೆ 

 

ಆಸಕ್ತ, ಅರ್ಹ ಅಭ್ಯರ್ಥಿಗಳು https://shimoga.nic.in ಲಿಂಕ್ ಮೂಲಕ 3/112/2023ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ +91-8971396018.

 

Malenadu Today

 


Share This Article