ಶಿವಮೊಗ್ಗ , ಸಾಗರ , ಸೊರಬದಲ್ಲಿ ಪೊಲೀಸ್ ರೂಟ್ ಮಾರ್ಚ್! ಕಾರಣ ಇಲ್ಲಿದೆ

Police route march in Shivamogga, Sagar and Soraba! Here's why

ಶಿವಮೊಗ್ಗ , ಸಾಗರ , ಸೊರಬದಲ್ಲಿ ಪೊಲೀಸ್ ರೂಟ್ ಮಾರ್ಚ್! ಕಾರಣ ಇಲ್ಲಿದೆ
ಶಿವಮೊಗ್ಗ , ಸಾಗರ , ಸೊರಬದಲ್ಲಿ ಪೊಲೀಸ್ ರೂಟ್ ಮಾರ್ಚ್! ಕಾರಣ ಇಲ್ಲಿದೆ

ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023ರ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೂ ಸಿಆರ್​ಪಿಎಫ್​ ತುಕಡಿ ಆಗಮಿಸಿದೆ. ಈ ಸಂಬಂಧ ಇವತ್ತು ಪೂರ್ವ ವಲಯದ ಉಪ ಪೊಲೀಸ್ ಮಹಾ ನಿರ್ದೇಶಕ  ತ್ಯಾಗರಾಜನ್ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ಪೊಲೀಸ್​  ರೂಟ್ ಮಾರ್ಚ್​ ನಡೆಸಲಾಯ್ತು.

ಶಿವಮೊಗ್ಗ ನಗರದ ಎನ್.ಟಿ ರಸ್ತೆಯ ಅಂಬೇಡ್ಕರ್ ಹಾಸ್ಟೆಲ್ ನಿಂದ ಪ್ರಾರಂಭಿಸಿ ಎನ್ ಟಿ ರಸ್ತೆ ಮೂಲಕ ಸುಂದರಾಶ್ರಯ, ಓಟಿ ರಸ್ತೆ, ಎ.ಎ ಸರ್ಕಲ್, ಎಸ್.ಎನ್ ಸರ್ಕಲ್,  ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವೇಶ್ವರ ದೇವಸ್ಥಾನ, ಸಿನಿಮಾ ರಸ್ತೆ, ತಿಮ್ಮಪ್ಪನ ಕೊಪ್ಪಲು,  ಕೆ.ಆರ್ ಪುರಂ ರಸ್ತೆ, ಕಿರಣ್  ಮೆಡಿಲ್ ಕ್ರಾಸ್, ವಿಜಯ ಗ್ಯಾರೇಜ್, ಲಕ್ಷ್ಮಿ ಟ್ರಾಕ್ಟರ್ ಶೋ ರೂಂ, ಜಿ.ಎಸ್.ಕೆ.ಎಂ ರಸ್ತೆ ಮುಖಾಂತರವಾಗಿ ಎನ್ ಟಿ ರಸ್ತೆಯ ಅಂಬೇಡ್ಕರ್  ಹಾಸ್ಟೆಲ್ ಬಳಿ ಮುಕ್ತಾಯ ಮಾಡಲಾಗಿದೆ. 

ಇನ್ನೂ  ಅತ್ತ ಸಾಗರ ತಾಲ್ಲೂಕಿನಲ್ಲಿ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್​ ಜಗದೀಶ್​ ನೇತೃತ್ವದಲ್ಲಿ  ಪಥಸಂಚಲನ ನಡೆಸಲಾಗಿದೆ.  ಸಾಗರ ಉಪ ವಿಭಾಗ ಕಛೇರಿಯಿಂದ ಪ್ರಾರಂಭಿಸಿ ಸಾಗರ ಟೌನ್ ಹಳೆ ಬಸ್ ನಿಲ್ದಾಣದ ಮುಖಾಂತರ ಎ.ಸಿ ಕಛೇರಿ, ಪೋಸ್ಟ್ ಆಫಿಸ್, ಹಳೆ ಬಸ್ ನಿಲ್ದಾಣ, ಟಿವಿ ಶೋ ರೂಂ, ಮದರ್ ಥೆರೆಸಾ ವೃತ್ತ, ಎಕ್ಸ್ ಸರ್ಕಲ್ ಮಾರ್ಗವಾಗಿ ಎಸ್.ಎನ್ ಸರ್ಕಲ್ ಗೆ ಬಂದು ಮುಕ್ತಾಯಮಾಡಲಾಗಿದೆ. 

ಸೊರಬದಲ್ಲಿಯು ಪೊಲೀಸರು ಹಾಗೂ ಸಿಆರ್​ಪಿಎಫ್​ ಸಿಬ್ಬಂದಿ ಪಥಸಂಚಲನ ನಡೆಸಿದ್ದು, ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಸಾಗರ ರಸ್ತೆ, ಪುನಃ, ಖಾಸಗಿ ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಥಸಂಚನ ನಡೆಸಿ ನಂತರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ತಲುಪಿತು.