ರಾಗಿಗುಡ್ಡದಲ್ಲಿ ಇವತ್ತು ಎಷ್ಟು ಗಣಪತಿ ವಿಸರ್ಜನೆಯಾಗಲಿವೆ ಗೊತ್ತಾ!? 6 KSRP, 1 DR, 4 DYSP 9 ಇನ್ಸ್​ಪೆಕ್ಟರ್​ ಸೇರಿದಂತೆ 15 SI ಬಂದೋಬಸ್ತ್​ಗೆ ನಿಯೋಜನೆ

Do you know how many Ganapati will be dissolved in Ragigudda today?ರಾಗಿಗುಡ್ಡದಲ್ಲಿ ಇವತ್ತು ಎಷ್ಟು ಗಣಪತಿ ವಿಸರ್ಜನೆಯಾಗಲಿವೆ ಗೊತ್ತಾ!

ರಾಗಿಗುಡ್ಡದಲ್ಲಿ ಇವತ್ತು ಎಷ್ಟು ಗಣಪತಿ ವಿಸರ್ಜನೆಯಾಗಲಿವೆ ಗೊತ್ತಾ!? 6 KSRP, 1 DR,  4 DYSP 9 ಇನ್ಸ್​ಪೆಕ್ಟರ್​ ಸೇರಿದಂತೆ 15 SI  ಬಂದೋಬಸ್ತ್​ಗೆ ನಿಯೋಜನೆ

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

 

ಶಿವಮೊಗ್ಗದಲ್ಲಿಂದು ರಾಗಿಗುಡ್ಡದಲ್ಲಿ 14 ಗಣಪತಿಗಳ ವಿಸರ್ಜನೆ ಇವತ್ತು ನಡೆಯಲಿದೆ ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ್ ಕೈಗೊಂಡಿದೆ.



ದಿನಾಂಕ 24-09-2023 ರಂದು ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆಯುವ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ  ಎಸ್​ಪಿ ಮಿಥುನ್ ಕುಮಾರ್ ಜಿ. ಕೆ,  ರಾಗಿಗುಡ್ಡದ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ರೂಟ್ ಮಾರ್ಚ್ (Route March) ನಡೆಸಲಾಗಿದೆ 

ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಸುರೇಶ್, ಡಿವೈಎಸ್.ಪಿ, ಶಿವಮೊಗ್ಗ ಬಿ ಉಪ  ವಿಭಾಗ,  ಅಭಯ್ ಪ್ರಕಾಶ್ ಸೋಮನಾಳ್ ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಡಿಎಆರ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಕೆಎಸ್ಆರ್.ಪಿ ಮತ್ತು ಸಿವಿಲ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ಸಿಬ್ಬಂಧಿಗಳು ಈ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. 

ಹೆಚ್ಚಿನ ಬಂದೋಬಸ್ತ್​​ ನಿಯೋಜನೆ 

ಇನ್ನೂ ರಾಗಿಗುಡ್ಡದಲ್ಲಿ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ  ಬಂದೋಬಸ್ತ್ ಕರ್ತವ್ಯಕ್ಕೆ 04 ಪೊಲೀಸ್  ಉಪಾಧೀಕ್ಷಕರು, 09 ಪೋಲಿಸ್ ನಿರೀಕ್ಷಕರು, 15 ಪೊಲೀಸ್ ಉಪನಿರೀಕ್ಷಕರು, 31 ಸಹಾಯಕ ಪೊಲೀಸ್ ನಿರೀಕ್ಷಕರು, 189 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 110 ಗೃಹರಕ್ಷಕ ದಳ ಸಿಬ್ಬಂದಿಗಳು, 01 ಡಿಎಆರ್ ತುಕಡಿ ಮತ್ತು 06 ಕೆಎಸ್ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. 




ಇನ್ನಷ್ಟು ಸುದ್ದಿಗಳು