ಹಬ್ಬಗಳ ಬಂದೋಬಸ್ತ್​​ ನಡುವೆ ಆಪರೇಷನ್​​ ಕಿಡಿಗೇಡಿ! ಕಿರಿಕ್ ಆಕ್ಷನ್​ಗೆ ಶಿವಮೊಗ್ಗ ಪೊಲೀಸರ ಕ್ವಿಕ್ ರಿಯಾಕ್ಷನ್! ಮೂರು ಕೇಸ್​ ! ಮೂರು ಮೆಸೇಜ್ ! ಏನಿದು ?

Shimoga Police is taking quick action against rowdy activitiesರೌಡಿ ಚಟುವಟಿಕೆಗಳ ವಿರುದ್ಧ ಶಿವಮೊಗ್ಗ ಪೊಲೀಸರು ಕ್ವಿಕ್ ಆಕ್ಷನ್ ತೆಗೆದುಕೊಳ್ಳುತ್ತಿದ್ದಾರೆ

ಹಬ್ಬಗಳ ಬಂದೋಬಸ್ತ್​​ ನಡುವೆ ಆಪರೇಷನ್​​ ಕಿಡಿಗೇಡಿ! ಕಿರಿಕ್ ಆಕ್ಷನ್​ಗೆ  ಶಿವಮೊಗ್ಗ ಪೊಲೀಸರ ಕ್ವಿಕ್ ರಿಯಾಕ್ಷನ್! ಮೂರು ಕೇಸ್​ ! ಮೂರು ಮೆಸೇಜ್ ! ಏನಿದು ?

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

 ಈ ಕಡೆ ಗಣಪತಿ ಹಬ್ಬ, ಆ ಕಡೆ ಈದ್ ಮಿಲಾದ್ ಆಚರಣೆ, ಶಿವಮೊಗ್ಗ ಪೊಲಿಸರಿಗೆ ಪುರುಸೋತ್ತಿಲ್ಲದಷ್ಟು ಕೆಲಸ. ಬಂದೋಬಸ್ತ್​ಗಾಗಿ ಎರಡು ತಿಂಗಳಿನಿಂದ ಮಾಡಿದ ಕಸರತ್ತಿನ ಫಲಿತಾಂಶ ಇದೀಗ ಗೊತ್ತಾಗುವ ಸಮಯ.. ಒತ್ತಡ ಹಾಗೂ ಜವಾಬ್ದಾರಿಯನ್ನು ಸೂಕ್ಷ್ಮ ಜಿಲ್ಲೆಯಲ್ಲಿ ನಿಭಾಯಿಸಲೇ ಬೇಕಾದ ಸನ್ನಿವೇಶದಲ್ಲಿರುವ ಖಾಕಿಪಡೆಗೆ ಶಿವಮೊಗ್ಗದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಕೂಡ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ರೌಡಿಗಳಿಗೆ ಎಸ್​ಪಿ ಮಿಥುನ್ ಕುಮಾರ್ ಆ್ಯಂಡ್ ಟೀಂ ಖಡಕ್​ ಸಂದೇಶವನ್ನೆ ರವಾನಿಸಿದೆ. 

ಪ್ರಕರಣ ಒಂದು! 

ಬಳ್ಳಾರಿ ಜೈಲಿನಿಂದ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಮಾರ್ಕೆಟ್ ಲೋಕಿ ಕಿರಿಕ್​ ಮಾಡುತ್ತಿದ್ದ. ಜಾಗವೊಂದರ ವಿಚಾರಕ್ಕೆ ಕೇಸ್ ವಾಪಸ್ ತೆಗೆದುಕೊ ಎಂದು ಧಮ್ಕಿ ಹಾಕುತ್ತಲೇ ಇದ್ದ. 

ಇಲ್ಲಿದೆ ಸುದ್ದಿ ಲಿಂಕ್ ;  BREAKING NEWS / ಜೈಲಿನಿಂದಲೇ ಮಾರ್ಕೆಟ್ ಲೋಕಿಯಿಂದ ಜೀವ ಬೆದರಿಕೆಯ ಕರೆ! ಹುಡುಗರನ್ನ ಬಿಟ್ಟು ಹೆದರಿಸಿ, ವಾಟ್ಸ್ಯಾಪ್​ ಕಾಲ್​ನಲ್ಲಿ ಆವಾಜ್! ಏನಿದು ಕೇಸ್

ಇಷ್ಟೆ ಅಲ್ಲದೆ, 20 ಕ್ಕೂ ಹೆಚ್ಚು ಹುಡುಗರನ್ನ ಕಳುಹಿಸಿ ಸ್ಥಳವೊಂದರಲ್ಲಿ ಸಂತ್ರಸ್ತ ವ್ಯಕ್ತಿ ಆವಾಜ್ ಹಾಕಿಸುವ ಪ್ರಯತ್ನ ಮಾಡಿದ್ದ. ಈ ವಿಷಯ ಎಸ್​ಪಿ ಮಿಥುನ್ ಕುಮಾರ್​ ಗೆ ಗೊತ್ತಾಗುತ್ತಲೇ, ಡಿವೈಎಸ್​ಪಿ ಬಾಲರಾಜ್​ರಿಗೆ ಪ್ರಕರಣದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ. 

ರೌಡಿಗಳಿಗೆ ಸಿಂಹಸ್ವಪ್ನವೇ ಆಗಿರುವ ಬಾಲರಾಜ್, ಈ ​ ಪ್ರಕರಣ ಸಂಬಂಧ ಸ್ಟ್ರಾಂಗ್ ಕಂಪ್ಲೆಂಟ್ ಆಗುವಂತೆ ನೋಡಿಕೊಂಡಿದ್ದಾರೆ. ಬಳಿಕ ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾ ತಂಡ ಟಿಟಿಯೊಂದರಲ್ಲಿ ಬಂದು ಸಂತ್ರಸ್ತ ವ್ಯಕ್ತಿಗೆ ಧಮ್ಕಿ ಹಾಕಿದ್ದ ಹುಡುಗರನ್ನ ಸ್ಟೇಷನ್​ಗೆ ಕರೆತಂದು ವಿಚಾರಿಸಿದ್ದಾರೆ. 

ಇದನ್ನೂ ಸಹ ಓದಿ :ಬಳ್ಳಾರಿ ಜೈಲಿನಿಂದ ಲೋಕಿ ಬೆದರಿಕೆ ಕರೆ ಮತ್ತು ರೌಡಿ ಹಾವಳಿ! ADGP ಆರ್ ಹಿತೇಂದ್ರ ಹೇಳಿದ್ದೇನು?

ಅಸಲಿಗೆ ಆ ಹುಡುಗರ ಲೋಕಿ ಕಡೆಯಿಂದ ಟ್ರ್ಯಾಪ್ ಆಗಿದ್ದರು ಅನ್ನುವ ಸತ್ಯ ಆಗ ಪೊಲೀಸರಿಗೆ ಗೊತ್ತಾಗಿತ್ತು. ಏಕೆಂದರೆ ಊಟಕ್ಕೆ ಎಂದು ಹುಡುಗರನ್ನ ಕರೆದುಕೊಂಡು ಬಂದಿದ್ದ ಲೋಕಿ ಚೇಲಾಗಳು ಹುಡುಗ್ರನ್ನು ಶೋ ಕೊಡಲು ಬಳಸಿಕೊಂಡಿದ್ದರು. ಸದ್ಯ ಕಾನೂನು ಪ್ರಕ್ರಿಯೆಯಲ್ಲಿರುವ ಈ ಪ್ರಕರಣದಲ್ಲಿ ಪೊಲೀಸರು ಲೋಕಿಯ ಆವಾಜ್​ ತಣ್ಣಗೆ ಮಾಡಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. 

ಇದನ್ನು ಓದಿ :ಮಾರ್ಕೆಟ್ ಲೋಕಿ ಬೆದರಿಕೆ ಕರೆಗೆ ಮತ್ತೆ ಟ್ವಿಸ್ಟ್! ಹೊರಬಿತ್ತು ‘FACE ಮಾಡ್ತೀಯಾ’ ಆಡಿಯೋ! TT ತುಂಬಾ ಹುಡುಗರನ್ನ ಕಳುಹಿಸಿ ಹೆದರಿಸಿದ ದೃಶ್ಯ

ಪ್ರಕರಣ ಎರಡು

ಅತಿಯಾದರೆ ಅಮೃತವೂ  ವಿಷವೇ! ಆತ್ಮೀಯನೂ ಶತ್ರುವೇ ಎಂದು ಹೇಳಲಾಗುತ್ತೆ…ಅದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ಮೊನ್ನೆ ಮೊನ್ನೆ ರೌಡಿಯೊಬ್ಬನ ಹಾವಳಿ ತಡೆಯಲಾಗದೇ ಗುಂಪೊಂದು ಆವಾಜ್ ಹಾಕುತ್ತಿದ್ದ ರೌಡಿಯನ್ನೆ ಕಿಡ್ನ್ಯಾಪ್ ಮಾಡಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿತ್ತು. 

ಸುದ್ದಿ ಲಿಂಕ್ ಇಲ್ಲಿದೆ  : ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE

ಇಲ್ಲಿ ಪೆಟ್ಟು ತಿಂದಿದ್ದ ಆ ರೌಡಿ ದ್ವೇಷಕ್ಕೆ  ಹೊಂಚುಹಾಕಿದ್ದ. ಇದರ ನಡುವೆ ರೌಡಿಯ ವಿಡಿಯೋ ಹೊರಬಿತ್ತು. ಅಷ್ಟರಲ್ಲಿಯೇ ವಿಷಯ ತಿಳಿದಿದ್ದ ಪೊಲೀಸರು, ರೌಡಿಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಗುಂಪನ್ನು ಅಂದರ್ ಮಾಡಿರುವ ಮಾಹಿತಿಯಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. 

ಇದನ್ನು ಸಹ ಓದಿ : ರೌಡಿಯನ್ನು ಬೆತ್ತಲುಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಲೆನಾಡು ಟುಡೆಗೆ ಹೇಳಿದ್ದೇನು?

ಪ್ರಕರಣ ಮೂರು

ಈ ಎರಡು ಪ್ರಮುಖ ರೌಡಿ ಚಟುವಟಿಕೆ ನಡುವೆ ಶಿವಮೊಗ್ಗದಲ್ಲಿ ಮೊನ್ನೆಯಷ್ಟೆ ಆಲ್ಕೊಳ ಸಮೀಪ ಬ್ಯಾಲ್ಯ ಸ್ನೇಹಿತರ ನಡುವೆ ಹಳೇ ಕಿರಿಕ್​ಗೆ ಮಾರಾಮಾರಿ ನಡೆದಿತ್ತು. ಬರೋಬ್ಬರಿ ಆರು ಮಂದಿಗೆ ಚಾಕುವಿನಿಂದ ಅಟ್ಯಾಕ್ ಮಾಡಲಾಗಿತ್ತು. ಓರ್ವನಿಗೆ ಮೇಜರ್ ಪೆಟ್ಟಾಗಿತ್ತು. 

ಸುದ್ದಿ ಲಿಂಕ್ ಇಲ್ಲಿದೆ : BREAKING NEWS / ಶಿವಮೊಗ್ಗದ ಆಲ್ಕೋಳ ಸಮೀಪ ಎರಡು ಗುಂಪುಗಳ ಮಾರಾಮಾರಿ! ಐವರಿಗೆ ಇರಿತ! ಮೆಗ್ಗಾನ್​ಗೆ ದಾಖಲು

ವಿಶೇಷ ಅಂದರೆ, ಈ ಘಟನೆ ನಡೆದು ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಬ್ಯಾಂಡೇಜ್​ ಹಾಕಿಸಿಕೊಳ್ಳುವಷ್ಟರಲ್ಲಿ ಪೊಲೀಸರು ಪ್ರಕರಣ ಆರೋಪಿಗಳನ್ನ ಹಿಡಿದಿದ್ದರು. ಕೇವಲ ಐದಾರು ಗಂಟೆಯಲ್ಲಿ ಆರೋಪಿಗಳ ಅಂದರ್ ಆಗಿದ್ದರು ಅಂದರೆ, ಶಿವಮೊಗ್ಗ ಪೊಲೀಸ್ ಇಲಾಖೆ ಎಷ್ಟು ಫಾಸ್ಟಾಗಿ ವರ್ಕ್ ಮಾಡುತ್ತಿದೆ ಯೋಚಿಸಿ…



ಪವನ್ , ಮಂಜುನಾಥ್,  ಚಂದನ್, ರಂಗನಾಥ್, ಮನೋಜ್, ಶ್ರೀನಿವಾಸ, ರಾಜಶೇಖರ್, ವಿಶ್ವನಂದನ್, ಶ್ಯಾಮ್ ರಾಬಿನ್​ನನ್ನ ಪೊಲೀಸರು ಬಂದಿದ್ದು, ರೌಡಿ ಚಟುವಟಿಕೆಗಳ ಬಗ್ಗೆ ಪ್ರಶ್ನೆ ರೈಸ್ ಆಗದಂತೆ ಉತ್ತರಿಸಿದೆ. ಇನ್ನೊಂದೆಡೆ ಪಾತಕ ಲೋಕಕ್ಕೂ ಕ್ಲೀನ್  ಮೆಸೇಜ್ ರವಾನಿಸಿದೆ. ಇಷ್ಟೆಅಲ್ಲದೆ ಗಣಪತಿ ಬಂದೋಬಸ್ತ್​ ಹಿನ್ನೆಲೆಯಲ್ಲಿ ಎಸ್​ಪಿ ಮಿಥುನ್ ಕುಮಾರ್ ಕೂಡ ಕಿಡಿಗೇಡಿಗಳನ್ನ ಲಾಕ್​ ಮಾಡ್ತೀವಿ ಅಂತಾ ಖುಲ್ಲಾಖುಲ್ಲಾ ಹೇಳಿದ್ದಾರೆ. 

ಬಾಲ್ಯ ಸ್ನೇಹಿತರ ನಡುವೆ ನಡೆದಿದ್ದೇನು? ತುಂಗಾ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ ನಡೆದ ಮಾರಾಮಾರಿ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ಹಬ್ಬಗಳು ನಡೆಯಬೇಕು, ಹಬ್ಬದ ಮೆರವಣಿಗೆಗಳು ಸಂಭ್ರಮದಿಂದ ಸಾಗಬೇಕು. ಅಂತಹ ಸಡಗರದಲ್ಲಿ ದುಷ್ಟಶಕ್ತಿಗಳು ತಮ್ಮ ವೈಯಕ್ತಿಕ ಲಾಭ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕೆ ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು, ಈಗಾಗಲೇ ಹಲವರನ್ನ ಊರು ಬಿಡಿಸಿದೆ. ಮತ್ತೆ ಕೆಲವರನ್ನ ಜೈಲು ಸೇರುವಂತೆ. ಒಂದೋ ಊರು ಬಿಡಿ, ಇಲ್ಲ ಜೈಲು ಸೇರಿ ಎನ್ನುವ ಪರೋಕ್ಷ ಸಂದೇಶ ನಿಕ್ಕಿಯಾಗಿದೆ

ಇದನ್ನು ಸುದ್ದಿ ಓದಿ : ಕಿಡಿಗೇಡಿಗಳು ಲಾಕ್! ಗಣಪತಿ ಬಂದೋಬಸ್ತ್​ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? ಎಲ್ಲೆಲ್ಲಿ? ಯಾವಾಗ ಮೆರವಣಿಗೆ?

ಜೈಲರ್ ಸಿನಿಮಾದಲ್ಲಿ ವಿಲನ್ ವರ್ಮಾ ಸಾರ್​,,,, ನಾನು ಮತ್ತೆ ಮತ್ತೆ ಅಟೆಂಟ್ಪ್​  ಮಾಡ್ತೀರ್ತಿನಿ ಅನ್ನುತ್ತಾನೆ. ಆ ಮಾದರಿಯಲ್ಲಿ ರೌಡಿಗಳಿಗೆ ಶಿವಮೊಗ್ಗ ಪೊಲೀಸರು ವಿಲನ್ ಆಗಿದ್ದು, ಇನ್ನೊಂದು ಕೇಸ್ ಹಾಕ್ತಾರೆ ಅಂದುಕೊಳ್ತಿದ್ದ ರೌಡಿಗಳಿಗೆ ಕೇಸ್​ ಮೇಲೆ ಕೇಸ್ ಹಾಕುತ್ತಲೇ ಇರುತ್ತೇವೆ ..ಸಾಕು ಅಂದ್ರೂ ಬೀಳ್ತಾನೆ ಇರುತ್ತವೆ ಕೇಸ್ಗಳು ಎನ್ನುತ್ತಿದೆ ಪೊಲೀಸ್​ ಇಲಾಖೆ.


ಇನ್ನಷ್ಟು ಸುದ್ದಿಗಳು