KARNATAKA NEWS/ ONLINE / Malenadu today/ Sep 16, 2023 SHIVAMOGGA NEWS
ಶಿವಮೊಗ್ಗದಲ್ಲಿ ಜಾಗವೊಂದರ ಕುರಿತಿರುವ ಕೇಸ್ ವಾಪಸ್ ತೆಗೆದುಕೊಳ್ಳಬೇಕು ಎಂದು ಮಾರ್ಕೆಟ್ ಲೋಕಿ ಧಮ್ಕಿ ಹಾಕಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೋಟಿ ಮೌಲ್ಯದ ಜಾಗಕ್ಕಾಗಿ ಅದರ ಮಾಲೀಕರಿಗೆ ಧಮ್ಕಿಹಾಕಿದ್ದರ ಸಂಬಂಧ ಆಡಿಯೋವೊಂದು ಲಭ್ಯವಾಗಿದೆ. ಮಾರ್ಕೆಟ್ ಲೋಕಿ ಜೈಲಿನಿಂದಲೇ ಫೋನ್ ಮಾಡಿ ಆವಾಜ್ ಹಾಕಿ, ಜಾಸ್ತಿ ಮಾತುಬೇಡ, ಫೇಸ್ ಮಾಡ್ಕೊಳ್ತೀಯಾ ಎಂದು ಹೆದರಿಸಿದ ಮಾತುಗಳು ಆಡಿಯೋದಲ್ಲಿ ಸಾಕ್ಷಿಯಾಗಿದೆ.
ಬಿಹೆಚ್ ರಸ್ತೆಯ ಸಮೀಪದಲ್ಲಿರುವ ಜಾಗಕ್ಕಾಗಿ ಲೋಕಿ ಈ ರೀತಿ ಆವಾಜ್ ಹಾಕಿದ್ದಾನೆ. ತಮ್ಮ ಜಾಗವನ್ನು ಯಾರೋ ಕಬಳಿಸಿಕೊಂಡಿದ್ದರ ಸಂಬಂಧ ಶಿವಮೊಗ್ಗ ಕೋರ್ಟ್ನಲ್ಲಿ ಅಸಲಿ ಮಾಲೀಕರು ಕೇಸ್ ನಡೆಸುತ್ತಿದ್ದಾರೆ. ಈ ಕೇಸ್ನ್ನ ವಾಪಸ್ ತೆಗೆದುಕೊಳ್ಳಬೇಕು ಎಂದು ಮಾರ್ಕೆಟ್ ಲೋಕಿ ಹೆದರಿಸುತ್ತಿರುವ ಆಡಿಯೋ ಹೊರಬಿದ್ದಿದೆ
ಟಿಕೆಟ್ ಡೀಲ್ ಹಣ! 50 ಲಕ್ಷ ರೂಪಾಯಿ ಸಂದಾಯವಾಗಿದ್ದು ಶಿವಮೊಗ್ಗದಲ್ಲಾ! ಚೈತ್ರಾ ಕುಂದಾಪುರ ಟೀಂ ನಡೆಸಿದ ವಹಿವಾಟು ಏನು?
ಇಷ್ಟೆ ಅಲ್ಲದೆ, ಒಂದು ಟಿಟಿ ವಾಹನದ ತುಂಬಾ ಹುಡುಗರನ್ನು ಕರೆದುಕೊಂಡು ಹೋಗಿ ಜಾಗದ ಮಾಲೀಕರಿಗೆ ಧಮ್ಕಿ ಹಾಕಿ ಹೆದರಿಸ್ತಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದ ಮೂಲಕ ಹೊರಬಿದ್ದಿದೆ. ಟಿಟಿ ವಾಹನದಲ್ಲಿ ಬಂದು ಹೆದರಿಸಿ ಜಾಗದ ಕೇಸ್ ವಾಪಸ್ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಶಿವಮೊಗ್ಗ ರೌಡಿಸಂ ಬೆಳೆಯತೆ ಎಂಬ ಪ್ರಶ್ನೆ ಮೂಡುತ್ತಿದೆ.
ಇಂತಹ ಕೃತ್ಯಗಳಿಗೆ ಕಡಿವಾಣ ಹಾಕದೇ ಹೋದರೆ, ಜನರು ಜಾಗ ತೆಗೆದುಕೊಳ್ಳುವದಕ್ಕೆ ಅಥವಾ ಮಾರುವುದಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜೈಲಿನಿಂದ ಅನಾಯಾಸವಾಗಿ ಫೋನ್ ಕರೆ ಮಾಡಲು ಅವಕಾಶ ಕೊಡುತ್ತಿರುವ ವ್ಯವಸ್ಥೆಗೂ ಈ ಘಟನೆ ಸಾಕ್ಷಿಯಾಗಿದೆ.
ಇನ್ನಷ್ಟು ಸುದ್ದಿಗಳು
ಟಿಕೆಟ್ ಡೀಲ್ ಹಣ! 50 ಲಕ್ಷ ರೂಪಾಯಿ ಸಂದಾಯವಾಗಿದ್ದು ಶಿವಮೊಗ್ಗದಲ್ಲಾ! ಚೈತ್ರಾ ಕುಂದಾಪುರ ಟೀಂ ನಡೆಸಿದ ವಹಿವಾಟು ಏನು?
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ
