ಟಿಕೆಟ್ ಡೀಲ್​ ಹಣ! 50 ಲಕ್ಷ ರೂಪಾಯಿ ಸಂದಾಯವಾಗಿದ್ದು ಶಿವಮೊಗ್ಗದಲ್ಲಾ! ಚೈತ್ರಾ ಕುಂದಾಪುರ ಟೀಂ ನಡೆಸಿದ ವಹಿವಾಟು ಏನು?

More details of the case of Chaitra Kundapur, who was arrested in the case of cheating to give ticketsಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಬಂಧನವಾಗಿರುವ ಚೈತ್ರಾ ಕುಂದಾಪುರ ಪ್ರಕರಣದ ಇನ್ನಷ್ಟು ವಿವರ chaitra kundapura case

ಟಿಕೆಟ್ ಡೀಲ್​ ಹಣ! 50 ಲಕ್ಷ ರೂಪಾಯಿ ಸಂದಾಯವಾಗಿದ್ದು ಶಿವಮೊಗ್ಗದಲ್ಲಾ! ಚೈತ್ರಾ ಕುಂದಾಪುರ  ಟೀಂ ನಡೆಸಿದ ವಹಿವಾಟು ಏನು?

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರ ಕುಂದಾಪುರ   (chaitra kundapura case) ಹಾಗೂ ಆಕೆಯ ಟೀಂ ತನ್ನ ವಹಿವಾಟನ್ನು ಶಿವಮೊಗ್ಗದಲ್ಲಿಯು ನಡೆಸಿತ್ತಾ? ಈ ಪ್ರಶ್ನೆಗೆ ದಾಖಲಾಗಿರುವ ಎಫ್ಐಆರ್​ ನಲ್ಲಿ ಉತ್ತರ ಲಭ್ಯವಾಗಿದೆ. ದೂರುದಾರ ಗೋವಿಂದ್ ಪೂಜಾರಿ ಸಲ್ಲಿಸಿದ ಕಂಪ್ಲೆಂಟ್ ಆಧಾರವಾಗಿ ದಾಖಲಾದ FIR  ಪ್ರಕಾರ, ಚೈತ್ರ ಕುಂದಾಪುರ ಟೀಂ ಶಿವಮೊಗ್ಗದ ಕಚೇರಿಯ ಎದುರು ಹಣವನ್ನ ಸಂದಾಯ ಮಾಡಿಕೊಂಡಿತ್ತು .. 

 

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲಿ ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುತ್ತೇನೆ ಎಂದು  ಚೈತ್ರಾ ಕುಂದಾಪುರ ಹೇಳಿದ್ದು, ಅದರಂತೆ  ಚಿಕ್ಕಮಗಳೂರಿಗೆ ಗೋವಿಂದ ಪೂಜಾರಿಯನ್ನ ಕರೆಸಿಕೊಂಡಿದ್ದರು. ಆನಂತರ ಗಗನ್ ಕಡೂರು,  ವಿಶ್ವನಾಥ್ ಜಿ ಎಂಬವರನ್ನ ಪರಿಚಯ ಮಾಡಿಸಿದ್ದ ಚೈತ್ರಾ ಕುಂದಾಪುರ,  ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ಹೇಳಿ, ಟಿಕೆಟ್ ಸಿಗದಿದ್ದರೇ ಹಣ ವಾಪಸ್ ನೀಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.  ಎಂದು ಹೇಳಿರುವರು, ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ, ರೂ.50,00,000 (ಐವತ್ತು ಲಕ್ಷ)   ನೀಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. 

ಈ ಹಣವನ್ನು ಶಿವಮೊಗ್ಗದಲ್ಲಿ ಪ್ರಮುಖ ಕಚೇರಿಯೊಂದರ ಎದುರುಗಡೆ, ಗಗನ್ ಕಡೂರ್​ಗೆ ನೀಡಿರುವುದಾಗಿ ಎಫ್ಐಆರ್​ ನಲ್ಲಿ ಉಲ್ಲೇಖಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಮಾತುಕತೆ ನಡೆದು, ಅದರಂತೆ ಶಿವಮೊಗ್ಗದಲ್ಲಿ ಗೋವಿಂದ್ ಪೂಜಾರಿ ಹಣ ನೀಡಿದ್ದಾರೆ. ಇದನ್ನ ಪಡೆದುಕೊಂಡು ಚೈತ್ರ ಕುಂದಾಪುರ, ವಿಶ್ವನಾಥ್ ಜಿ ಮತ್ತು ಗಗನ್​ ಕಡೂರು, ಟಿಕೆಟ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದಿದ್ದರಂತೆ. ಆನಂತರ ಮತ್ತಷ್ಟು ಹಣವನ್ನು ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಶಿವಮೊಗ್ಗದಲ್ಲಿಯು ವಂಚನೆ ವಹಿವಾಟು ನಡೆಸಿರುವ ಆರೋಪ ಇರುವುದರಿಂದ ಪೊಲೀಸರು ತನಿಖಾ ದೃಷ್ಟಿಯಿಂದ ಆರೋಪಿಗಳನ್ನು ಶಿವಮೊಗ್ಗಕ್ಕೂ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. 


ಇನ್ನಷ್ಟು ಸುದ್ದಿಗಳು