ಹಿಂದೂ ಮಹಾಸಭಾ ಗಣಪತಿ ಮತ್ತು ಓಂ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಯ ದಿನಾಂಕ ತೀರ್ಮಾನ! ಮೂರು ದಿನ!

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಶಿವಮೊಗ್ಗದಲ್ಲಿ ಈ ಸಲ ಗಣೇಶೋತ್ಸವದ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಒಂದೇ ದಿನ ಬರುತ್ತದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿಚಾರ ತಾರ್ಕಿಕ ಅಂತ್ಯಕಂಡಿದ್ದು, ಮುಸ್ಲಿಮರು ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಅಕ್ಟೋಬರ್​ 1 ಭಾನುವಾರ ನಡೆಸಲು ತೀರ್ಮಾನಿಸಿದ್ದಾರೆ. 

ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಪೊಲೀಸ್‌ ಇಲಾಖೆ ಈ ನಿಟ್ಟಿನಲ್ಲಿ ನಿರಂತರ ಶಾಂತಿ ಸಭೆಗಳನ್ನು ನಡೆಸಿಕೊಂಡು ಬಂದಿದೆ. ಈ ಸಂಬಂಧ ಹಿಂದೂ ಮಹಾಸಭಾ ಹಾಗೂ ಓಂ ಗಣಪತಿ ಮತ್ತು ಮುಸ್ಲಿಮ್ ಸಂಘಟನೆಗಳ ಮುಖಂಡರು ನಡೆಸಿದ ಮಾತುಕತೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ.  

ಹಿಂದೂ ಮಹಾಸಭಾ, ಓ ಗಣಪತಿ ಸಮಿತಿ ಹಾಗೂ ಸುನ್ನಿ ಜಮೈತುಲ್ ಉಲೆಮಾ ಕಮಿಟಿಯ ಮುಖಂಡರು ಶಿವಮೊಗ್ಗದಲ್ಲಿನ ಶಾಂತಿಗಾಗಿ ಪರಸ್ಪರ ಸಹಕಾರದ ನಿರ್ಧಾರಕ್ಕೆ ಬಂದಿದ್ದಾರೆ. 

  • ಸಮಿತಿಯಲ್ಲಿ ಆದ ತೀರ್ಮಾನದಂತೆ ಸೆಪ್ಟೆಂಬರ್ 28ರಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಡೆಯಲಿದೆ. 

  • ಅಂದೇ ನಡೆಯಬೇಕಿದ್ದ ಈದ್ ಮಿಲಾದ್‌ ಮೆರವಣಿಗೆಯನ್ನು ಅಕ್ಟೋಬರ್​ 1ರ ಭಾನುವಾರ ನಡೆಸಲು ಮುಸ್ಲಿಂ ಸಂಘಟನೆಗಳು ತೀರ್ಮಾನಿಸಿವೆ

  • ಅಕ್ಟೋಬರ್​ ರಂದು ನಿಗದಿಯಾಗಿದ್ದ ಓಂ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯನ್ನು ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್​ 30 ರಂದು ಶನಿವಾರ ನಡೆಸಲು ತೀರ್ಮಾನಿಸಲಾಗಿದೆ. 

  

ಈ ಸಂಬಂಧ  ಮುಸ್ಲಿಮ್​ ಸಂಘಟನೆಗಳ ಪರವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಆಫ್ತಬ್​ ಪರ್ವಿಜ್ ಮಾದ್ಯಮಗಳಿಗೆ ಕೈಗೊಂಡ ತೀರ್ಮಾನದ ಬಗ್ಗೆ ಮಾಹಿತಿ ನೀಡಿದರು. ಅಕ್ಟೋಬರ್​ 1 ರಂದು ಮಧ್ಯಾಹ್ನ ಮೂರು ಗಂಟೆಗೆ ಈದ್ ಮಿಲಾದ್​ ಮೆರವಣಿಗೆ ನಡೆಯಲಿದ್ದು, ರಾತ್ರಿ ವೇಳೆಗೆ ಅಮೀರ್ ಅಹಮದ್ ಸರ್ಕಲ್​ನಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು 

 


 

Leave a Comment