ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ ಬಂತು ಮಾಜಿ ಸಿಎಂರ ಚೀಟಿ!

CM Basavaraj Bommai bahuparak to BSY in the land of Sharanas! Important talk about B.Y. Vijayendra!

ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ  ಬಂತು ಮಾಜಿ ಸಿಎಂರ ಚೀಟಿ!
ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ ಬಂತು ಮಾಜಿ ಸಿಎಂರ ಚೀಟಿ!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಅಕ್ಕಾಮಹಾದೇವಿ ಪುತ್ತಳಿ ಅನಾವರಣ ಮಾಡಿ ಮಾತನಾಡಿದ ಬಸವರಾಜ ಬೊಮ್ಮಾಯಿಯವರು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಸಾಧನೆ ಹಾಗೂ ವ್ಯಕ್ತಿತ್ವವನ್ನು ಹಾಡಿಹೊಗಳಿದ್ದಾರೆ.  ಇವತ್ತು ಹಲವಾರು ಮಂದಿ ನಾನು ಮುಖ್ಯಮಂತ್ರಿ ಅಂತಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿಯಾಗಬೇಕು ಎಂದು ಕನಸ್ಸು ಕಾಣಲು ಸಾದ್ಯವಿಲ್ಲದಂತ ಸನ್ನಿವೇಶದಲ್ಲಿ, ಏನೂ ಇಲ್ಲದಂತದಂತಹ ಪರಿಸ್ಥಿತಿಯಲ್ಲಿ ಹೋರಾಟ ಮಾಡಿಕೊಂಡು, ಪಕ್ಷವನ್ನು ಕಟ್ಟಿ ಬೆಳೆಸಿ, ರಾಜ್ಯದ ಅಭಿವೃದ್ಧಿಗಾಗಿ ದುಡಿದವರು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಎಂದುರು. 

9 ಶತಮಾನಗಳ ನಂತರ ಶಿವಶರಣರ ನಾಡು ಹಾಗೂ ಬಸವಕಲ್ಯಾಣದ ಅಭವೃದ್ಧಿಯನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಮಾಡಿದ್ದಾರೆ. ಇದು ಪೂರ್ವ ಜನ್ಮದ ಪುಣ್ಯ ಎಂದ ಬಸವರಾಜ ಬೊಮ್ಮಾಯಿಯವರು, ಬಿಎಸ್​ವೈರವರ ಸಾಧನೆಯನ್ನು ಮುಂದಿನ 10 ಪೀಳಿಗೆ ನೆನಪಿಟ್ಟುಕೊಳ್ಳುತ್ತದೆ.. ಬಿಎಸ್​ವೈರಂತಹ ಪುಣ್ಯಾತ್ಮರನ್ನ ಪಡೆದವರು ನೀವೆ ಪುಣ್ಯವಂತರು ಎಂದು ಜನಸ್ತೋಮಕ್ಕೆ ತಿಳಿಸಿದ ಸಿಎಂ 12 ಶತಮಾನದ ಕ್ರಾಂತಿಯನ್ನು ಮುಂದುವರಿಸಿಕೊಂಡು ಹೋಗುವಂತ ಕೆಲಸ ಮಾಡಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಎಂದರು. 

READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ಮಾಜಿ ಸಿಎಂ ಬಿಎಸ್​ ಕನಕದಾಸರ ಕಾಗಿನೆಲೆಯ ಅಭಿವೃದ್ಧಿಯನ್ನು ಮಾಡಿದ್ದಾರ, ಕನಕದಾಸರ ಹುಟ್ಟೂರಿನಲ್ಲಿ 14 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಜಯಂತಿಯ ಆಚರಣೆ ಜಾರಿಗೆ ತಂದರು, ನೂರಾರು ಮಠ ಮಾನ್ಯಗಳಿಗೆ ಅನುದಾನ ನೀಡಿದ್ದಾರೆ. ಅವರನ್ನ ಸಾಮಾಜಿಕ ಪರಿವರ್ತಕ ಎಂದು ಕರೆಯುತ್ತೇನೆ.  ಅವರದ್ದು ಸ್ವಚ್ಚ ಮನಸ್ಸು, ಅವರ ಮನಸ್ಸಲ್ಲಿ ಕಲ್ಮಶವಿಲ್ಲ. ಅವರು ಹೆಚ್ಚು ಪ್ರೀತಿಸುವವರ ಮೇಲೆ ತುಸು ಸಿಟ್ಟು ಮಾಡಬಹುದುಷ್ಟೆ ಆದರೆ ಅವರ ಮನಸ್ಸಲ್ಲಿ ಕಲ್ಮಶವಿಲ್ಲ. 

ಬಿಎಸ್​ವೈನವರು, ಯಾವುದೇ ಆಕಾಂಕ್ಷೆ ಇಲ್ಲದೆ ರಾಜಕಾರಣಕ್ಕೆ ಬಂದವರು. ಕೆಲವೇ ಕೆಲವು ವರ್ಷ ಅಧಿಕಾರವನ್ನ ಅನುಭವಿಸಿರುವ ಅವರು 30 ವರ್ಷಗಳ ಕಾಲ ಅಧಿಕಾರವಿಲ್ಲದೇ ಹೋರಾಟ ಮಾಡಿಕೊಂಡು ಬಂದವರು. ನಮ್ಮಂತವರನ್ನ ಕೈ ಹಿಡಿದು ಎತ್ತಿ ಅಗತ್ಯವಾದ ಸ್ಥಾನಮಾನ ಕೊಟ್ಟವರು ಬಿಎಸ್ವೈರವರು. ಈ ರೀತಿಯಲ್ಲಿ ನಾಯಕತ್ವವನ್ನ ತೋರುತ್ತಾ ಕಿರಿಯರಿಗೆ ದಾರಿ ತೋರಿದವರು ಇಬ್ಬರು ಒಬ್ಬರು ರಾಮಕೃಷ್ಣ ಹೆಗೆಡೆ ಇನ್ನೊಬ್ಬರು ಬಿಎಸ್ ಯಡಿಯೂರಪ್ಪ!

ಹಾಗಾಗಿ ಅವರು ನಿವೃತ್ತಿ ಆಗೋದಿಲ್ಲ. ನಿವೃತ್ತಿ ಆಗೋದಕ್ಕೆ ಜನರೇ ಬಿಡೋದಿಲ್ಲ. ಮಂತ್ರಿಗಳು ಆಗೋದು ಬೇರೆ, ಆದರೆ ಜನನಾಯಕ ಆಗೋದು ಬೇರೆ. ಅವರ ಹೆಸರು ಜನರ ಹೃದಯದಲ್ಲಿದೆ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಜನಪ್ರತಿನಿಧಿಯಾಗಿ ಇದು ಬಿಎಸ್​ವೈರ ಕೊನೆ ಸಭೆ ಎಂದು ಸಂಸದ ರಾಘವೇಂದ್ರರವರು ಹೇಳಿದ್ರು. ಆದರೆ ಅದನ್ನು ನಾನು ಒಪ್ಪಲಿಲ್ಲ. ಅಭಿಮಾನಿಗಳು, ಜನರು, ಅತ್ಯಂತ ಪ್ರೀತಿಯಿಂದ ಅವರ ನಾಯಕತ್ವ ಬೇಕು ಎಂದು ಇಚ್ಚೆ ವ್ಯಕ್ತಪಡಿಸಿದಾಗ, ಬಿಎಸ್​ವೈ ನಂತಹ ನಾಯಕರು ಜನರ ಪ್ರೀತಿಗಾಗಿ ತಲೆಬಾಗಲೇ ಬೇಕು. ಹಾಗಾಗಿ ಯಡಿಯೂರಪ್ಪನವರ ಸೇವೆ ನಿರಂತರವಾಗಿರಬೇಕು. ಜನರು ಹಾಗು ಯಡಿಯೂರಪ್ಪ ನವರ ನಡುವೆ ಯಾರು ಕೂಡ ಬರುವುದಕ್ಕೆ ಸಾಧ್ಯವಿಲ್ಲ. 

READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ರಾಜ್ಯಕ್ಕೆ ಅನುಭವಿ ರಾಜಕಾರಣಿಗಳ ಅವಶ್ಯಕತೆ ಇದೆ. ಸ್ವಾರ್ಥ ರಾಜಕಾರಣಿಗಳ ನಡುವೆ ಇವತ್ತು ಯಡಿಯೂರಪ್ಪರವರ ಅಗತ್ಯ ಹಿಂದಿನದಕ್ಕಿಂತ ಹೆಚ್ಚಿದೆ. ನಾವು ಬಿಎಸ್​ವೈರವರ ನೆರಳಿನಲ್ಲಿ ಬಂದವರು ಯಡಿಯೂರಪ್ಪರವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ ಎಂದು ಸಿಎಂ ಆದಾಗ ಹೇಳಿದ್ದೆ. ಇವತ್ತು ಕೂಡ ಅದೇ ಮಾತನ್ನು ಹೇಳೋದಕ್ಕೆ ಇಚ್ಚೆ ಪಡುತ್ತೇನೆ. ನನಗೆ ಕ್ಲಿಷ್ಟ ಹಾಗೂ ಕಷ್ಟ ಪರಿಸ್ತಿತಿ ಎದುರಾದಾಗ, ನನಗೆ ಕರೆದು ಮಾರ್ಗದರ್ಶನ ನೀಡಿ, ರಾಜ್ಯದ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿದವರು ಯಡಿಯೂರಪ್ಪನವರು. ಹೀಗಾಗಿ ತಂದೆ ಮಗನ ಸಂಬಂಧ, ಪ್ರೀತಿ ಮತ್ತು ವಿಶ್ವಾಸಕ್ಕೂ ಮೀರಿದ ಸಂಬಂಧವಾಗಿದೆ. ಇದು ಶಾಶ್ವತವಾಗಿರುತ್ತದೆ. ನಿಮ್ಮ ಭಾವನೆಗಳೆ ಮುಂದಿನ ಭವಿಷ್ಯ ನಿರ್ಮಾಣಮಾಡಲಿದೆ. ರಾಜ್ಯದ ಅಭಿವೃದ್ಧಿ ಆಗಬೇಕು. ಕರ್ನಾಟಕದಲ್ಲಿ ಬಡತನ ನೀಗಿ ಅಭಿವೃದ್ಧಿ ಸಮೃದ್ಧಿ ಆಗಬೇಕಿದೆ ಎಂದರು. 

READ / BREAKING NEWS / ಇನ್ನೂ 15-20 ದಿನಗಳಲ್ಲಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ವಿಮಾನ ಸಂಚಾರ ಆರಂಭ

ಶಿಕಾರಿಪುರಕ್ಕೂ ಯಡಿಯೂರಪ್ಪರಿಗೂ ಅವಿನಾಭಾವ ಸಂಬಂಧವಿದೆ. ಮೊನ್ನೆ ಒಮ್ಮೆ ಅವರ ಬಳಿ ಹೋದಾಗ, ಏಳೆಂಟು ಕೆಲಸಗಳ ಪಟ್ಟಿ ಕೊಟ್ಟು ಈ ಕೆಲಸ ಆಗಬೇಕು ಎಂದರು. ಅಷ್ಟೊಂದು ಬದ್ಧತೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು. ನಾನು ಸಹಾಯ ಸಹಕಾರ ನೀಡಿದೆ ಎಂದು ಸಂಸದರು ಹೇಳಿದರು. ಆದರೆ ನಾನು ಇಲ್ಲಿ ನಿಮಿತ್ತ ಮಾತ್ರ! ಎಲ್ಲವೂ ಯಡಿಯೂರಪ್ಪನವರ ಶಕ್ತಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ಈಗಲೂ ಚೀಟಿಕೊಟ್ಟು ಕಳಿಸಿದ್ದಾರೆ. ಅದರಲ್ಲಿ ಬಿಎಸ್​ವೈನವರು ಹೇಳಿದ್ದಾರೆ ಅಲ್ಲಮಪ್ರಭು ಅನುಭವ ಮಂಟಪಕ್ಕೆ ಅನುಧಾನ ಬಿಡುಗಡೆ ಮಾಡಬೇಕು ಎಂದಿದ್ದಾರೆ ಅಲ್ಲಮಪ್ರಭು ನನ್ನ ಆರಾಧ್ಯದೈವ, ಬಿಎಸ್​ ಯಡಿಯೂರಪ್ಪನವರು ಹೇಳಿದಂತೆ ಅನುಧಾನ ಬಿಡುಗಡೆ ಮಾಡಿಸುತ್ತಾರೆ. ಶಿವನಪಾದ ಅಭಿವೃದ್ಧಿಯನ್ನು 10 ಕೋಟಿ ರೂಪಾಯಿಯಲ್ಲಿ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಶಿಕಾರಿಪುರ ದೇವರ ನಾಡು, ದೇವರು ಪ್ರೀತಿಸುವ ನಾಡು, ಈ ತಾಲ್ಲೂಕನ್ನ ಮಾದರಿ ಕೃಷಿ ತಾಲ್ಲೂಕನ್ನಾಗಿ, ಆದ್ಯಾತ್ಮಿಕ ತಾಲ್ಲೂಕನ್ನಾಗಿ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ, ಆ ಕೆಲಸವನ್ನು ಭವಿಷ್ಯದಲ್ಲಿ ಮಾಡುತ್ತೇವೆ. ಬಿಎಸ್​ ವೈರವರ ಮೇಲೆ ತೋರಿಸಿದ ಪ್ರೀತಿಯನ್ನು ವಿಜಯೇಂದ್ರವರ ಮೇಲೂ ನೀವು ತೋರಿಸಬೇಕು ಎಂದು ಕರೆಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ, ನಮಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಆಶೀರ್ವಾದ ಇರಲಿ ಎಂದು ಮನವಿ ಮಾಡುತ್ತೇನೆ ಎಂದರು

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur  double attack, cow gun, pig anni murder case: Davanagere SP C B Ryshyanth ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ  ಬಂತು ಮಾಜಿ ಸಿಎಂರ ಚೀಟಿ!