ಶಿವಮೊಗ್ಗದಲ್ಲಿ ರೋಡಿಗಿಳಿದ ಭದ್ರಾ! ಏನಿದು ಬೈಕ್ ಪೆಟ್ರೋಲಿಂಗ್! ಏನು ಅನುಕೂಲ! ಇಂಟರ್ಸ್ಟಿಂಗ್​ ಆಗಿದೆ ಮಾಹಿತಿ!

Bhadra on the road in Shimoga! What is bike patrolling! What an advantage! Interstitialing is information!

ಶಿವಮೊಗ್ಗದಲ್ಲಿ ರೋಡಿಗಿಳಿದ ಭದ್ರಾ! ಏನಿದು ಬೈಕ್ ಪೆಟ್ರೋಲಿಂಗ್! ಏನು ಅನುಕೂಲ!  ಇಂಟರ್ಸ್ಟಿಂಗ್​ ಆಗಿದೆ ಮಾಹಿತಿ!

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಮತ್ತು ಸುಗಮ ಸಂಚಾರದ ಹಿತದೃಷ್ಠಿಯಿಂದ ಶಿವಮೊಗ್ಗ ಪೊಲೀಸ್ ಇಲಾಖೆ,  04 ಭದ್ರಾ ಸಂಚಾರ ಗಸ್ತು ದ್ವಿಚಕ್ರ ವಾಹನಗಳನ್ನ ರೋಡಿಗಿಳಿಸಿದೆ. ಈ ಸಂಬಂಧ  ಬೈಕ್​ ಪೆಟ್ರೋಲಿಂಗ್​ಗೆ ಎಸ್​ಪಿ ಮಿಥುನ್​ ಕುಮಾರ್  ಚಾಲನೆ ನೀಡಿದ್ಧಾರೆ. 

ಬೈಕ್​ನಲ್ಲಿ ಇರಲಿದೆ ವಿಶೇಷ ವ್ಯವಸ್ಥೆ             

ಗಸ್ತು ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪಿಎಎಸ್ (ಪಬ್ಲಿಕ್ ಅಡ್ರೆಸ್ ಸಿಸ್ಟಮ್), ಸೈರನ್, ಲೈಟಿಂಗ್ಸ್, ವಾಕಿ-ಟಾಕಿ ಮತ್ತು ಉಳಿದ ಅವಶ್ಯಕ ಉಪಕರಣಗಳು ಇರಲಿವೆ. ಇದು ತುರ್ತು ಸನ್ನಿವೇಶಗಳಲ್ಲಿ ವಿಶೇಷವಾಗಿ ಸಹಾಯಕ್ಕೆ ಬರಲಿದೆ. ಇನ್ನೂ ಬೈಕ್​ ಪೆಟ್ರೋಲಿಂಗ್ ಮಾಡುವ ಪೊಲೀಸ್ ಸಿಬ್ಬಂದಿಗೆ ವಿಶೇಷ ತರಭೇತಿಯನ್ನ ಸಹ ನೀಡಲಾಗಿದೆ. 

ಬೈಕ್​ ಪೆಟ್ರೋಲಿಂಗ್​ನ ಕೆಲಸವೇನು?

  1. ಭದ್ರಾ ಸಂಚಾರ ಗಸ್ತು ವಾಹನಗಳು ಬೆಳಗ್ಗೆ 08:00 ರಿಂದ ರಾತ್ರಿ 09:00 ಗಂಟೆಯ ವರೆಗೆ ಗಸ್ತು ಮಾಡಲಿದೆ. 

  2. ಅಫಘಾತ ನಡೆದ ಸ್ಥಳಕ್ಕೆ ತಕ್ಷಣ ಹೋಗಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಲಿದೆ

  3. ಸಂಚಾರ ದಟ್ಟಣೆ ಸಂದರ್ಭದಲ್ಲಿ ಕೂಡಲೇ ಸ್ಥಳಕ್ಕೆ ಹೋಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು

  4. ವಾಹನ ನಿಲುಗಡೆ ನಿಷೇಧ ಪ್ರದೇಶಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುವುದು. 

  5. ಶಾಲಾ ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಗಸ್ತು ಮಾಡಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವುದು 

  6. ಹೀಗೆ ತುರ್ತು ಅಥವಾ ಸನ್ನಿವೇಶಕ್ಕೆ ಅಗತ್ಯವಿದ್ದಂತೆ ನಿರ್ದಿಷ್ಟ ಕೆಲಸಗಳನ್ನು ಬೈಕ್ ಪೆಟ್ರೋಲಿಂಗ್ ಮೂಲಕ ಮಾಡಲಾಗುತ್ತದೆ. 

ಚಿರತೆ ಮೇಲೆ ಕಾಡು ಹಂದಿಯ ಅಟ್ಯಾಕ್​! ನೀರು ಅರಸಿ ಬಂದು ಪ್ರಾಣ ಬಿಟ್ಟ ವನ್ಯಜೀವಿ!

ಶಿರಾಳಕೊಪ್ಪ / ಇಲ್ಲಿನ ಕೌವಲಿ ಸಮೀಪ ಚಿರತೆಯೊಂದು ಕಾಡು ಹಂದಿಯ ತಿವಿತಕ್ಕೆ ಬಲಿಯಾಗಿ ಸಾವನ್ನಪ್ಪಿದೆ.  ಶಿಕಾರಿಪುರ ತಾಲೂಕಿನ ತೊಗರ್ಸಿ ಸಮೀಪದ ಕೌವಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 

ನಡೆದಿದ್ದೇನು?

ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಐದು ವರ್ಷದ ಚಿರತೆ ಸಾವನ್ನಪ್ಪಿರುವ ಸ್ಥಳೀಯ ರೈತರು ಗಮನಿಸಿ ಅರಣ್ಯ ಇಲಅಖೆಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು  . ಮರಣೋತ್ತರ ಪರೀಕ್ಷೆ ನಡೆಸಿ,  ಕಾಡು ಹಂದಿ ಬೇಟೆಯಾಡಲು ಹೋದ ಸಂದದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದಿದ್ದಾರೆ. 

ಚಿರತೆಗೆ ಕಾಡು ಹಂದಿ  ತಿವಿದ ಕಾರಣಕ್ಕೆ ಚಿರತೆಯ ಬೆನ್ನು ಮೂಳೆ ತುಂಡಾಗಿದ್ದು, ಆ ಗಾಯದಿಂದಲೇ ನಿತ್ರಾಣಗೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವನ್ಯಜೀವಿ ವೈದ್ಯರು ತಿಳಿಸಿದ್ದಾರೆ.   

ಸಾಗರ-ತಾಳಗುಪ್ಪ ನಡುವೆ ಭೀಕರ ಬೈಕ್​ ಆಕ್ಸಿಡೆಂಟ್! ಶಿರಸಿ ಮೂಲದ ಓರ್ವನ ಸಾವು!

ಸಾಗರ/ ತಾಲ್ಲೂಕಿನ ಕಾನ್ಲೆ ಕ್ರಾಸ್ ಬಳಿಯಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. 

ಯಾರು ಸೂಡಾ ಅಧ್ಯಕ್ಷರು? ಯಾರು ಮುಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು? ಶಿವಮೊಗ್ಗದ ಪ್ರಮುಖ ಹುದ್ದೆಗಾಗಿ ಬೆಂಗಳೂರಿನಲ್ಲಿಯೇ ಜೋರು ಪೈಪೋಟಿ! ಟಿಕೆಟ್ ತಂತ್ರಗಾರಿಕೆ ಮತ್ತೆ ಗೆಲ್ಲುತ್ತಾ?

ಹೇಗಾಯ್ತು ಘಟನೆ

ತಾಳಗುಪ್ಪ-ಸಾಗರ ರಸ್ತೆ ನಡುವಲ್ಲಿ ನಿನ್ನೆ ಸಂಜೆ  06:50 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಎರಡು ಬೈಕ್​ಗಳು ಪರಸ್ಪರ ಡಿಕ್ಕಿಯಾಗಿದ್ದು, ಶಿರಸಿ ಮೂಲದ ಮಣಿ ಎಂಬ ಯುವಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ಧಾನೆ. ಆತನು ಸಹ ಶಿರಸಿ ಮೂಲದ ಮಂಜುನಾಥ್​ ಎನ್ನಲಾಗಿದ್ದು, ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ ಸವಾರನಿಗೂ ಗಾಯಗಳಾಗಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.