ಮದುವೆಯಾಗಿ ವರ್ಷ ಕಳೆವಷ್ಟರಲ್ಲಿ ಯುವತಿ ಆತ್ಮಹತ್ಯೆ ! ತವರಿನವರಿಂದ ಕೊಲೆ ಆರೋಪ! ದೊಡ್ಡಪೇಟೆ ಠಾಣೆಯಲ್ಲಿ ಕೇಸ್​

After a year of marriage, a young woman commits suicide! The parents have alleged that it was a murder. Case at Doddapete police station

ಮದುವೆಯಾಗಿ ವರ್ಷ ಕಳೆವಷ್ಟರಲ್ಲಿ ಯುವತಿ ಆತ್ಮಹತ್ಯೆ ! ತವರಿನವರಿಂದ ಕೊಲೆ ಆರೋಪ! ದೊಡ್ಡಪೇಟೆ ಠಾಣೆಯಲ್ಲಿ ಕೇಸ್​

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಆರ್​ಎಂಎಲ್​ ನಗರದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ.ಆಕೆ  ಮದುವೆಯಾಗಿ ಒಂದು ವರ್ಷ 2 ತಿಂಗಳು ಕಳೆದಿತ್ತು. ಪತಿಯ ಮನೆಯವರು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿದ್ಧಾರೆ, ತವರಿನವರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. 

rare turtle : ಅಪರೂಪದ ಆಮೆಯ ಮಾರಾಟಕ್ಕೆ ಯತ್ನ! ಅರಣ್ಯ ಇಲಾಖೆಯ ದಾಳಿ, ಆರೋಪಿ ಬಂಧನ!

ಮೂಲತಃ ಎನ್​ಆರ್​ಪುರದವರಾದ ಯುವತಿಯು ಇಲ್ಲಿನ ನಿವಾಸಿಯೊಬ್ಬರ ಜೊತೆ ಮದುವೆಯಾಗಿದ್ದರು. ಈ ಮಧ್ಯೆ ನಿನ್ನೆ ಸಂಜೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ಅದಾದ ಬಳಿಕ ಆಕೆ ಬೆಡ್​ರೂಂನಲ್ಲಿ ಸೀರೆ ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ತವರಿನವರು ಆತ್ಮಹತ್ಯೆ ಅನ್ನೋದು ನಮಗೆ ಗೊತ್ತಾಗಿಲ್ಲ, ಇವರ ಮಾನಸಿಕ ಕಿರುಕುಳದಿಂದಲೇ ಆಕೆ ಸಾವನ್ನಪ್ಪಿದ್ಧಾಳೆ ಎಂದು ದೂರಿದ್ಧಾರೆ. ಇನ್ನೂ ದೊಡ್ಡಪೇಟೆ ಪೊಲೀಸರು ಈ ಸಂಬಂಧ ತನಿಖೆ ನಡೆಸ್ತಿದ್ದಾರೆ. 

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com