ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ! ಆರೋಪಿಗೆ 10 ವರ್ಷ ಶಿಕ್ಷೆ! 40 ಸಾವಿರ ದಂಡ

Disabled girl raped! Accused sentenced to 10 years in jail Rs 40,000 fine

ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ! ಆರೋಪಿಗೆ 10 ವರ್ಷ ಶಿಕ್ಷೆ! 40 ಸಾವಿರ ದಂಡ
ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ! ಆರೋಪಿಗೆ 10 ವರ್ಷ ಶಿಕ್ಷೆ! 40 ಸಾವಿರ ದಂಡ

MALENADUTODAY.COM | SHIVAMOGGA NEWS 

ತೀರ್ಥಹಳ್ಳಿ ತಾಲ್ಲೂಕಿನ ನಿರ್ದಿಷ್ಟ ಪೊಲೀಸ್ ಠಾಣೆಯೊಂದರ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಕೇಸ್​ ಸಂಬಂಧ ಕೋರ್ಟ್ ತೀರ್ಪು ನೀಡಿದೆ. ಆರೋಪಿಗೆ 10 ವರ್ಷ ಶಿಕ್ಷೆ 40 ಸಾವಿರ ದಂಡ ವಿಧಿಸಿದೆ. 

27-12-2019 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ, ಯುವತಿ ಮೇಲೆ ಆರೋಪಿ ಈ ಕೃತ್ಯವೆಸಗಿದ್ದ. ಸಂತ್ರಸ್ತ ಯುವತಿ ವಿಕಲಚೇತನೆಯಾಗಿದ್ದು,ಆಕೆಯ ಪಕ್ಕದ ಮನೆಗೆ ಬಂದಿದ್ದ 38 ವರ್ಷದ ಆರೋಪಿ, ಅತ್ಯಾಚಾರವೆಸಗಿದ್ದ. ಸಂತ್ರಸ್ತ ಯುವತಿ ಒಬ್ಬಳೆ ಇದ್ದಾಗ, ಕುಡಿಯಲು ನೀರು ಕೇಳಿ ಒಳಕ್ಕೆ ನುಗ್ಗಿಅತ್ಯಾಚಾರವೆಸಗಿದ್ದ.

]ಮದುವೆಯಾಗಿ ವರ್ಷ ಕಳೆವಷ್ಟರಲ್ಲಿ ಯುವತಿ ಆತ್ಮಹತ್ಯೆ ! ತವರಿನವರಿಂದ ಕೊಲೆ ಆರೋಪ! ದೊಡ್ಡಪೇಟೆ ಠಾಣೆಯಲ್ಲಿ ಕೇಸ್

ಈ ಸಂಬಂಧ ಎಫ್​ಐಆರ್ ದಾಖಲಾಗಿ, ಅಂದಿನ ಸಿಪಿಐರವರು ತನಿಖೆ ನಡೆಸಿ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಸದ್ಯ ಪ್ರಕರಣದ ತೀರ್ಪನ್ನು ಶಿವಮೊಗ್ಗದ ಮಾನ್ಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದು, ಆರೋಪಿಗೆ 10 ವರ್ಷಗಳು ಕಾರಾಗೃಹ ವಾಸ ಸಜೆಯ ಶಿಕ್ಷೆ ಹಾಗೂ ರೂ.40,000/- ಗಳ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

 ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com