MALENADUTODAY.COM | SHIVAMOGGA NEWS
ಶಿವಮೊಗ್ಗ ನಗರದ ಹಳೆಯ ಜೈಲ್ ಮತ್ತೆ ಸುದ್ದಿಯಲ್ಲಿದೆ, ಮತ್ತೊಂದು ತಮಿಳು ಚಿತ್ರ ಅಲ್ಲಿ ಚಿತ್ರೀಕರಣಗೊಳ್ಳಲಿದೆ. ನಾಳೆಯಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು, ನಲವತ್ತು ದಿನ ಶೂಟಿಂಗ್ ನಡೆಯಲಿದೆಯಂತೆ.
rare turtle : ಅಪರೂಪದ ಆಮೆಯ ಮಾರಾಟಕ್ಕೆ ಯತ್ನ! ಅರಣ್ಯ ಇಲಾಖೆಯ ದಾಳಿ, ಆರೋಪಿ ಬಂಧನ!
ಈ ಹಿಂದೆ ಇಳಯದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ ಮಾಸ್ಟರ್ ಸಿನಿಮಾದ ಶೂಟಿಂಗ್ ಕೂಡ ಇದೇ ಜೈಲ್ನಲ್ಲಿ ನಡೆದಿತ್ತು . ಕೇಂದ್ರ ಕಾರಾಗೃಹ ಬೇರೆಡೆಗೆ ಶಿಫ್ಟ್ ಆದ ಬೆನ್ನಲ್ಲೆ, ಹಳಯ ಜೈಲ್ನ್ನ ಹಾಗೆಯೇ ಉಳಿಸಿಕೊಂಡು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಹಳೆಯ ಕಾಲದ ಜೈಲಿನ ಮಾದರಿಯಲ್ಲಿ ಕಾಣುವ ಕಾರಾಗೃಹ ಸಿನಿಮಾ ಶೂಟಿಂಗ್ ಸ್ಫಾಟ್ ಆಗುತ್ತಿದೆ. ಆಗಾಗ ಇಲ್ಲಿ ಶೂಟಿಂಗ್ ನಡೆಯುತ್ತಲೇ ಇರುತ್ತದೆ.
ಸದ್ಯ ಶೂಟಿಂಗ್ ಆಗಲಿರುವುದು ತಮಿಳು ಚಿತ್ರವಾಗಿದ್ದು, ಅಲ್ಲಿಯೇ ಖ್ಯಾತ ಹಾಸ್ಯನಟ ಯೋಗಿ ಬಾಬು (Actor Yogi Babu ) ನಟಿಸ್ತಿರುವ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನೂ ಚಿತ್ರನಟ ಯೋಗಿ ಬಾಬು ಕೂಡ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com