accident in mysore road/ ಭೀಕರ ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ! ಇಷ್ಟಕ್ಕೂ ಆಕ್ಸಿಡೆಂಟ್​ ಆಗಿದ್ದೇಗೆ ಗೊತ್ತಾ!?

Accident in mysore road scene captured on camera! Do you know why there was an accident after all?

accident in mysore road/ ಭೀಕರ ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ! ಇಷ್ಟಕ್ಕೂ ಆಕ್ಸಿಡೆಂಟ್​ ಆಗಿದ್ದೇಗೆ ಗೊತ್ತಾ!?

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ನಿನ್ನೆ  ಮೈಸೂರು ಬಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ (accident in mysore road,) 10 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಕ್ಯಾಮಾರಾ ದೃಶ್ಯಗಳು ಲಭ್ಯವಾಗಿದೆ.  ಕೊಳ್ಳೇಗಾಲ-ಟಿ.ನರಸಿಪುರ ಮುಖ್ಯರಸ್ತೆಯಲ್ಲಿ, ಕುರುಬೂರು  ಎಂಬಲ್ಲಿ ನಿನ್ನೆ ಘಟನೆ ಸಂಭವಿಸಿತ್ತು. 

ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ mysore road accident 2023,ಅಪಘಾತದಲ್ಲಿ ಕಾರು ಚಾಲಕ ಮತ್ತು ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದರು.  

ಜನಾರ್ದನ್​ ಎಂಬವರು ಹಾಗೂ  4 ವರ್ಷದ ಮಗು ಪುನೀತ್ ಮತ್ತು ಶಶಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ಧಾರೆ. ಸಂದೀಪ್​ (23), ಇವರ ತಂದೆ ಕೊಟ್ರೇಶ್​ (45), ತಾಯಿ ಸುಜಾತಾ (35), ಮಂಜುನಾಥ್​ (40), ಪತ್ನಿ ಪೂರ್ಣಿಮಾ (30), ಮಕ್ಕಳಾದ ಕಾರ್ತೀಕ್​ (11), ಪವನ್​ (7), ಗಾಯತ್ರಿ (30) ಮತ್ತು ಇವರ ಮಗಳು ಶ್ರಾವ್ಯಾ (3) ಮೃತರು.

ಬಳ್ಳಾರಿಯ ಸಂಗನಕಲ್ ನಿಂದ ಬಂದಿದ್ದ ಕುಟುಂಬಸ್ಥರು, ಮೈಸೂರಿನಲ್ಲಿ ಬಾಡಿಗೆ ಕಾರು ಮಾಡಿಕೊಂಡು ಸುತ್ತಾಡುತ್ತಿದ್ದರು. ಈ ಮಧ್ಯೆ ಹೆದ್ಧಾರಿಯಲ್ಲಿ ತಿರುವಿನಿಂದ ಸ್ಪೀಡಾಗಿ ಬಂದ ಇನ್ನೋವಾ ಕಾರು ಎದುರಿಗೆ ಬರುತ್ತಿದ್ದ ಬಸ್​ಗೆ ಡಿಕ್ಕಿಯಾಗಿದೆ.

ಬಸ್​ನಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಘಟನೆಯ ಪೂರ್ತಿ ಚಿತ್ರಣ ರೆಕಾರ್ಡ್​ ಆಗಿದ್ದು, ಒಂದು ಸಕೆಂಡ್​ನ ಅವಧಿಯಲ್ಲಿ ಕಾರು ನೇರವಾಗಿ ಮತ್ತು ಬರುತ್ತಿದ್ದ ಸ್ಪೀಡ್​ನಲ್ಲಿಯೆ ಬಸ್​ಗೆ ಡಿಕ್ಕಿ ಹೊಡೆದಿದೆ.  ಕಾರು ಮತ್ತು ಖಾಸಗಿ ಬಸ್​ ಡಿಕ್ಕಿ ಹೊಡೆದ ದೃಶ್ಯ ನಿಜಕ್ಕೂ ಗಾಬರಿ ಹುಟ್ಟಿಸುತ್ತಿದೆ. 

Shivamogga to bangalore bus booking/ ಶಿವಮೊಗ್ಗ-ಬೆಂಗಳೂರು ನಡುವೆ ಇವಿ ಪವರ್​ ಪ್ಲಸ್ ಬಸ್ ಸೇವೆ ಆರಂಭ! ಸಂಚಾರದ ಟೈಮಿಂಗ್ಸ್​ ಏನು!? ಟಿಕೆಟ್ ದರ ಎಷ್ಟು !? ವಿವರ ಓದಿ

ಶಿವಮೊಗ್ಗ ಶಿವಮೊಗ್ಗ-ಬೆಂಗಳೂರು ನಡುವೆ ಇವಿ ಪವ‌ರ್​ ಪ್ಲಸ್ (ಎಲೆಕ್ಟಿಕ್ ವೆಹಿಕಲ್) ಹವಾ ನಿಯಂತ್ರಿತ ಇ-ಬಸ್‌ಗಳ ಸೇವೆ ಆರಂಭಗೊಂಡಿದೆ. ಕಳೆದ ಶನಿವಾರ ಉದ್ಘಾಟನೆ ಹಿನ್ನೆಲೆಯಲ್ಲಿ ಒಂದು ಇ ಬಸ್​ ನ್ನ ರೋಡಿಗಿಳಿಸಿದ್ದ ಕೆಎಸ್​​ಆರ್​ಟಿಸಿ, ಇದೀಗ ಮತ್ತು ನಾಲ್ಕು ಬಸ್​ಗಳನ್ನು ಸೇವೆಗೆ ಒದಗಿಸಿದೆ. 

ಈ ಸಂಬಂಧ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟು ಐದು ಇ-ಬಸ್‌ಗಳ ಸೇವೆ ಮಂಗಳವಾರ ಅಂದರೆ, ಇವತ್ತಿನಿಂದಲೇ ಆರಂಭವಾಗಲಿದೆ. ಕೆಎಸ್‌ಆರ್ ಟಿಸಿಯಿಂದ ಶಿವಮೊಗ್ಗ ವಿಭಾಗಕ್ಕೆ ಒಟ್ಟು 10 ಇ-ಬಸ್‌ಗಳನ್ನು ಒದಗಿಸಲಾಗಿದೆ. ಉಳಿದ ಐದು ಬಸ್‌ಗಳನ್ನು ಶೀಘ್ರದಲ್ಲಿ ಸೇವೆಗೆ ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.

ಟಿಕೆಟ್ ದರ ಎಷ್ಟು?

ಇ-ಬಸ್‌ಗಳಲ್ಲಿ ಪ್ರಯಾಣ ದರ 600 ರೂ. ಸೇವೆ ಇದ್ದು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಲಭ್ಯವಿದೆ. ನಿಗಮದ ಅವತಾರ್ ವೆಬ್‌ ಸೈಟ್ https://ksrtc.in/oprs-web/) ನಲ್ಲಿ ಬುಕ್ಕಿಂಗ್ ಮಾಡಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಎಷ್ಟೊತ್ತಿಗೆ ಹೊರಡಲಿದೆ ಇವಿ ಪವರ್​ ಪ್ಲಸ್​

ಸದ್ಯ ಕೆಎಸ್​ಆರ್​ಟಿಸಿ ಟಿಕೆಟ್ ಬುಕ್ಕಿಂಗ್ ವೆಬ್​ಸೈಟ್​ನಲ್ಲಿ ತೋರಿಸಲಾಗುತ್ತಿರುವ ಮಾಹಿತಿ ಪ್ರಕಾರ, ಮಧ್ಯಾಹ್ನ 12 ಗಂಟೆ ಹಾಗೂ ಮಧ್ಯಾಹ್ನ 1 ಗಂಟೆಗೆ ಎರಡು ಬಸ್​ಗಳು ಬೆಂಗಳೂರಿಗೆ ಪ್ರಯಾಣ ಬೆಳಸಲಿವೆ. ಕ್ರಮವಾಗಿ 6 ಮತ್ತು7 ಗಂಟೆಗೆ ಬೆಂಗಳೂರು ತಲುಪಲಿವೆ. ಇನ್ನೆರಡು ಬಸ್​ಗಳು ರಾತ್ರಿ 10.30 ಕ್ಕೆ ಬೆಂಗಳೂರಿಗೆ ಹೊರಡಲಿದ್ದು, ಕ್ರಮವಾಗಿ 5.30 ಮತ್ತು 5.00 ಗಂಟೆಗೆ ಬೆಂಗಳೂರು ತಲುಪಲಿವೆ. 

ಶಿವಮೊಗ್ಗದಲ್ಲಿ ಸಿಡಿಲಿಗೆ ಮಹಿಳೆ ಬಲಿ

ಶಿವಮೊಗ್ಗದಲ್ಲಿ ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿದ್ಧಾಳೆ. ವಿನೊಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.  ಲಕ್ಷ್ಮೀಬಾಯಿ W/o ಕುಮಾರ ನಾಯಕ, ಮೃತ ಮಹಿಳೆ. 

ಇವರು ಇವತ್ತು ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ. ಈ ಸಂಬಂಧ ಸ್ಥಳಕ್ಕೆ ವಿನೋಬನಗರ ಪೊಲೀಸರು ಭೇಟಿನೀಡಿದ್ಧಾರೆ. 

ಇನ್ನೂ ನಗರದಲ್ಲಿ ಬೀಸಿದ ಬಾರೀ ಗಾಳಿಗೆ ಹಲವೆಡೆ ಮರ ಬಿದ್ದು ಹಾನಿ ಉಂಟಾಗಿದೆ.  ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಜಖಂಗೊಂಡ ಘಟನೆ ಸುರಭಿ ಹೋಟೆಲ್ ಬಳಿ ಸಂಭವಿಸಿದೆ. 

ಇಲ್ಲಿರುವ ಕೆನರಾ ಬ್ಯಾಂಕ್ ಬಳಿಯಲ್ಲಿದ್ದ ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಬಹುತೇಕ ಜಖಂಗೊಂಡಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಉಂಟಾಗಿಲ್ಲ. ಇನ್ನೂ ದೈವಜ್ಞ ಕಲ್ಯಾಣ ಮಂದಿರದ ಹತ್ತಿರ ತೆಂಗಿನಮರವೊಂದು ಉರುಳಿಬಿದ್ದಿದ್ದು ಮನೆಯೊಂದರ ಕಾಂಪೌಂಡ್ ಹಾಳಾಗಿದೆ.  

ಅತ್ತ ಸೋಮಿನಕೊಪ್ಪದಲ್ಲಿ ಮಳೆಗಾಳಿ ಮನೆಯೊಂದರ ಶೀಟುಗಳು ಹಾರಿಹೋಗಿವೆ. ಭಾರೀ ಗಾಳಿಗೆ ಈ ಅವಾಂತರ ಸಂಭವಿಸಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ.