BREAKING NEWS/ ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರರ ಮಹತ್ವದ ಹೇಳಿಕೆ!

Breaking NEWS/ Shimoga-Bengaluru flight: Mp B.Y. Raghavendra's statement

BREAKING NEWS/ ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರರ ಮಹತ್ವದ ಹೇಳಿಕೆ!
BREAKING NEWS/ ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರರ ಮಹತ್ವದ ಹೇಳಿಕೆ!

 KARNATAKA NEWS/ ONLINE / Malenadu today/ Apr 27, 2023 GOOGLE NEWS


ಶಿವಮೊಗ್ಗ/   ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಯಾವಾಗ ಹಾರಾಟ ಆರಂಭಿಸುತ್ತವೆ. ಏರ್​ಪೋರ್ಟ್​ ಉದ್ಘಾಟನೆಯಾಗಿ 2 ತಿಂಗಳೇ ಕಳದರೂ ಈ ಪ್ರಶ್ನೆಗೆ ಇಲ್ಲಿವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಈ ಸಂಬಂಧ ಮತ್ತೆ ಸಂಸದ ಬಿ.ವೈ ರಾಘವೇಂದ್ರ ಕೆಲವೊಂದು ಮಾಹಿತಿ ನೀಡಿದ್ದಾರೆ.

 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

 

ಸಂಸದರು ಹೇಳಿದ್ದೇನು?

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಹಿಂದೆ ಇನ್ನೊಂದು ವಾರದಲ್ಲಿ ವಿಮಾನ ಹಾರಾಟ ಆಗುತ್ತೆ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಒಂದು ವಾರದ ಪ್ರಕ್ರಿಯೆಗಳು ಮಾತ್ರ ಬಾಕಿ ಇದ್ದವು. 

 

ಆನಂತರ ನಾವಿನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದೇವೆ. ಬಿಫೋರ್​ ಎಲೆಕ್ಷನ್​ ಅಗುತ್ತೆ ಎಂದುಕೊಂಡಿದ್ದೇವೆ. ಆದರೆ ಕೋಡ್ ಆಫ್​ ಕಂಡಕ್ಟ್​ನಿಂದ ಮುಂದಕ್ಕೆ ಹೋಗುತ್ತೋ ಏನೋ ಗೊತ್ತಿಲ್ಲ. ನಮ್ಮ ಕಡೆಯಿಂದ ಏನು ಪ್ರಕ್ರಿಯೆಗಳು ಆಗಬೇಕಿತ್ತೋ ಅದೆಲ್ಲವೂ ಮುಗಿದಿದೆ  ಎಂದಿದ್ದಾರೆ. 



ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 



ಎಲ್ಲಾ ಓಕೆ..ಓಕೆ…ಓಕೆ

 

ದುಬೈನಿಂದ ಒಂದಕ್ಕೆ 12 ಕೋಟಿ ರೂಪಾಯಿಯಂತೆ ಮೂರು ಫೈರ್​ ಇಂಜಿನ್ ಬರಬೇಕಿತ್ತು. ಅದು ಸದ್ಯದಲ್ಲಿಯೇ ಶಿವಮೊಗ್ಗ ಏರ್​ಪೋರ್ಟ್​ಗೆ ರೀಚ್ ಆಗುತ್ತಿದೆ. ಇಂಡಿಗೋ ಟೀಂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಇನ್​ಸ್ಪೆಕ್ಷನ್​ ಮಾಡಿದ್ದಾರೆ. ಅಲ್ಲದೆ ಡಿಜಿಸಿಎ ಜೊತೆಗೆ ಈ ಸಂಬಂಧ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ. 



ಶಿವಮೊಗ್ಗ-ಬೆಂಗಳೂರು ವೇಳಾಪಟ್ಟಿಗೆ ಕಾಯುತ್ತಿದ್ದೇವೆ 

 

ಶಿವಮೊಗ್ಗ-ಬೆಂಗಳೂರು ನಡುವೆ ಹಾರಾಟಕ್ಕೆ  ಸಂಬಂಧಿಸಿದಂತೆ ಅಗ್ರಿಮೆಂಟ್ ಆಗಿದೆ. ಸರ್ಕಾರದಿಂದ 2 ಕೋಟಿ ಸಬ್ಸಿಡಿಯನ್ನು ಪ್ರತಿಯೊಂದು ಟಿಕೆಟ್​ಗೆ 500 ರೂಪಾಯಿ ನೀಡಲಾಗ್ತಿದೆ. ಪ್ರತಿದಿನಕ್ಕೆ ಇದರ ಮೊತ್ತ 73 ಸಾವಿರ ರೂಪಾಯಿ ಆಗುತ್ತದೆ. ನಾವು ಕೂಡ ಕಾಯುತ್ತಿದ್ದೇವೆ ಡಿಜಿಸಿಎಯವರು ಅಧಿಕೃತವಾಗಿ ವೇಳಾಪಟ್ಟಿ ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದೇವೆ. 

 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

 

ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲ

 

ಏರ್​ಪೋರ್ಟ್​ನಿಂದ ವಿಮಾನ ಹಾರಾಟದಿಂದ ಯಾರಿಗೆ ಅನುಕೂಲವಾಗುತ್ತೋ ಗೊತ್ತಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರಕ್ಕೆ ಬರಲು ಮಾತ್ರ ಅನುಕೂಲವಾಗುತ್ತಿದೆ ಎಂದು ಹಾಸ್ಯ ಮಾಡಿ ಸಂಸದ ರಾಘವೇಂದ್ರರವರು ನಕ್ಕರು

 

 

Malenadutoday.com Social media