ಮರುಮೌಲ್ಯಮಾಪನದ ಪರಿಣಾಮ | ಬದಲಾಯ್ತು ಶಿವಮೊಗ್ಗದ ವಿದ್ಯಾರ್ಥಿಗಳ RANK |

SSLC revaluation results have caused a shift in Shivamogga student rankings. 

ಮರುಮೌಲ್ಯಮಾಪನದ ಪರಿಣಾಮ | ಬದಲಾಯ್ತು ಶಿವಮೊಗ್ಗದ ವಿದ್ಯಾರ್ಥಿಗಳ RANK |
Shivamogga student rank, SSLC revaluation results

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆʼ 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯ ಮಾಪನ ಶಿವಮೊಗ್ಗದ ವಿದ್ಯಾರ್ಥಿಗಳ ರ್ಯಾಂಕ್‌ನಲ್ಲಿ ಬದಲಾವಣೆ ತಂದಿದ್ದು,  ಆಲ್ಗೊಳ ವಿಕಾಸ ಪ್ರೌಢಶಾಲೆಯ ಶಾರ್ವರಿ ಪಿ. ರಾವ್ ಮರು ಮೌಲ್ಯಮಾಪನದಲ್ಲಿ 625ಕ್ಕೆ 622 ಅಂಕಗಳನ್ನು ಪಡೆದಿದ್ದಾರೆ. 

ವಿಶೇಷ ಅಂದರೆ, ಈ ಮೂಲಕ ಶಾರ್ವರಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ ಈ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಶಾರ್ವರಿ ಅವರಿಗೆ ವಿಜ್ಞಾನ ವಿಷಯದಲ್ಲಿ 91 ಅಂಕ ಬಂದಿತ್ತು. ಹೆಚ್ಚು ಅಂಕ ಬರುವ ವಿಶ್ವಾಸವಿದ್ದುದರಿಂದ ಮರುಮೌಲ್ಯಮಾಪನ ಮಾಡಿಸಿದ್ದರು. ಇದೀಗ ಅವರಿಗೆ ವಿಜ್ಞಾನದಲ್ಲಿ 100 ಅಂಕ ಲಭಿಸಿದೆ.

ಇನ್ನೂ ಪ್ರಿಯದರ್ಶಿನಿ ಪ್ರೌಢಶಾಲೆಯ ಹತ್ತನೇ ತರಗತಿಯ ವರುಣ್ ಎಂ.ವೈ ಈ ಮೊದಲು ಹೊರಬಿದ್ದಿದ್ದ ಎಸ್‌ಎಸ್‌ಎಲ್‌ಸಿ ಪಲಿತಾಂಶದಲ್ಲಿ 595 ಅಂಕ ಗಳಿಸಿದ್ದರು. ಆ ಪೈಕಿ ವಿಜ್ಞಾನ ವಿಷಯದಲ್ಲಿ 87 ಅಂಕಗಳು ಬಂದಿತ್ತು. ಬಳಿಕ ಮರು ಮೌಲ್ಯ ಮಾಪನಕ್ಕೆ ಹಾಕಿದ್ದರು. ಇದೀಗ ಹೆಚ್ಚುವರಿಯಾಗಿ 3 ಅಂಕಗಳು ಲಭಿಸಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ಮರು ಮೌಲ್ಯ ಮಾಪನದಲ್ಲಿ 5 ಅಂಕ ಬಂದಿದೆ. 625 ಕ್ಕೆ 603 ಅಂಕಗಳನ್ನು ಗಳಿಸಿದ್ದಾರೆ. 

SSLC revaluation results have caused a shift in Shivamogga student rankings.