ರೈತರಿಗಾಗಿ 440.20 ಕೋಟಿ ಬಡ್ಡಿ ಮನ್ನಾ | ಬ್ರಾಹ್ಮಣರಿಗೆ 5 ಲಕ್ಷ ಸಹಾಯಧನ| ಗೃಹಜ್ಯೋತಿ & ವಿವಾಹಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ

Rs 440.20 crore interest waiver for farmers | Rs 5 lakh subsidy for Brahmins | Government's Important Announcement regarding Grihajyoti & Marriage Registration

ರೈತರಿಗಾಗಿ 440.20 ಕೋಟಿ ಬಡ್ಡಿ ಮನ್ನಾ |  ಬ್ರಾಹ್ಮಣರಿಗೆ 5 ಲಕ್ಷ ಸಹಾಯಧನ| ಗೃಹಜ್ಯೋತಿ & ವಿವಾಹಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ
Governments Important Announcement today

Shivamogga | Feb 2, 2024 | ವಾರ್ತಾ ಇಲಾಖೆಯ ಕೆಲವು ಪ್ರಮುಖ ಪ್ರಕಟಣೆಗಳ ವಿವರ ಇಲ್ಲಿದೆ. 

ಗೃಹಜ್ಯೋತಿ ಯೋಜನೆ 

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಗೃಹಜ್ಯೋತಿ'ಯ  grihajyothi ಲಾಭವನ್ನು ಬಹುತೇಕ ಕನ್ನಡಿಗರು ಪಡೆಯುತ್ತಿದ್ದು, ಯಶಸ್ವಿ ಯೋಜನೆಯಾಗಿ ಮನೆಮಾತಾಗಿದೆ. ಇದುವರೆಗೆ 1.65 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿವೆ. 

Government Notification

Freeelectricity ಈ ಯೋಜನೆಯ ಲಾಭ ಪಡೆಯಲು ನೋಂದಣಿಗೆ ಯಾವುದೇ ಅಂತಿಮ ದಿನ ಇರುವುದಿಲ್ಲ. ಯಾರು ನೋಂದಣಿ ಮಾಡಿಕೊಂಡಲ್ಲವೋ ಅವರು ತಕ್ಷಣ ಸೇವಾಸಿಂಧು ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಸರ್ಕಾರ ಪ್ರಕಟಣೆಯಲ್ಲಿ  ತಿಳಿಸಿದೆ 

ಬ್ರಾಹ್ಮಣರ ಕುಟುಂಬಗಳ ಅಭಿವೃದ್ಧಿ

ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸ್ವಯಂ ಉದ್ಯೋಗಿ ಬ್ರಾಹ್ಮಣರಿಗೆ 5 ಲಕ್ಷ ರೂ.ವರೆಗೆ ಸರ್ಕಾರಿ ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ಸ್ವಾವಲಂಬಿ ಮತ್ತು ಸಾಂದೀಪಿನಿ ಶಿಷ್ಯ ವೇತನದ ಯೋಜನೆಗಳ ಉಪಯೋಗವನ್ನು ಅರ್ಹರು ಪಡೆದುಕೊಳ್ಳಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Government Notification

ರೈತರಿಗೆ ಸಹಕಾರ

ರಾಜ್ಯದ ಸಹಕಾರ ಸಂಘಗಳ ಮೂಲಕ ರೈತರು ಸಾಲ ಪಡೆದು 31-12-2023 ಕ್ಕೆ ಸುಸ್ತಿಯಾಗಿರುವ  ಮಧ್ಯಾಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಒಟ್ಟು 440.20 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡುವ ಸಂಬಂಧ ಹೊರಡಿಸಿದ್ದ 20-01-2024ರ ಸರ್ಕಾರಿ ಅದೇಶಕ್ಕೆ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ 

Government Notification

ಕಾವೇರಿ-2 ತಂತ್ರಾಂಶ

ವಿವಾಹ ನೋಂದಣಿ ಇನ್ನೂ ಸುಲಭವಾಗಿದ್ದು, ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸುವ 'ಹಿಂದೂ ವಿವಾಹಗಳ ನೋಂದಣಿ (ತಿದ್ದುಪಡಿ) ನಿಯಮಗಳು - 2024' ಅನ್ನು ಸಚಿವ ಸಂಪುಟ ಸಭೆ ಅನುಮೋದಿಸಿತು. ಇದರಿಂದಾಗಿ ವಿವಾಹ ನೋಂದಣಿಗೆ ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ-1 ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.