ನಾಳೆ ಮತ್ತು ನಾಡಿದ್ದು ಶಿವಮೊಗ್ಗದ 30 ಕ್ಕೂ ಹೆಚ್ಚು ಏರಿಯಾಗಳಲ್ಲಿ ಪವರ್ ಕಟ್!

Power cuts in more than 30 areas of Shivamogga | Powercut banglore | powercut today shivamogga

ನಾಳೆ ಮತ್ತು ನಾಡಿದ್ದು ಶಿವಮೊಗ್ಗದ 30 ಕ್ಕೂ ಹೆಚ್ಚು ಏರಿಯಾಗಳಲ್ಲಿ ಪವರ್ ಕಟ್!
Power cut in Shivamogga

Shivamogga | Feb 2, 2024 |  ಮೆಸ್ಕಾಂ 11 ಕೆವಿ. ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 04 ರಂದು ಬೆಳಗ್ಗೆ 10.00 ರಿಂದ ಮ. 02.00 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಮೆಸ್ಕಾಂ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದೆ 

ಪರ್ಫೆಕ್ಟ್ ಅಲೈಯನ್ಸ್, ಜೆಎನ್‍ಎನ್‍ಸಿ ಕಾಲೇಜ್, ಎನ್‍ಇಎಸ್ ಬಡಾವಣೆ, ರೆಡ್ಡಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.03 ರಂದು ವಿದ್ಯುತ್ ವ್ಯತ್ಯಯ

ಇನ್ನೊಂದೆಡೆ  ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 03 ರಂದು ಬೆಳಗ್ಗೆ 09-30 ರಿಂದ ಸಂಜೆ 06-00ರವರೆಗೆ  ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಆಲ್ಕೋಳ ಅರಣ್ಯ ಕಚೇರಿ, ಆಹಾರ ನಿಗಮ ಇಲಾಖೆ, ಇಂದಿರಾಗಾಂಧಿ ಬಡಾವಣೆ, ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆ.ಎಸ್.ಆರ್.ಟಿ.ಸಿ. ಲೇಔಟ್, ಸೂಡಾ ಕಚೇರಿ, ಕಾಶೀಪುರ, ದಾಮೋದರ ಕಾಲೋನಿ, ಕೆ.ಹೆಚ್.ಬಿ. ಎ ಯಿಂದ ಜಿ ಬ್ಲಾಕ್, ಕರಿಯಣ್ಣ ಬಲ್ಡಿಂಗ್, ರೇಣುಕಾಂಬ ಬಡಾವಣೆ, ತಿಮ್ಮಕ್ಕ ಲೇಔಟ್, ಲಕ್ಷ್ಮೀಪುರ ಬಡಾವಣೆ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ಸಿದ್ಧರಾಮ ಬಡಾವಣೆ, ತಮಿಳ್ ಕ್ಯಾಮಪ್, ಪೊಲೀಸ್ ಚೌಕಿ, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗರಿ ಲೇಔಟ್, ಎಂ.ಎಂ.ಎಸ್. ಲೇಔಟ್, ಭೋವಿ ಕಾಲೋನಿ ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ