ಬಿಜೆಪಿ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರುವುದೇ ನಾನು ಪ್ರದಾನಿಯವರಿಗೆ ನೀಡುವ ಕೊಡುಗೆ- ಬಿ.ಎಸ್.ವೈ ಈ ರೀತಿ ಹೇಳಿದ್ದೇಕೆ ಗೊತ್ತಾ?

ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಶ್ರಮ ಹಾಕಿದ್ದೇನೆ. ಪ್ರಧಾನಿಯವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಗಾಟಿಸಿದ ನಂತರ ಇಲ್ಲಿನ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಾವಿರಾರು ಜನರಿಗೆ ಉದ್ಯೋಗ ಸಿಗುವಂತಾಗುತ್ತದೆ. ನೀರಾವರಿ ಯೋಜನೆಗೂ ಕೂಡ ಹೆಚ್ಚನ ಅಧ್ಯತೆ ಕೊಟ್ಟಿದ್ದೇವೆ. ನರೇಂದ್ರ ಮೋದಿಯವರ ಆಶಿರ್ವಾದದೊಂದಿಗೆ ಈ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲಿದ್ದೇವೆ. ಬಸವರಾಜ್ ಬೊಮ್ಮಾಯಿಯವರು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ  

ನಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದೇನೆಯೇ ಹೊರತು, ಪಕ್ಷ ಸಂಘಟನೆಯಿಂದ ದೂರ ಉಳಿದಿಲ್ಲ. ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಸಂಘಟಿಸಿ ಮುಂದೆ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ.  ಆ ದಿಕ್ಕಿನಲ್ಲಿ ನಾಳೆಯಿಂದಲೇ ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲ್ಲಿದ್ದೇನೆ, ಯಾರು ಕೂಡ ಯಡಿಯೂರಪ್ಪ ಮನೆಯಲ್ಲಿ ಕೂತಿದ್ದಾನೆ ಎಂದು ಭಾವಿಸುವ ಅಗತ್ಯವಿಲ್ಲ. ನಾನು ಪಕ್ಷವನ್ನು ಬಲಪಡಿಸುವುದು ನನ್ನ ಕರ್ತವ್ಯ. ಯಾಕೆಂದರೆ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಆ ಋಣವನ್ನು ತೀರಿಸಲು ಬದುಕಿನ ಕೊನೆ ಉಸಿರು ಇರುವವರೆಗೂ ಸಾಧ್ಯವಿಲ್ಲ. ಹಾಗಾಗಿ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರಧಾನಿಯವರು ತೋರಿದ ಪ್ರೀತಿ ವಿಶ್ವಾಸ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ನಾನು ಸದಾ ಅವರಿಗೆ ಋಣಿಯಾಗಿದ್ದೇನೆ. ಅವರ ಅಪೇಕ್ಷೆಯಂತೆ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರುವುದೇ ನಾನು ಅವರಿಗೆ ಕೊಡುವ ಕೊಡುಗೆ ಎಂದು ಯಡಿಯೂರಪ್ಪ ಹೇಳಿದ್ದಾರೆ.