ಇನ್ಸ್ಟಾಗ್ರ್ಯಾಮ್​ ಓಪನ್ ಮಾಡುತ್ತಲೇ ಯುವಕನಿಗೆ ಕಾದಿತ್ತು! ಆತನದ್ದೇ ಫೋಟೋ ಜೊತೆ ಬಂದಿತ್ತು ಆ ವಿಡಿಯೋ!

The youth has lodged a complaint with the CEN police station against him for making a video using his photo on Instagram./shivamogga local news

ಇನ್ಸ್ಟಾಗ್ರ್ಯಾಮ್​  ಓಪನ್ ಮಾಡುತ್ತಲೇ ಯುವಕನಿಗೆ ಕಾದಿತ್ತು! ಆತನದ್ದೇ ಫೋಟೋ ಜೊತೆ ಬಂದಿತ್ತು ಆ ವಿಡಿಯೋ!

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ ಇಲ್ಲಿನ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಅವಾಚ್ಯವಾಗಿ ಬೈದು ಪೋಸ್ಟ್ ಹಾಕಿದ ಸಂಬಂಧ ಎಫ್​ಐಆರ್ ದಾಖಲಾಗಿದೆ. 

ಕಳೆದ 26 ರಂದು ಸ್ಥಳೀಯ ನಿವಾಸಿ ಯುವಕನೊಬ್ಬನಿಗೆ ಆತನ ಸ್ನೇಹಿತ ಫೋನ್​ ಮಾಡಿದ್ದಾನೆ. ಅಲ್ಲದೆ  ಇನ್​ಸ್ಟಾ ಗ್ರಾಮ್ ಅಕೌಂಟ್​ ಒಂದರಲ್ಲಿ ನಿನ್ನೆ  ಪೋಟೋ ಹಾಕಿ ಬ್ಯಾಕ್​ ಗೌಂಡ್ ವಾಯ್ಸ್​ನಲ್ಲಿ ಕೆಟ್ಟಕೊಳಕ ಬೈಯ್ಯುತ್ತಿರುವ ವಿಡಿಯೋ ಅಪ್​​ಲೋಡ್​ ಆಗಿದೆ ನೋಡು ಎಂದಿದ್ದಾನೆ. 

ಇದರಿಂದ ಭಯಬಿದ್ದ ಯುವಕ ನೇರವಾಗಿ ಸಿಇಎನ್  ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಿಸಿದ್ದಾನೆ.  ಇನ್​ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಅವಾಚ್ಯವಾಗಿ ಬೈದಿರುವ ಸಂಬಂಧ ಸಿಇಎನ್​ ಠಾಣೆ ಪೊಲೀಸರು INFORMATION TECHNOLOGY ACT 2008 (U/s-66(C)); IPC 1860 (U/s-504)

ಇಂಗ್ಲೆಂಡ್​ನಿಂದ ಬಂತು ಮೆಸೇಜ್​! ಚಾಟಿಂಗ್ ಮಾಡ್ತಿದ್ದ ವ್ಯಕ್ತಿ ನಂಬಿ ಕಳೆದುಕೊಂಡರು ಆರು ಲಕ್ಷ 

ಶಿವಮೊಗ್ಗ ಮಹಿಳೆಯೊಬ್ಬರಿಗೆ ಇಂಗ್ಲೆಂಡ್ ದೇಶದಲ್ಲಿ ವೈದ್ಯನೆಂದು ನಂಬಿಸಿ ಫೇಸ್‌ಬುಕ್‌ನಲ್ಲಿ ಚಾಟಿಂಗ್ ಮಾಡಿ, ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.ಶಿವಮೊಗ್ಗದ ಮಹಿಳೆಯೊಬ್ಬರ ಫೇಸ್‌ಬುಕ್‌ಗೆ ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ ಒಪ್ಪಿಕೊಂಡ ಬಳಿಕ ವ್ಯಕ್ತಿಯು ಮಹಿಳೆ ಜತೆ ಚಾಟಿಂಗ್ ನಡೆಸಿದ್ದಾನೆ. ಈ ವೇಳೆ ತಾನೊಬ್ಬ ವೈದ್ಯನೆಂದು ಹೇಳಿಕೊಂಡಿದ್ದಾನೆ. ನಂತರ, ಇಂಗ್ಲೆಂಡ್‌ನಿಂದ ಅಮೂಲ್ಯ ಚಿನ್ನಾಭರಣ ಉಡುಗೊರೆ ಕಳುಹಿಸುವುದಾಗಿ ಚಾಟಿಂಗ್‌ನಲ್ಲಿ ತಿಳಿಸಿದ್ದಾನೆ.

ತದನಂತರ, ಮೇ 16ರಂದು ಮಹಿಳೆಯ ಮೊಬೈಲ್ ನಂಬರ್‌ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏ‌ರ್​ಪೋರ್ಟ್‌ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮಹಿಳೆ ಹೆಸರಿನಲ್ಲಿ ಕೊರಿಯರ್ ಬಂದಿದ್ದು ಅದಕ್ಕೆ ಒಂದಿಷ್ಟು ಚಾರ್ಜ್ ಆಗಲಿದೆ ಎಂದು ತಿಳಿಸಿದ್ದಾನೆ. 

ಇದನ್ನು ನಂಬಿದ ಮಹಿಳೆ ಮೇ 16 ರಿಂದ 20ರ ವರೆಗೆ ವಿವಿಧ ಹಂತದಲ್ಲಿ ಒಟ್ಟು 6.50 ಲಕ್ಷರೂ. ವರ್ಗಾಯಿಸಿದ್ದಾಳೆ. ನಂತರ, ಚಾಟಿಂಗ್ ಮಾಡಿದ ವ್ಯಕ್ತಿ ಹಾಗೂ ಏರ್‌ಪೋರ್ಟ್‌ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದವರು ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದು, ಮಹಿಳೆಯು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ

ಹುಲ್ಲು ಕಟ್ಟುವ ಮಷಿನ್​ಗೆ ಸಿಲುಕಿ ಕಾರ್ಮಿಕ ಸಾವು! ಹೇಗಾಯ್ತು ಘಟನೆ

ಶಿವಮೊಗ್ಗ: ಬೈಪಾಸ್ ನಲ್ಲಿರುವ ಟೊಯೋಟಾ ಶೋ ರೂಂ ಹಿಂಭಾಗದ ಜಮೀನಿನಲ್ಲಿ ಭತ್ತದ ಪೆಂಡಿ ಕಟ್ಟುವ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ಧಾನೆ. ಮೃತನನ್ನು ತಮಿಳುನಾಡಿನ ಕಲಕುರ್ಚಿಯ ಸೂರ್ಯ(23) ಎಂದು ಗುರುತಿಸಲಾಗಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು,  ಭತ್ತದ ಪೆಂಡಿಗಳನ್ನು ಮಾಡುವಾಗ ಯಂತ್ರಕ್ಕೆ ಹುಲ್ಲು ಸಿಲುಕಿದೆ. ಅದನ್ನ ಈತ ಬಿಡಿಸಲು ಮುಂದಾಗಿದ್ಧಾನೆ. ಆ ವೇಳೆಯಲ್ಲಿ ಯಂತ್ರದೊಳಗೆ ಆತನ ಕುತ್ತಿಗೆ ಭಾಗ ಸಿಲುಕಿ ಮೃತಪಟ್ಟಿದ್ದಾನೆ . ಸದ್ಯ ಘಟನೆ ಸಂಬಂಧ. ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿದ್ಧಾರೆ. 

ಮದುವೆಯಾದ ಮೇಲೆಯು ಗೆಳತನ ಬಿಡದ ಸ್ನೇಹಿತೆಯರು! ಗೆಳತಿಯ ಸಂಸಾರ ಸರಿಪಡಿಸಲು ಹೋಗಿ ಚಾಕುವಿನಿಂದ ಇರಿತಕ್ಕೊಳಗಾದರು!

ಶಿವಮೊಗ್ಗ/ ಗಂಡನಿಂದ ಮನನೊಂದು ಮನೆಬಿಟ್ಟು ಬಂದಿದ್ದ ಸ್ನೇಹಿತೆಯ ಪರವಾಗಿ ನಿಂತಿದ್ದಕ್ಕೆ ಗೆಳತಿಯ ಪತಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಅಶ್ವಥ್​ ನಗರದಲ್ಲಿ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಕೂಡ ದಾಖಲಾಗಿದೆ. 

ನಡೆದಿದ್ದೇನು?

ಅಶ್ವಥ್​ ನಗರದ ನಿವಾಸಿ ಯುವತಿಯೊಬ್ಬರು ತಮ್ಮ ಗಂಡನ ಮನೆಯ ಸಮಸ್ಯೆಯಿಂದ ಬೇಸತ್ತು ಮನೆಬಿಟ್ಟು ಹೋಗುವುದಾಗಿ, ಆಕೆಯ ಇಬ್ಬರು ಸ್ನೇಹಿತೆಯರಿಗೆ ಹೇಳಿದ್ಧಾರೆ. ಈ ವೇಳೆ ಆಕೆಯನ್ನು ಸಮಾಧಾನ ಮಾಡಿದ ದೂರುದಾರ ಮಹಿಳೆಯು, ಶಿವಮೊಗ್ಗ ಖಾಸಗಿ ಬಸ್​ಸ್ಟ್ಯಾಂಡ್​ನಲ್ಲಿ ಆಕೆಯನ್ನು ಸಮಾಧಾನ ಪಡಿಸಿದ್ಧಾರೆ . ಅಲ್ಲದೆ ಮೂವರು  ಸೇರಿ, ನೊಂದ ಯುವತಿಯ ಗಂಡನ ಮನೆಯ ಕಡೆಯವರಿಗೆ ಫೋನ್ ಮಾಡಿದ್ದಾರೆ.  ಆಗ ಸ್ನೇಹಿತೆಯ ಪತಿಯು, ಮೂವರನ್ನು  ಚೌಡಮ್ಮ ದೇವಸ್ಥಾನದ ಹತ್ತಿರ ಬರಲು ಹೇಳಿದ್ಧಾನೆ. ಅಲ್ಲಿಗೆ ಮೂವರು ಸ್ನೇಹಿತೆಯರು ಒಟ್ಟಿಗೆ ಹೋಗಿದ್ದಾರೆ. ಆದರೆ ಅಲ್ಲಿ ಆರೋಪಿ ಹಾಗೂ ಇನ್ನೊಬ್ಬ ಮೂವರ ಮೇಲೆ ಹಲ್ಲೆ ಮಾಡಿದ್ಧಾರೆ. ಅಲ್ಲದೆ ಈ ವೇಳೆ ಕುಮಾರ್ ಎಂಬಾತ ಚಾಕು ತೆಗೆದು ಇಬ್ಬರು ಯುವತಿಯರಿಗೆ ಚುಚ್ಚಿದ್ದಾನೆ. ಇದರಿಂದ ಇಬ್ಬರು ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.