ಕಾರು ಡಿಕ್ಕಿ! ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

The car collided! Auto overturned in the middle of the road!

ಕಾರು ಡಿಕ್ಕಿ!  ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

KARNATAKA NEWS/ ONLINE / Malenadu today/ May 25, 2023 SHIVAMOGGA NEWS/ shivamogga news kannada

ಶಿವಮೊಗ್ಗ/ ಕಾರೊಂದು ಡಿಕ್ಕಿಯಾಗಿ ಆಟೋವೊಂದು ಪಲ್ಟಿಯಾದ ಘಟನೆ ನಿನ್ನೆ ಶಿವಮೊಗ್ಗ ನಗರದಲ್ಲಿಯೇ ನಡೆದಿದೆ.  ಎಲ್‌ಎಲ್‌ಆರ್‌ ರಸ್ತೆಯಲ್ಲಿ ನಿನ್ನೆ ಈ  ಘಟನೆ ಸಂಭವಿಸಿದೆ.  

ಶುಭಂ ಹೊಟೇಲ್‌ ಕಡೆಯಿಂದ ಜೈಲ್‌ ಸರ್ಕಲ್‌ ಕಡೆಗೆ ಬರುತ್ತಿದ್ದ ಆಟೋಗೆ . ದುರ್ಗಿಗುಡಿ ರಸ್ತೆ ಕಡೆಯಿಂದ ಬಂದ ನ್ಯಾನೋ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಆಟೋ ಪಲ್ಟಿಯಾಗಿದೆ. ಪರಿಣಾಮ, ಆಟೋದಲ್ಲಿದದ್ದ ಪ್ಯಾಸೆಂಜರ್​ ಹಾಗೂ ಚಾಲಕನಿಗೆ ಸಣ್ಣಪುಟ್ಟ ಏಟಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ಸ್ಥಳಕ್ಕೆ ಓಡಿ ಬಂದ ಸ್ಥಳೀಯರು, ಪ್ರಯಾಣಿಕ ಹಾಗೂ ಚಾಲಕನನ್ನ ಆರೈಕೆ ಮಾಡಿದ್ದಾರೆ.  


₹2 ಸಾವಿರ ರೂಪಾಯಿ ನೋಟುಗಳನ್ನ ಹೀಗೂ ಎಕ್ಸ್​ಚೇಂಜ್​ ಮಾಡಬಹುದಾ!? ಒಂದೇ ದಿನದಲ್ಲಿ ಕೋಟಿಗಟ್ಲೇ ಬ್ಲ್ಯಾಕ್​ ಮನಿ ಬದಲಾಯಿಸಿಕೊಳ್ಳಬಹುದಾ? ಏನಿದು ರೂಲ್ಸೇ ಕೊಟ್ಟ ಟ್ರಿಕ್ಸ್​​

Malenadu today/  ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿ ಕೊಳ್ಳಲು  ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ಗುರುತು ಪಡೆದುಕೊಳ್ಳುವ ಷರತ್ತು ಕೂಡ ರದ್ದಾಗಿದೆ. ಪ್ರತಿಯೊಬ್ಬ ವ್ಯಕ್ತಿ , ಒಂದು ಸಲಕ್ಕೆ,  ಗರಿಷ್ಟ 20 ಸಾವಿರ ರೂಪಾಯಿಯವರೆಗೂ ಯಾವುದೇ ದಾಖಲಾತಿ ನೀಡದೇ , ಗುಲಾಬಿ ನೋಟುಗಳನ್ನ ಬ್ಯಾಂಕ್​ನಲ್ಲಿ ಎಕ್ಸ್​ಚೇಂಜ್ ಮಾಡಬಹುದು. ಆದರೆ ಇದೇ ನಿಯಮ ಇದೀಗ ಕಪ್ಪುಹಣದ ಸರಾಗ ಬದಲಾವಣೆಗೆ ದಾರಿ ಮಾಡಿಕೊಟ್ಟಿದ್ಯಾ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. 

ನಿಯಮದಲ್ಲಿಯೇ ಇದೆ ಸರಳ ದಾರಿ

ಏಕೆಂದರೆ, ನಿಯಮದ ಪ್ರಕಾರ,20 ಸಾವಿರದವರೆಗೂ ಎಕ್ಸ್​ಚೇಂಜ್ ಮಾಡಿಕೊಳ್ಳುವ ವ್ಯಕ್ತಿಯು ದಾಖಲಾತಿ ನೀಡಬೇಕಿಲ್ಲ. ಮೇಲಾಗಿ ಹೀಗೆ ಒಂದು ಸಲಕ್ಕೆ 20 ಸಾವಿರ ರೂಪಾಯಿಯಂತೆ  ಆತ, ದಿನಕ್ಕೆ ಎಷ್ಟು ಸಲ ಬೇಕಾದರೂ ಹಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 20 ಸಾವಿರ ರೂಪಾಯಿ ಒಳಗಿನ ಎಕ್ಸ್​ಚೇಂಜ್​ಗೆ ಯಾರು ಕೂಡ ಗುರುತು, ಅಡ್ರೆಸ್​ ಇತ್ಯಾದಿಗಳನ್ನ ನೀಡುವ ಅಗತ್ಯವಿರುವುದಿಲ್ಲ. 

ದಿನಕ್ಕೆ ಎಷ್ಟು ಬೇಕಾದರೂ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದಾ?

ಹೀಗಾಗಿ ಒಂದೇ ಬ್ಯಾಂಕಿನಲ್ಲಿ ಒಬ್ಬನೇ ವ್ಯಕ್ತಿ, ದಿನಕ್ಕೆ ಹತ್ತು ಸಲ ಬೇಕಾದರೂ ಹಣವನ್ನು ಎಕ್ಸ್​ಚೇಂಜ್ ಮಾಡಬಹುದಾಗಿದೆ. 20 ಸಾವಿರ ರೂಪಾಯಿಯ ಲಿಮಿಟ್ ಕೇವಲ ಒಂದು ಸಲಕ್ಕೆ ಮಾತ್ರ ಅನ್ವಯಿಸುತ್ತದೆ. ದಿನಕ್ಕೆ ಒಂದು ಸಲ ಮಾತ್ರ ಹಣ ಎಕ್ಸ್​ಚೇಂಜ್​ಗೆ ಅಂತೇನು ಷರತ್ತು ಹಾಕಲಾಗಿಲ್ಲ. ಆದ್ದರಿಂದ ಕೋಟಿಗಟ್ಟಲೇ ಗುಲಾಬಿ ನೋಟಿದ್ದವರು, ಜನರನ್ನ ಬಿಟ್ಟು ಒಂದೇ ದಿನ ತಮ್ಮೆಲ್ಲಾ ಬ್ಲ್ಯಾಕ್​ ಮನಿಯನ್ನು ಬದಲಾಯಿಸಿಕೊಳ್ಳಲು ಅವಕಾಶ ಇದರಿಂದ ಸಿಕ್ತಿದ್ಯಾ ಎಂಬ ಚರ್ಚೆ ಸಾರ್ವಜನಿಕರಲ್ಲಿ ನಡೆಯುತ್ತಿದೆ. 

ದಿನವಿಡಿ ಸುತ್ತಿದರೇ ಕಪ್ಪು ಹಣ ಖಾಲಿ!

ಒಬ್ಬ ವ್ಯಕ್ತಿ ಒಂದು ಬ್ಯಾಂಕ್​​ನಲ್ಲಿ , ಗರಿಷ್ಟ 20 ಸಾವಿರ ರೂಪಾಯಿಯನ್ನ ಬದಲಾಯಿಸಿಕೊಂಡು ಪಕ್ಕದಲ್ಲಿರುವ ಇನ್ನೊಂದು ಬ್ರಾಂಚ್​ಗೆ ಹೋಗುತ್ತಾನೆ, ಅಲ್ಲಿಯು ಗರಿಷ್ಟ 20 ಸಾವಿರ ರೂಪಾಯಿ ಬದಲಾಯಿಸಿಕೊಳ್ಳುತ್ತಾನೆ. ಹೀಗೆ ಹಲವು ಬ್ರಾಂಚ್​ಗಳಲ್ಲಿ ಆತ ದಿನಕ್ಕೆ ಎಷ್ಟು ಸಲ ಬೇಕಾದರೂ ಹೋಗಿ ಹಣ ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಚಿಸಿದ ಬ್ಯಾಂಕ್ ಸಿಬ್ಬಂದಿಯೊಬ್ಬರು ಹೇಳುತ್ತಾರೆ. 

ಈಗಾಗಲೇ ಬ್ಯಾಂಕ್ ಸಿಬ್ಬಂದಿಗೆ 20 ಸಾವಿರದ ಒಳಗಿನ ಹಣ ಬದಲಾವಣೆಗೆ ಯಾವುದೇ ಗುರುತು ಹಾಗೂ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ ಪಡೆಯಬಾರದು ಎಂದು ಆರ್​ಬಿಇ ತಿಳಿಸಿದೆ. ಹೀಗಾಗಿ, ಬ್ಯಾಂಕ್​ನಲ್ಲಿಯು ಸಿಬ್ಬಂದಿ 10 ಗುಲಾಬಿ ನೋಟು ಕೊಟ್ಟರೆ, ತಮ್ಮ ಬಳಿ ಇರುವ 10 ಸಾವಿರ ರೂಪಾಯಿಗಳ ಎರಡು ಕಟ್ಟನ್ನ ನೀಡುತ್ತಿದ್ಧಾರೆ.  ಈ ಪ್ರಕ್ರಿಯೆಯಲ್ಲಿ ಸಾಮಾನ್ಯರು ತಮ್ಮ ಬಳಿ ಇರುವ ನೋಟುಗಳನ್ನ ಬದಲಾಯಿಸಿಕೊಳ್ಳುತ್ತಿದ್ಧಾರೆ. ಇದೇ ಸಂದರ್ಭದಲ್ಲಿ ಕೆಲವರು ಕೋಟಿಕುಳಗಳ ಗುಲಾಬಿ ನೋಟುಗಳನ್ನ ಹೀಗೆ ಬ್ಯಾಂಕ್​ಗೆ ದಿನವಿಡಿ ಹೋಗಿ ಬಂದು, ಬದಲಾಯಿಸಿಕೊಡುತ್ತಿದ್ದಾರೆ. 

ಇದು ಕಪ್ಪುಹಣ ಪತ್ತೆ ಹಚ್ಚುವ ಉದ್ದೇಶವನ್ನ ಬುಡಮೇಲು ಮಾಡುತ್ತದೆ. ಹಾಗಾದರೆ, ಕೇವಲ ಗುಲಾಬಿ ನೋಟುಗಳನ್ನ ವಾಪಸ್ ಪಡೆಯುವುದಷ್ಟೆ ಕೇಂದ್ರದ ನಿರ್ಧಾರವಾಗಿದ್ಯಾ ಎಂಬ ಚರ್ಚೆ ಜನರಲ್ಲಿ ನಡೆಯುತ್ತಿದೆ.