ಮೆಡಿಕಲ್ ಕಾಲೇಜ್ ಬಳಿ ಪುಟ್​ಪಾತ್ ಮೇಲೆ ಮಲಗಿದ್ದ ಅಪರಿಚಿತ ಸಾವು!

An unidentified person, who was sleeping near Shivamogga Medical College, died. Meggan Hospital, Shivamogga News,

ಮೆಡಿಕಲ್ ಕಾಲೇಜ್ ಬಳಿ ಪುಟ್​ಪಾತ್ ಮೇಲೆ ಮಲಗಿದ್ದ ಅಪರಿಚಿತ ಸಾವು!

SHIVAMOGGA NEWS / ONLINE / Malenadu today/ Nov 22, 2023 NEWS KANNADA

Shivamogga|  Malnenadutoday.com |   ಶಿವಮೊಗ್ಗ ನಗರದ ಮೆಡಿಕಲ್ ಕಾಲೇಜ್ ಎದುರಿನ ಪುಟ್‍ಪಾತ್‍ನಲ್ಲಿ ಸುಸ್ತಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 


READ :ಬನಶಂಕರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೂರು ಮೂರು ಚಿರತೆಗಳು!  



ಮೃತರು ಸುಮಾರು 5 ಅಡಿ 10 ಇಂಚು ಎತ್ತರ, ಕಪ್ಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ

ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು, 01 ಇಂಚು ಉದ್ದದ ಕಪ್ಪುಬಿಳಿ ಮಿಶ್ರಿತ ಕುರುಚಲು ಗಡ್ಡ,  ಮೃತನ ಬಲಗೈನ ಮುಂಗೈನ ಒಳಭಾಗದಲ್ಲಿ ಅಮ್ಮ ಕಾವೇರಿ ಎಂಬ ಹಚ್ಚೆ ಗುರುತು ಇದೆ. 

ತಿಳಿ ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಚಡ್ಡಿ ಧರಿಸಿದ್ದಾರೆ. ಈ ಸಂಬಂಧ  ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9611761255 ನ್ನು ಸಂಪರ್ಕಿಸಬಹುದೆಂದು ಪೊಲೀಸ್ ಇಲಾಖೆ ತನ್ನ  ಪ್ರಕಟಣೆಯಲ್ಲಿ ತಿಳಿಸಿದೆ.