ಎಷ್ಟೇ ಆದ್ರೂ ದರ್ಶನ್​ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..!

ಮನಸ್ಸಿನಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನು ನೇರವಾಗಿ ಹೇಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಳ್ತಾನೆ ಇದ್ದಾರೆ. ಅವರು ಬಳಸುವ ಅವಾಚ್ಯ ಶಬ್ದಗಳೇ ಅವರಿಗೆ ಮುಳುವಾಗುತ್ತಿದೆ.

ಎಷ್ಟೇ ಆದ್ರೂ ದರ್ಶನ್​ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..!
story about d boss darshan
ಎಷ್ಟೇ ಆದ್ರೂ ದರ್ಶನ್​ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..!
ಎಷ್ಟೇ ಆದ್ರೂ ದರ್ಶನ್​ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..!

ಮನಸ್ಸಿನಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನು ನೇರವಾಗಿ ಹೇಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಳ್ತಾನೆ ಇದ್ದಾರೆ. ಅವರು ಬಳಸುವ ಅವಾಚ್ಯ ಶಬ್ದಗಳೇ ಅವರಿಗೆ ಮುಳುವಾಗುತ್ತಿದೆ. ಆದ್ರೆ ದರ್ಶನ್ ಗೂ ಒಂದು ಒಳ್ಳೆಯ ಮನಸ್ಸಿದೆ ಎಂಬುದನ್ನು ಎಲ್ಲರಿಗೂ ಗೊತ್ತಿದ್ದರೂ, ಅವರನ್ನು ಪರೋಕ್ಷವಾಗಿ ವಿರೋಧಿಸಿಕೊಂಡೇ ಬರುತ್ತಿರುವ ವರ್ಗವೊಂದಿದೆ. ಹಾಲು ಮಾರಿ ಜೀವನ ಸಾಗಿಸುತ್ತಿದ್ದ ಒಬ್ಬ ಹುಡುಗ ಸಿನಿಮಾ ರಂಗದಲ್ಲಿ ಉತ್ತುಂಗವಾಗಿ ಬೆಳೆದು ನಿಂತಿರುವುದು ಸಾಧಾರಣ ವಿಚಾರವೇನಲ್ಲ. ದರ್ಶನ್ ರನ್ನು ಹಿಂದಿಕ್ಕುವ ಭರದಲ್ಲಿ ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳು ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ದರ್ಶನ್ ಮತ್ತು ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಡುವಿನ ಶೀತಲ ಸಮರ..ಆಗ್ಗಾಗ್ಗೆ ತಾರಕ್ಕೇರುತ್ತಿದೆ. ಡಿಬಾಸ್ ಹೇಳಿದ್ದೇ ವೇದ ವಾಕ್ಯ ಎಂಬಂತೆ ದರ್ಶನ್ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ದರ್ಶನ್ ಮೇಲೆ ಚಪ್ಪಲಿ ತೂರಿ ಬಂದಾಗಲೂ ಬಾಸ್ ನೀಡಿದ ಆದೇಶದಂತೆ ಅಭಿಮಾನಿಗಳು ಶಾಂತಿ ಮೆರೆದಿದ್ದಾರೆ. ಹಾಗೇ ನೋಡಿದ್ರೆ...ಈ ತಪ್ಪಲಿ ತೂರಿದ ಪ್ರಕರಣ ರಾಜ್ಯದಲ್ಲಿ ಕೋಲಾಹಲವನ್ನೇ ಎಬ್ಬಿಸಬೇಕಿತ್ತು. ಆದ್ರೆ ದರ್ಶನ್ ಅದಕ್ಕೆ ಅವಕಾಶ ನೀಡಲಿಲ್ಲ. ಹೌದು ಕೆಲವರು ನೇರವಾಗಿ ನಿಷ್ಠೂರವಾಗಿ ಅವಾಚ್ಯವಾಗಿ ಮಾತನಾಡುತ್ತಾರೆ. ಇದೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತೆ..ಘನತೆಯನ್ನು ಕುಂದಿಸುತ್ತೆ.

ದರ್ಶನ್ ದಾಂಪತ್ಯ ಜೀವನದ ಬಿರುಕಿನಿಂದ ಹಿಡಿದು..ಅದೃಷ್ಟ ದೇವತೆ ವಿಚಾರವಾಗಿ ಮಾತನಾಡಿದ ಹೇಳಿಕೆಗಳೆಲ್ಲವೂ ವಿವಾದವನ್ನು ಸೃಷ್ಟಿಸಿದೆ. ಇದರ ನಡುವೆ ಡಿ ಬಾಸ್ ಮಾದ್ಯಮಗಳ ಬಗ್ಗೆ ತುಚ್ಯವಾಗಿ ಮಾತನಾಡಿರುವುದು ಹೆಚ್ಚು ಸದ್ದು ಮಾಡಿದೆ. ಇಡೀ ಮಾಧ್ಯಮ ಲೋಕವೇ ಡಿ ಬಾಸ್ ಸುದ್ದಿಯನ್ನು ಪ್ರಕಟಿಸದಿರಲು ಶಪಥ ಮಾಡಿವೆ. ದರ್ಶನ್ ಒಳ್ಳೆ, ಕೆಟ್ಟ ವಿಚಾರಗಳು ಟಿವಿ ಹಾಗು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿಲ್ಲ. ಇಂತಹ  ಕಠೋರ ನಿರ್ದಾರವನ್ನು ಮಾದ್ಯಮ ಲೋಕ ಎಂದಿಗೂ ಇಷ್ಟು ದಿನಗಳ ಕಾಲ ತಳೆದಿರಲಿಲ್ಲ. ಟಿವಿ ಪತ್ರಿಕೆಗಳ ಎಲ್ಲಾ ಎಡಿಟರ್ಸ್ ಗಳು ಪರೋಕ್ಷವಾಗಿ ದರ್ಶನ್ ಗೆ ಬಹಿಷ್ಕಾರ ಹಾಗಿದೆ.

 ದರ್ಶನ್ ಅಹಂಕಾರಿಯೋ  ಅಥವಾ ಸ್ವಾಭಿಮಾನಿಯೋ ಎಂಬುದನ್ನು ದರ್ಶನ್ ಒಳಗಿರುವ ಮತ್ತೊಬ್ಬ ದರ್ಶನ್ ಹೇಳಬೇಕು. ಅವರು ಅಹಂಕಾರಿ ಎಂದು ಸಮಾಜದ ಒಂದು ಭಾಗ ಬೊಟ್ಟು ಮಾಡಿ ತೋರಿಸುತ್ತಿದೆ. ಈ ಅಪವಾದದ ಪೊರೆ ಕಳಚಬೇಕು. ಡಿಬಾಸ್ ಮಾಧ್ಯಮಗಳನ್ನು ಕಡೆಗಣಿಸಬಾರದು. ಮಾದ್ಯಮದವರ ಸಹವಾಸವೇ ಬೇಡ ಎಂದು ದರ್ಶನ್ ಸೋಷಿಯಲ್ ಮೀಡಿಯವನ್ನು ಅಸ್ತ್ರ ಮಾಡಿಕೊಂಡು ತಮ್ಮ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಸಿನಿಮಾ ಕ್ರಾಂತಿ ಹೆಚ್ಚು ಸದ್ದು ಮಾಡುತ್ತಿದೆ. ಇದು ಡಿಬಾಸ್ ಗೆ ಯಶಸ್ಸು ನೀಡುವ ಭರವಸೆ ನೀಡಿದೆ. ಯಾಕೆಂದ್ರೆ ಸೋಷಿಯಲ್ ಮೀಡಿಯಾ ಮೂಲಕವೇ ಕ್ರಾಂತಿಯ ಸಿನಿಮಾ ರಿಲೀಸ್ ಮಾಡಿ ಪತ್ರಿಕಾರಂಗಕ್ಕೆ ಠಕ್ಕರ್ ಕೊಟ್ಟಿದ್ದಾರೆ ದರ್ಶನ್. ಸೋಷಿಯಲ್ ಮೀಡಿಯಾ ಮೂಲಕವೇ ಸಹಸ್ರಾರು ಅಭಿಮಾನಿಗಳು ಸೇರುವಂತೆ ಮಾಡಿದ್ದಾರೆ.

ಮಾದ್ಯಮ ಪ್ರಚಾರವಿಲ್ಲದೆ ಇಷ್ಟೊಂದು ಜನರನ್ನು ಸಾಮಾಜಿಕ ಜಾಲತಾಣದ ಮೂಲಕ ತಲುಪ ಬಹುದಾದ್ರೆ..ಟಿವಿ ಚಾನಲ್ ಗಳು ಯಾಕೆ ಬೇರು..ಅವರಿಗೆ ಜಾಹಿರಾತು ಏಕೆ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ದರ್ಶನ್ ಈ ವ್ಯವಸ್ಥೆಯಲ್ಲಿ  ಸಕ್ಸಸ್ ಆಗಿದ್ದೇ ಆದಲ್ಲಿ.ಸೋಷಿಯಲ್ ಮೀಡಿಯಾನೇ ಸ್ಟ್ರಾಂಗು ಗುರು ಎಂದು ಹೇಳಬೇಕಾಗುತ್ತೆ. ಆದ್ರೆ ಸಮಾಜದಲ್ಲಿ ಪತ್ರಿಕಾ ರಂಗವೇ ಶಕ್ತಿಯುತವಾಗಿರಬೇಕು. ಸೋಷಿಯಲ್ ಮೀಡಿಯಾವೇ ವೆಪನ್ ಆದ್ರೆ ಅದು ಪತ್ರಿಕಾ ರಂಗಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗುತ್ತದೆ. ಅದಕ್ಕೆ ಅವಕಾಶ ನೀಡಬಾರದು.

 

ದರ್ಶನ್ ಗೆ ಚಪ್ಪಲಿ ತೂರಿದ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚು ಮೈಲೇಜ್ ಪಡೆಯುತ್ತಿದೆ.ದರ್ಶನ್ ಅಭಿಮಾನಿಗಳ ಪಿತ್ತ ನೆತ್ತಿಗೇರಿದೆ.ಆದ್ರೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಸುಮ್ಮನಿರುವಂತೆ ಹೇಳಿರುವುದು ಅವರ ಒಳ್ಳೆಯ ನಡೆ. ಅಭಿಮಾನಿಗಳು ಕೂಡ ದರ್ಶನ್ ಮಾತಿಗೆ ಜುಪ್ಪೆಂದಿಲ್ಲ..ಮೌನಕ್ರಾಂತಿಗೆ ಮುಂದಾಗಿರುವ ದರ್ಶನ್, ಕನ್ನಡ ಮಾದ್ಯಮ ಲೋಕದಿಂದ ದೂರ ಉಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸೋಷಿಯಲ್ ಮೀಡಿಯಾ ಮೂಲಕ ದರ್ಶನ್ ಇಂದು ಕ್ರಾಂತಿ ಮಾಡಿರಬಹುದು.ಆದ್ರೆ ಅವರು ಸಿನಿಮಾ ರಂಗದಲ್ಲಿ ಅಂಬೆಗಾಲಿಡುವ ಸಂದರ್ಭದಲ್ಲಿ ಎತ್ತಿ ಹಾಡಿಸಿದ್ದು ಇದೇ ಪತ್ರಿಕಾ ರಂಗ ಎಂದು ನೋವಿನಿಂದ ಹೇಳಬೇಕಾಗುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಟಿವಿಗಳಲ್ಲಿ ದರ್ಶನ್ ಹಾಡಿಹೊಗಳಿರುವ ಹಲವು ಎಪಿಸೋಡ್ ಗಳು ಯು ಟ್ಯೂಬ್ ಗಳಿವೆ. ಎನೇ ಆಗಲಿ ಡಿಬಾಸ್ ಕೂಡ ಕೊಂಚ ಬೆಂಡ್ ಆಗಬೇಕು. ಮಾದ್ಯಮದವರು ಕೂಡ ಕೊಂಚ ತಗ್ಗಬೇಕು...ದರ್ಶನ್ ಸುದ್ದಿಗಳನ್ನು ಪ್ರಕಟಿಸಬೇಕು. ಎಷ್ಟೇ ಆದ್ರೂ ದರ್ಶನ್ ಕನ್ನಡದ ನಮ್ ಹುಡುಗ.ಬಡವರ ಮಕ್ಕಳು ಬೆಳಿ ಬೇಕ್ ಸಾರ್