KARNATAKA NEWS/ ONLINE / Malenadu today/ Aug 30, 2023 SHIVAMOGGA NEWS
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ಪ್ರಯಾಣಿಕರ ವಿಮಾನ ಹಾರಾಟಕ್ಕೆ ಸಿದ್ದತೆ ಭರದಿಂದ ಸಾಗಿದೆ. ಈ ನಡುವೆ ಆ.31ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟದ ಸಲುವಾಗಿ ಎರಡು ಇಂಡಿಗೋ ಬಸ್ಗಳು ವಿಮಾನ ನಿಲ್ದಾಣಕ್ಕೆ ಬಂದಿದೆ.
ಟರ್ಮಿನಲ್‌ನಿಂದ ವಿಮಾನದವರೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಹಾಗೂ ವಿಮಾನದಿಂದ ಇಳಿದ ಪ್ರಯಾಣಕರನ್ನು ಟರ್ಮಿನಲ್ವರೆಗೂ ಕರೆತರಲು ಈ ಬಸ್ಗಳು ಬಳಕೆಯಾಗಲಿದೆ. ಇಂಡಿಗೋ ಸಂಸ್ಥೆ ತನ್ನ ಸಂಸ್ಥೆಯ ಬ್ರಾಡಿಂಗ್ ಗಾಗಿಯು ಈ ಬಸ್ಗಳನ್ನು ಬಳಸಿಕೊಂಡಿದೆ.
AIRPORT ನೊಳಗೆ ಚೆಕ್ ಇನ್ ಆದ ನಂತರ ಪ್ರಯಾಣಿಕರು ಟರ್ಮಿನಲ್‌ನಿಂದ ವಿಮಾನದವರೆಗೆ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರನ್ನ ವಿಮಾನದವರೆಗೂ ಕರೆದುಕೊಂಡು ಹೋಗಲು ಈ ಇಂಡಿಗೋ ಬಸ್ಗಳನ್ನು ಬಳಸಿಕೊಳ್ಳಲಾಗುತ್ತದೆ. ವಿಮಾನದಲ್ಲಿ ಬಂದಿಳಿಯುವವರನ್ನು ಟರ್ಮಿನಲ್‌ವರೆಗೆ ಕರೆದುಕೊಂಡು ಬರಲು ಕೂಡ ಇದೆ ಬಸ್ (Indigo Bus) ಬಳಕೆಯಾಗಲಿದೆ.
ಆಟೋಮ್ಯಾಟಿಕ್ ಡೋರ್ , ಎಸಿ ಹಾಗೂ ಎರಡು ಬದಿಯಲ್ಲಿಯು ಹತ್ತಿ ಇಳಿಯಲು ಈ ಬಸ್ನಲ್ಲಿ ಅವಕಾಶವಿದ್ದು, ವಿಶೇಷವಾಗಿ ಈ ಬಸ್ನ್ನು ರೂಪಿಸಲಾಗಿದೆ.
ಇನ್ನಷ್ಟು ಸುದ್ದಿಗಳು
ಗುದ್ದಲಿ ಪೂಜೆಗೆಂದು ವಡ್ನಾಳ್ಗೆ ಹೋಗಿ ಮನೆಗೆ ವಾಪಸ್ ಬಂದಾಗ ಮಾಲೀಕರಿಗೆ ಎದುರಾಗಿತ್ತು ಶಾಕ್!
JOB NEWS / ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನ
