SC & SC ಮೀಟಿಂಗ್ ಕರೆದ ಎಸ್​ಪಿ ಮಿಥುನ್ ಕುಮಾರ್! ಕಮಲಮ್ಮ ಕೊಲೆ ಕೇಸ್ , ಚೋರಡಿ ಬಸ್ ಆಕ್ಸಿಡೆಂಟ್ ವಿಚಾರ ಸೇರಿದಂತೆ, 8 ಮಹತ್ವದ ಸೂಚನೆ !

SP Mithun Kumar calls SC & SC meeting Kamalamma murder case, Choradi bus accident case, 8 important instructions

SC  & SC  ಮೀಟಿಂಗ್ ಕರೆದ ಎಸ್​ಪಿ ಮಿಥುನ್ ಕುಮಾರ್! ಕಮಲಮ್ಮ ಕೊಲೆ ಕೇಸ್ ,  ಚೋರಡಿ ಬಸ್ ಆಕ್ಸಿಡೆಂಟ್ ವಿಚಾರ ಸೇರಿದಂತೆ,   8 ಮಹತ್ವದ ಸೂಚನೆ !

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS 

ನಿನ್ನೆ ದಿನ ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಎಸ್​ಪಿ  ಮಿಥುನ್ ಕುಮಾರ್ ಜಿ.ಕೆ  ನೇತೃತ್ವದಲ್ಲಿ  ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳ ಸಭೆಯನ್ನು ನಡೆಸಲಾಗಿದೆ. ಈ ವೇಳೆ ಅಲ್ಲಿ ಸಮುದಾಯದ ಕುಂದು ಕೊರತೆಗಳನ್ನು ಆಲಿಸಿದರು. ಅಲ್ಲದೆ 8 ಪ್ರಮುಖ ಸೂಚನೆಗಳನ್ನ ನೀಡಿದ್ಧಾರೆ.  

1) ಪ್ರತೀ ತಿಂಗಳ 2ನೇ ಭಾನುವಾರದಂದು ಪೊಲೀಸ್ ಠಾಣಾ ಮಟ್ಟದಲ್ಲಿ ಮತ್ತು 4ನೇ ಭಾನುವಾರದಂದು ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಭೆಯನ್ನು ಈಗಾಗಲೇ ನಡೆಸುತ್ತಿದ್ದು, ಕುಂದುಕೊರತೆಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುವುದು ಎಂದರು

2) ಕೇವಲ ಶಿಕ್ಷಣದ ಮಾರ್ಗದಿಂದ ಮಾತ್ರವೇ ಸಮಾಜದಲ್ಲಿ ಮೇಲೆ ಬರಲು ಸಾಧ್ಯವಿದ್ದು, ಯಾವುದೇ ಉನ್ನತ ಸ್ಥಾನಕ್ಕೆ ಹೋಗಬೇಕಾದರೆ ಅದಕ್ಕೆ ಮೂಲವು ಶಿಕ್ಷಣವೇ ಆಗಿರುತ್ತದೆ. ಆದ್ದರಿಂದ ಎಲ್ಲರಿಗೂ ಶಿಕ್ಷಣ ದೊರಕಬೇಕು, ಈ ಮೂಲಕ ಸದೃಡ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆಂದು ತಿಳಿಸಿದರು. 

3) ಚೋರಡಿ ಗ್ರಾಮದ ಬಸ್ ಅಫಘಾತವಾದ ಸಂದರ್ಭದಲ್ಲಿ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ, ಗಾಯಾಳುಗಳ ಜೀವ ರಕ್ಷಿಸುವಲ್ಲಿ ಮತ್ತು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದ್ದು, ಗ್ರಾಮಸ್ಥರ ಈ ಸೇವಾ ಮನೋಭಾವಕ್ಕೆ ಪೊಲೀಸ್ ಇಲಾಖಾ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.  

4) ಸಭೆಯಲ್ಲಿ ಹಾಜರಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳು ಮಾತನಾಡಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸಮರ್ಥ ಮತ್ತು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ ಮತ್ತು ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳ ಗಾಂಜಾ ಮಾರಾಟ ಪ್ರಕರಣ ಮತ್ತು ತುಂಗಾನಗರದ ಕೊಲೆ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಹಚ್ಚಿರುವುದರಿಂದ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ಬಂದಿರುತ್ತದೆ ಎಂದು ತಿಳಿಸಿ, ಎಲ್ಲರ ಪರವಾಗಿ ಅಭಿನಂದನೆಗಳನ್ನುಸಲ್ಲಿಸಿದರು. 

5) SC & ST ಕಾಯ್ದೆಯಡಿ ಪ್ರಕರಣಗಳು ದಾಖಲಾಗುವ ಸಂದರ್ಭದಲ್ಲಿ ಪ್ರತಿ ದೂರನ್ನು ನೀಡುತ್ತಿದ್ದಾರೆಂದು ತಿಳಿಸಿದ್ದು, ಈ ಬಗ್ಗೆ ಮಾತನಾಡಿ ಎರಡೂ ಪ್ರಕರಣಗಳ ತನಿಖೆಯನ್ನು ಪಾರದರ್ಶಕ ರೀತಿಯಲ್ಲಿ ನಡೆಸಿಲಿದ್ದು, ತನಿಖೆಯಲ್ಲಿ ಕಂಡು ಬರುವ ಅಂಶಗಳ ಆಧಾರದ ಮೇಲೆ ಘನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುತ್ತೇವೆಂದು ತಿಳಿಸಿರುತ್ತಾರೆ. 

6) ಹೆಣ್ಣು ಮಕ್ಕಳಿಗೆ ಪೋಕ್ಸೋ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಕೋರಿದ್ದು, ವಿಧ್ಯಾರ್ಥಿಗಳಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸ್ ಇಲಾಖಾ ವತಿಯಿಂದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಎಂಬ ಕಾರ್ಯಕ್ರಮವನ್ನು ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಆಯೋಜಿಸಿದ್ದು,  ಶಾಲಾ ಮಕ್ಕಳಿಗೆ ಒಳಾಂಗಣ ಮತ್ತು ಹೊರಾಂಗಣ ತರಬೇತಿ ನೀಡುವ ಮುಖಾಂತರ ಮಾನಸಿಕ ಮತ್ತು ದೈಹಿಕ ಸದೃಡತೆ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ  ಮತ್ತು  ವಸತಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕಾನೂನಿನ ಬಗ್ಗೆ  ಅರಿವು ಮೂಡಿಸುತ್ತಿದ್ದು, ಅವರುಗಳಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಮತ್ತು ERSS – 112  ಸಹಾಯವಾಣಿಗೆ ಕರೆಮಾಡಿ ಸಹಾಯ ಪಡೆಯಬಹುದಾಗಿರುತ್ತದೆ. 

7) ಶಿವಮೊಗ್ಗ  ನಗರದ ಸುಗಮ ಸಂಚಾರ ವ್ಯವಸ್ಥೆ ಸಲುವಾಗಿ ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಗರ ಪ್ರದೇಶದ ಆಯ್ದ ರಸ್ತೆಗಳಲ್ಲಿ ನಿಷೇಧಿಸಿದ್ದು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಅಗತ್ಯವಿದ್ದ ಕಡೆಗಳಲ್ಲಿ  ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. 

8) ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿಸಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯು ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.


ಹಿಂದೂ ಹರ್ಷನ ಕೊಲೆ ಪ್ರಕರಣ! ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್! ಇಲ್ಲಿದೆ ಓದಿ ಪೂರ್ತಿ ವಿವರ!

ಬೆಂಗಳೂರು: ಶಿವಮೊಗ್ಗದ ಸೀಗೆಹಟ್ಟಿಯ ಭಜರಂಗದಳ ಕಾರ್ಯಕರ್ತ ಹರ್ಷ ಯಾನೆ ಹಿಂದೂ ಹರ್ಷನ ಹತ್ಯೆ ಪ್ರಕರಣದ ಆರೋಪಿ ಫರಾಜ್ ಪಾಷಾ (26) ಸಲ್ಲಿಸಿದ್ದ ಜಾಮೀನು ಅರ್ಜಿಯ ಮೇಲ್ಮನವಿಯು ಸಹ ಹೈಕೋರ್ಟ್​  ನಲ್ಲಿ ವಜಾಗೊಂಡಿದೆ. ಎನ್​ಐಎ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಕಾನೂನು ಬಾಹಿರ ಚುಟುವಟಿಕೆಗಳ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಅರ್ಜಿದಾರ ಆರೋಪಿಯವರ ವಿರುದ್ಧ ಹೊರಿಸಲಾಗಿರುವ ಅಪರಾಧಗಳು ನಿಸ್ಸಂದೇಹವಾಗಿ ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುವಂತಿವೆ. ಜತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು. 

ಪ್ರಕರಣದ ತನಿಖಾ ವರದಿ ಪ್ರಕಾರ,  ಅರ್ಜಿದಾರರು ಕೋಮುವಾದಿಗಳಂತೆ ಕಂಡುಬರುತ್ತಾನೆ. ವೈಯಕ್ತಿಕ ದ್ವೇಷ ಇಲ್ಲದಿದ್ದರೂ ಭಯ ಹುಟ್ಟಿಸುವ ಉದ್ದೇಶಕ್ಕಾಗಿ  ಹರ್ಷನನ್ನು ಹತ್ಯೆಗೆ ಆಯ್ದುಕೊಳ್ಳಲಾಗಿದೆ.  ಮೇಲ್ಮನವಿದಾರನ ವಯಸ್ಸು ಚಿಕ್ಕದು ಮತ್ತು ಆತನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಜಾಮೀನು ನೀಡಲು ಪರಿಗಣಿಸಬೇಕಾದ ಅಂಶವಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ ಪ್ರಕರಣದ ಆರು ಆರೋಪಿಗಳು ಕೃತ್ಯದಲ್ಲಿ ಪಾಲ್ಗೊಂಡಿದ್ದರೆ, ಏಳನೇ ಆರೋಪಿ ಫರಾಜ್ ಪಾಷಾ ಆರೋಪಿಗಳ ಸಂಚನ್ನು ತಿಳಿದಿದ್ದರಷ್ಟೆ ಅಲ್ಲದೆ, ಹರ್ಷನನ್ನು ಹಿಂಬಾಲಿಸಿ ಮಾಹಿತಿ ನೀಡಿದ್ದರು. ಇವರ ಮಾಹಿತಿಯಿಂದಲೇ ಆರೋಪಿಗಳ ಕೃತ್ಯ ಕಾರ್ಯಗತಗೊಳಿಸಲು ಸಾಧ್ಯವಾಗಿದೆ ಎಂದು ಕೋರ್ಟ್ ಹೇಳಿದೆ. 

ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಪ್ರತಿನಿಧಿಸುವ ಪಿ.ಪ್ರಸನ್ನ ಕುಮಾರ್ ಅವರು  ಆರೋಪಿಗಳ ವಿರುದ್ಧದ ಚಾರ್ಜ್ಶೀಟ್ನಲ್ಲಿ ಕಂಡುಬರುವ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾದರೆ, ಜಾಮೀನು ನೀಡಲು ಸಾಧ್ಯವಿಲ್ಲ ಮತ್ತು ಆರೋಪಿಯ ವಯಸ್ಸು, ಪೂರ್ವಾಪರಗಳ ಅನುಪಸ್ಥಿತಿ ಮುಂತಾದ ಇತರ ಅಂಶಗಳು ನ್ಯಾಯಾಲಯದ ಮೇಲೆ ಪ್ರಭಾವ ಬೀರಬಾರದು ಎಂದು ಸಲ್ಲಿಸಿದ್ದ ವಾದವನ್ನು ಹೈಕೋರ್ಟ್ ಸಮ್ಮತ್ತಿಸಿದ್ದು, ಈ ಹಿಂದೆ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.